ಹೊಟೇಲ್ ಗೆ ನುಗ್ಗಿದ ಕಂಟೈನರ್ | ಟೀ ಕುಡಿಯುತ್ತಿದ್ದ ಮೂವರು ಸೇರಿ ನಾಲ್ವರು ದುರ್ಮರಣ

accident
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿಕ್ಕಬಳ್ಳಾಪುರ(26-11-2020): ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ ಕಾರುಗಳಿಗೆ ಡಿಕ್ಕಿ ಹೊಡೆದು ಹೊಟೇಲ್‍ಗೆ ನುಗ್ಗಿದ ಘಟನೆ  ಚದಲಪುರ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಗವಿಗಾನಹಳ್ಳಿಯ ಯಮುನಾಚಾರಿ, ವೆಂಕಟೇಶಪ್ಪ , ನಿತೀಶ್‍ಗೌಡ, ತಮಿಳುನಾಡಿನ ಕಲಂಜಲ್ ಮೃತ ದುರ್ದೈವಿಗಳು. ಇವರಲ್ಲಿ ಮೂವರು ಹೊಟೇಲ್ ನಲ್ಲಿ ಟೀ ಕುಡಿಯುತ್ತಿದ್ದರು.

ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಂಟೈನರ್ ಲಾರಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಹೊಟೇಲ್‍ಗೆ ನುಗ್ಗಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ನಂದಿಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು