ಬೀದಿಗಿಳಿದ ಮಕ್ಕಳ ಕಳ್ಳಸಾಗಣೆ ಗ್ಯಾಂಗ್| ಬೆಚ್ಚಿಬೀಳಿಸುವ ಸುದ್ದಿ

arrest
Share on facebook
Share on twitter
Share on linkedin
Share on whatsapp
Share on telegram
Share on email
Share on print

ನಾಗ್ಪುರ(30-11-2020): ಪೊಲೀಸರು ಕಾರ್ಯಾಚರಣೆ ನಡೆಸಿ ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ನ ಐದು ಮಹಿಳೆಯರು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ ಮತ್ತು ಬಂಧಿತರಿಂದ ನಾಲ್ಕು ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ.

ನಾಗ್ಪುರ ಪೊಲೀಸರ ಸಾಮಾಜಿಕ ಭದ್ರತಾ ಶಾಖೆ (ಎಸ್‌ಎಸ್‌ಬಿ) ಕಾರ್ಯಾಚರಣೆ ಮಾಡಿದೆ ಎಂದು ಇಲಾಖೆ ತಿಳಿಸಿದೆ.

ಆರು ಮಂದಿ ಆರೋಪಿಗಳನ್ನು ಸುರೇಂದ್ರ ಯಾದವರಾವ್ ಪಟಲೆ, ಅವರ ಪತ್ನಿ ಪೂಜಾ, ಶರ್ಮಿಳಾ ವಿಜಯ್ ಖಾಕ್ಸೆ, ಶೈಲಾ ಮನೋಜ್ ಮಂಚಲ್ವಾರ್, ಲಕ್ಷ್ಮಿ ಅಮರ್ ರಾಣೆ ಮತ್ತು ಮನೋರಮಾ ಆನಂದ್ ಧವಾಲೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ನ್ನು ನಡೆಸುತ್ತಿದ್ದಾರೆ ಎಂಬ ಸುಳಿವಿನ ಆಧಾರದ ಮೇಲೆ, ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಪೊಲೀಸರು ಮಾರುವೇಶದಲ್ಲಿ ಕಳೆದ ವಾರ ಶರ್ಮಿಳಾ ಅವರನ್ನು ಸಂಪರ್ಕಿಸಿ, ಅವರು ಮಗುವನ್ನು ಖರೀದಿಸಲು ಬಯಸುವ ಶ್ರೀಮಂತ ದಂಪತಿಗಳಂತೆ ನಟಿಸಿದ್ದರು. ಶರ್ಮಿಲಾ ದಂಪತಿಗೆ 2.5 ಲಕ್ಷ ರೂ.ಗೆ ಮಗುವನ್ನು ನೀಡುವುದಾಗಿ ಒಪ್ಪಂದ ಮಾಡಿದ್ದಳು. ಅದರಂತೆ ಪೊಲೀಸರು ಮಗುವನ್ನು ಪಡೆದುಕೊಳ್ಳಲು ತೆರಳಿ ಆಕೆಯನ್ನು ಕೈಯಾರೆ ಹಿಡಿದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು