ಛತ್ತೀಸ್ ಗಢದಲ್ಲಿ ನಕ್ಸಲರ ದಾಳಿ: 22 ಯೋಧರು ಹುತಾತ್ಮ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಸ್ತಾರ್: ಛತ್ತೀಸ್ ಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಹೋರಾಡುವಾಗ ನಾಪತ್ತೆಯಾದ 22 ಯೋಧರು ಹುತಾತ್ಮರಾಗಿದ್ದಾರೆ ಎಂದು ಸಿಆರ್ ಪಿಎಫ್ ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ಘೋಷಿಸಿದ್ದಾರೆ.

ಸುಕುಮ- ಬಿಜಾಪುರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಕ್ಸಲರು ದಾಳಿ ನಡೆಸಿದ್ದಕ್ಕೆ ಪ್ರತಿದಾಳಿ ನಡೆಸಿದ ಯೋದರು ಎನ್ ಕೌಂಟರ್ ಆರಂಭಿಸಿದ್ದರು. ಗುಂಡಿನ ಚಕಮಕಿಯಲ್ಲಿ 5 ಯೋಧರು ಹುತಾತ್ಮರಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಮೃತಪಟ್ಟಿದ್ದರು.

ದಾಳಿಯ ವೇಳೆ ನಾಪತ್ತೆಯಾಗಿದ್ದ 22 ಯೋಧರು ಹುತಾತ್ಮರಾಗಿದ್ದಾರೆ ಎಂದು ಸಿಆರ್ ಪಿಎಫ್ ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ಘೋಷಿಸಿದ್ದಾರೆ. ಹುತಾತ್ಮರಾದವರಲ್ಲಿ ಸಿಆರ್ ಪಿಎಫ್ ಮತ್ತು ಜಿಲ್ಲಾ ಗಡಿ ರಕ್ಷಣಾ ಪಡೆಯ ಯೋಧರು ಸೇರಿದ್ದಾರೆ.

ನಕ್ಸಲರ ದಾಳಿಯನ್ನು ಖಂಡಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಯೋಧರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು “ಛತ್ತೀಸ್ ಗಢದಲ್ಲಿ ಮಾವೋವಾದಿ ದಂಗೆಯೊಂದಿಗೆ ಹೋರಾಡುತ್ತಿರುವಾಗ ಭದ್ರತಾ ಸಿಬ್ಬಂದಿಯನ್ನು ಕೊಲ್ಲುವುದು ತೀವ್ರ ದುಃಖದ ವಿಷಯವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ. ರಾಷ್ಟ್ರವು ಅವರ ನೋವನ್ನು ಹಂಚಿಕೊಳ್ಳುತ್ತದೆ ಮತ್ತು ಈ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು