ಬೆಂಗಳೂರು(27-11-2020): ಹಾಡಹಗಲೇ ಮನೆಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳಿಯನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆನೆಪಾಳ್ಯ ನಿವಾಸಿ ನಗ್ಮಾ(24) ಬಂಧಿತ ಕಳ್ಳಿ. ಈಕೆಯಿಂದ ಪೊಲೀಸರು 6.46 ಲಕ್ಷ ರೂ. ಬೆಲೆಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈಕೆಯ ಬಂಧನದಿಂದ ಚಂದ್ರಲೇಔಟ್ ಠಾಣೆಯ 3 ಕಳವು ಪ್ರಕರಣಗಳು ಬಹಿರಂಗವಾಗಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಚಂದ್ರಲೇಔಟ್ ಠಾಣೆ ಪೊಲೀಸರು ಆರೋಪಿಗಳಾದ ನಯಾಜ್ಖಾನ್ ಮತ್ತು ಅಪ್ಸರ್ ಅಹಮ್ಮದ್ ಎಂಬವರನ್ನು ಬಂಧಿಸಿದ್ದರು. ಇದೇ ಪ್ರಕರಣದ ಲಿಂಕ್ ಬೆನ್ನತ್ತಿದ ಪೊಲೀಸರು ನಗ್ಮಾಳನ್ನು ಬಂಧಿಸಿದ್ದಾರೆ.