ಸಿಎಂ ಬದಲಾವಣೆಗಾಗಿ ದೊಡ್ಡ ಸಂಧಾನ ಮಾಡುತ್ತಿದ್ದಾರೆ ನನಗೂ ಆಮಿಷ ಒಡ್ಡಿದ್ದಾರೆ :ಯತ್ನಾಳ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಸುವರ್ಣಸೌಧ (ಬೆಳಗಾವಿ): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗಾಗಿ ದೊಡ್ಡ ದೊಡ್ಡ ಸಂಧಾನ ಮಾಡುತ್ತಿದ್ದಾರೆ ನಿಜ. ಆದರೆ ಇಂತವರನ್ನು ಒಪ್ಪುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಆಯೋಗ್ಯನ ಜೊತೆ ನಾನು ಸೇರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪರೋಕ್ಷವಾಗಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ತಿರುಗೇಟು ನೀಡಿದರು.

ಬುಧವಾರ ಸಚಿವ ಈಶ್ವರಪ್ಪ, ಯತ್ನಾಳ್, ಮುರುಗೇಶ್ ನಿರಾಣಿ‌ ಸಭೆ ನಡೆಸಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, “ಮುಖ್ಯಮಂತ್ರಿ ಆಗುತ್ತೇನೆಂದು ಯಾರ್ಯಾರೋ‌ ಹಗಲು ಕನಸು ಕಾಣುತ್ತಿದ್ದಾರೆ. ಸೂಟು ಹೊಲಿಸಿಕೊಂಡವರೂ ಇದ್ದಾರೆ. ದೊಡ್ಡವರಿಗೆ ಹಣ ಕೊಟ್ಟಿದ್ದೇನೆ, ರಿಸರ್ವ್ ಇಟ್ಟಿದ್ದೇನೆ ಎನ್ನುತ್ತಿದ್ದಾರೆ. ಆದರೆ ಇಲ್ಲಿ ಅವರ ಆಸೆಗಳು ನಡೆಯಲ್ಲ. ಇಲ್ಲಿ ಇರುವುದು ನರೇಂದ್ರ ಮೋದಿಯವರು. ಇಂತಹ ಆಯೋಗ್ಯರನ್ನು ವರಿಷ್ಠರು ಸಿಎಂ ಮಾಡುವುದಿಲ್ಲ. ಭೋಗದ ವಸ್ತುಗಳನ್ನ ಕೊಡುವವರನ್ನು ಸಿಎಂ ಮಾಡುವದಿಲ್ಲ” ಎಂದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು