ಬೆಚ್ಚಿಬೀಳಿಸುವ ಸುದ್ದಿ: ಆಹಾರ ಹುಡುಕಿಕೊಂಡು ಚಾಮರಾಜನಗರದಲ್ಲಿ ವೈದ್ಯರಿದ್ದ ಮೆಡಿಕಲ್‌ ಕಾಲೇಜಿನ ಕ್ವಾರ್ಟಸ್ ಗೆ ನುಗ್ಗಿದ ಚಿರತೆ

leoford
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಾಮರಾಜನಗರ(07-01-2021): ಮೆಡಿಕಲ್‌ ಕಾಲೇಜಿನ ಕ್ವಾರ್ಟಸ್​ಗೆ ಚಿರತೆಯೊಂದು ನುಗ್ಗಿರುವ ಬೆಚ್ಚಿಬೀಳಿಸುವ ಘಟನೆ ಚಾಮರಾಜನಗರದ ಹೊರವಲಯದಲ್ಲಿನ ಯಡಬೆಟ್ಟದ ತಪ್ಪಲ್ಲಿನಲ್ಲಿರುವ ಮೆಡಿಕಲ್‌ ಕಾಲೇಜಿನ ಕ್ವಾರ್ಟಸ್​ ನಲ್ಲಿ ನಡೆದಿದೆ.

ನಿನ್ನೆ ವೈದ್ಯರು ವಾಸ‌ ಮಾಡುತ್ತಿರುವ ಕ್ವಾರ್ಟಸ್‌ನ ಮೊದಲ ಮಹಡಿಗೆ ಚಿರತೆ ಬಂದಿದೆ. ಮೆಡಿಕಲ್ ಕಾಲೇಜು ಡೀನ್ ಡಾ.ಸಂಜೀವ್ ಅವರ ಪತ್ನಿ ಚಿರತೆಯನ್ನು ಕಂಡು ಕಿರುಚಾಡಿದ್ದಾರೆ. ಈ ವೇಳೆ ಅಡುಗೆ ಸಿಬ್ಬಂದಿ ಕೂಡ  ಸ್ಥಳದಿಂದ ಓಡಿ ಹೋಗಿದ್ದಾರೆ.

ಈ ವೇಳೆ ವಿಚಲಿತಗೊಂಡ ಚಿರತೆಯೂ ಸಹ ಮಹಡಿಯಿಂದ ಕೆಳಗಿಳಿದು ಓಡಿ ಹೋಗಿದೆ. ಚಿರತೆ ಮಹಡಿಯಿಂದ ಕೆಳಗಿಳಿಯುವ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು, ವೈರಲ್​ ಆಗಿದೆ. ಸಿಸಿಟಿವಿಯಲ್ಲಿ ಚಿರತೆ ವಸತಿ ನಿಲಯದ ಮೊದಲ ಮಹಡಿಯಲ್ಲಿ ರೂಂ ಒಳಗಡೆ ನುಗ್ಗಲು ಪ್ರಯತ್ನಿಸಿರುವುದು ಕೂಡ ಕಂಡು ಬಂದಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು