ಪುರುಷರಿಗೂ ಸಿಗಲಿದೆ ಚೈಲ್ಡ್‌ ಕೇರ್‌ ಲೀವ್‌!

CHILD CARE LEAVE
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ (27-10-2020): ಪುರುಷರಿಗೂ ಸಿಗಲಿದೆ ಚೈಲ್ಡ್‌ ಕೇರ್‌ ಲೀವ್‌ ಎಂದರೆ ನಂಬ್ತೀರಾ ಹೌದು ಸಿಂಗಲ್‌ ಪೇರೆಂಟ್‌ ಆಗಿರುವ ಪುರುಷರಿಗೆ ಈ ಚೈಲ್ಡ್‌ ಕೇರ್‌ ಲೀವ್‌ ನೀಡಲು ಕೇಂದ್ರ ಸರಕಾರ ಮುಂದಾಗಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇದಾಗಲೇ ಈ ಸೌಲಭ್ಯವಿದ್ದು, ಅದನ್ನೀಗ ಒಂಟಿ ಪುರುಷರಿಗೂ ಅನ್ವಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ನಿಯಮ ಕೇಂದ್ರ ಸರಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ

ಮಕ್ಕಳ ಪೋಷಣೆ ವಿಚಾರದಲ್ಲಿ ಪತಿಗೂ ಪತ್ನಿಯಷ್ಟೇ ಜವಾಬ್ದಾರಿ ಇದೆ. ಇದೇ ಕಾರಣದಿಂದ ಅವರ ಹೊಣೆಯನ್ನು ಗಮನದಲ್ಲಿರಿಸಿ ಅವಕಾಶ ಕಲ್ಪಿಸಲಾಗಿದೆ. ಅವಿವಾಹಿತರು, ವಿಧುರ ಅಥವಾ ವಿಚ್ಛೇದನ ಪಡೆದವರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು