ನವದೆಹಲಿ: ಭಾರತೀಯ ಪ್ರಜೆಯನ್ನು ಬೋರ್ಡರ್ ನಲ್ಲಿ ಚೀನಾ ಅಪಹರಿಸಿರುವ ಬಗ್ಗೆ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ 17 ವರ್ಷದ ಮಿರಾಮ್ ಟ್ಯಾರೋನ್ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಪಹರಿಸಿದೆ.
ಯುವಕರ ತಂಡ ಬೇಟೆಯಾಡುತ್ತಿದ್ದಾಗ ಬೇಟೆಗಾರರ ಗುಂಪಿನಲ್ಲಿದ್ದ ಮಿರಾಮ್ ಟ್ಯಾರೋನ್ ನನ್ನು ಅಪಹರಿಸಿರುವ ಬಗ್ಗೆ ಜಿಲ್ಲಾ ಅಧಿಕಾರಿಗಳು ದೃಢಪಡಿಸಿದ್ದಾರೆ..
ನಾವು ವಿಷಯ ತಿಳಿದ ತಕ್ಷಣ, ನಾವು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೇನೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದಷ್ಟು ಬೇಗ ಯುವಕರನ್ನು ರಕ್ಷಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಅರುಣಾಚಲ-ಪೂರ್ವದ ಬಿಜೆಪಿ ಸಂಸದ ತಪಿರ್ ಗಾವೊ ಅವರು ಘಟನೆ ಬಗ್ಗೆ ಟ್ವೀಟ್ ಮಾಡಿ, ಬಿಡುಗಡೆಗೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.