ಲಡಾಖ್: ಪಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿರುವ ಚೀನಾ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪೂರ್ವ ಲಡಾಖ್‌ನಲ್ಲಿರುವ ಪಾಂಗಾಂಗ್ ಸರೋವರದ ಮೇಲೆ ಚೀನಾ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ಭೂ-ಗುಪ್ತಚರ ತಜ್ಞ ಡೇಮಿಯನ್ ಸೈಮನ್ ಅವರ ಉಪಗ್ರಹ ಚಿತ್ರಗಳು ಸೂಚಿಸುತ್ತಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಚೀನಾದ ಭೂಪ್ರದೇಶದೊಳಗೆ ಬರುವ ಸರೋವರದ ಒಂದು ಭಾಗಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಯು ಸರೋವರದ ಎರಡೂ ದಡಗಳನ್ನು ಸಂಪರ್ಕಿಸುತ್ತದೆ ಮತ್ತು ಚೀನಾಕ್ಕೆ ಸೈನಿಕರು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ಚಲಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಸೈಮನ್ ಅವರ ಟ್ವೀಟ್ ಚಿತ್ರದ ಪ್ರಕಾರ ಸರೋವರದ ಕಿರಿದಾದ ಭಾಗದಲ್ಲಿ ಸೇತುವೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ ಎಂದು ತೋರಿಸುತ್ತದೆ. ಈ ಸೇತುವೆಯನ್ನು ಪೂರ್ಣಗೊಳಿಸುವುದರೊಂದಿಗೆ ವಿವಾದಾತ್ಮಕ ಪ್ರದೇಶಕ್ಕೆ ಹೆಚ್ಚುವರಿ ಸೈನಿಕರನ್ನು ಸೇರಿಸಲು ಚೀನಾವು ಬಹು ಮಾರ್ಗಗಳನ್ನು ಹೊಂದಿದಂತಾಗುತ್ತದೆ.2020 ರಿಂದ ಭಾರತ ಮತ್ತು ಚೀನಾದಿಂದ 50,000 ಕ್ಕೂ ಹೆಚ್ಚು ಸೈನಿಕರನ್ನು ಪೂರ್ವ ಲಡಾಖ್‌ನಲ್ಲಿ ಡೆಪ್ಸಾಂಗ್ ಬಯಲು ಪ್ರದೇಶದಿಂದ ಉತ್ತರಕ್ಕೆ ಮತ್ತು ಡೆಮ್‌ಚೋಕ್ ಪ್ರದೇಶಕ್ಕೆ ನಿಯೋಜಿಸಲಾಗಿದೆ.

ಜೂನ್ 2020 ರಲ್ಲಿ ಗಾಲ್ವಾನ್ ನದಿ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು. ತಮ್ಮ ನಾಲ್ವರು ಸೈನಿಕರು ಮರಣಹೊಂದಿದ್ದಾರೆ ಎಂದು ಚೀನಾ ಹೇಳುತ್ತದೆ. ಆದರೆ ಭಾರತವು ಚೀನಾದ 40 ಕ್ಕೂ ಹೆಚ್ಚು ಸೈನಿಕರ ಸಾವನಪ್ಪಿದ್ದಾರೆ ಎಂದು ಪ್ರತಿಪಾದಿಸಿದೆ.

ಇನ್ನೊಂದೆಡೆ ಗಾಲ್ವಾನ್‌ನಲ್ಲಿ ಚೀನಾವು ತಮ್ಮ ಧ್ವಜಾರೋಹಣ ನಡೆಸಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಕುರಿತು ಭಾರತೀಯ ಸರ್ಕಾರ ಮೌನ ವಹಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಅದು ಚೀನಾದ ಪ್ರದೇಶ ಎಂದು ಮಿಲಿಟರಿ ಅಧಿಕರಾಗಿಳು ಪ್ರತಿಕ್ರಿಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು