ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ 24 ಸೋಂಕಿತರ ಸಾವು, ಇದು ‘ಸರ್ಕಾರಿ ಕೊಲೆ’ ಎಂದು ಕಾಂಗ್ರೆಸ್ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ನಾಲಾಯಕ್ ಸರ್ಕಾರದ ಅಸಮರ್ಥ ಆಡಳಿತದಿಂದ ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಸೋಂಕಿತರು ಒಂದೇ ರಾತ್ರಿಯಲ್ಲಿ ತೀರಿದ್ದಾರೆ.
ಹಲವು ದಿನಗಳಿಂದಲೂ ಆಕ್ಸಿಜನ್ ಕೊರತೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದರೂ ಸರ್ಕಾರಕ್ಕೆ ಗಂಭೀರ್ಯತೆ ಅರ್ಥವಾಗಿಲ್ಲ ಎಂದು. ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಬರೋಬ್ಬರಿ 24 ಸೋಂಕಿತರು ಸಾವನ್ನಪ್ಪಿದ್ದ ಘಟನೆ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, ಚಾಮರಾಜನಗರದ ಉಸ್ತುವಾರಿ ಮಂತ್ರಿ ಸುರೇಶ್ ಕುಮಾರ್ ಅವರೇ, ಜಿಲ್ಲೆಗೆ ನೀವು ಕಾಲಿಟ್ಟಿದ್ದೀರಾ? ಕುಂದು ಕೊರತೆಗಳ ಬಗ್ಗೆ, ಕೋವಿಡ್ ನಿರ್ವಹಣೆಯ ಬಗ್ಗೆ ಗಮನ ಹರಿಸಿದ್ದೀರಾ? ಆಕ್ಸಿಜನ್ ಕೊರತೆಯಿಂದ ನಿಮ್ಮ ಸಹಾಯಕರೇ ತೀರಿಕೊಂಡಮೇಲೂ ತಾವು ಎಚ್ಚರಗೊಳ್ಳದೆ, ಸರ್ಕಾರದ ಗಮನ ಸೆಳೆಯದೆ ಕುಳಿತಿದ್ದೇಕೆ? ಸೋಂಕಿತರ ಸಾವು ಸೋಂಕಿನಿಂದಾದ ಸಾವಲ್ಲ “ಸರ್ಕಾರಿ ಕೊಲೆ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಇಲ್ಲದೆ ಮೃತಪಟ್ಟ 24 ಸೋಂಕಿತರ ಸಾವಿಗೆ ಸಚಿವ ಸುರೇಶ್ ಕುಮಾರ್ ಹಾಗೂ ಡಾ.ಸುಧಾಕರ್ ಅವರೇ ನೇರ ಹೊಣೆ. ಕೂಡಲೇ ಇಬ್ಬರೂ ಸಚಿವರು ರಾಜಿನಾಮೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿತನ, ಆರೋಗ್ಯ ಸಚಿವರ ನಿರ್ಲಕ್ಷ್ಯ, ಮುಖ್ಯ ಮಂತ್ರಿಗಳ ಕುರುಡುತನ, ಪ್ರಧಾನಿಯ ದುರಾಹಂಕಾರ ಈ ಮಾರಣಹೋಮಕ್ಕೆ ಕಾರಣ.
ಈ ಸಾವುಗಳ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಿರಿ? ಇದು ಸೋಂಕಿನಿಂದಾದ ಸಾವುಗಳಲ್ಲ, ಅವ್ಯವಸ್ಥೆಯ ಸರ್ಕಾರದಿಂದಾದ ಕೊಲೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಾವುಗಳೊ? ಕೊಲೆಯೋ?
“ವ್ಯವಸ್ಥೆ” ಎಚ್ಚರಗೊಳ್ಳಲು ಇನ್ನೆಷ್ಟು ಬಲಿಯಾಗಬೇಕು? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.
“ಈ ಸಾವುಗಳು ಯಡಿಯೂರಪ್ಪ ಸರ್ಕಾರದ ನಿರ್ಲಕ್ಷ್ಯದಿಂದಾದ ಕೊಲೆ. ಆರೋಗ್ಯ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ಈ ಸಾವುಗಳಿಗೆ ತಾವು ನೈತಿಕ ಹೊಣೆ ಹೊತ್ತುಕೊಳ್ಳುತ್ತೀರಾ?” ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಟ್ವೀಟ್ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು