ಚಾಮರಾಜನಗರ ಆಸ್ಪತ್ರೆಯಲ್ಲಿ ಬಲಿಯಾದವರ ಒಟ್ಟು ಸಂಖ್ಯೆ 34 ರೋಗಿಗಳು; 24 ಅಲ್ಲ! ಮಾಹಿತಿ ಮುಚ್ಚಿಟ್ಟ ಅಧಿಕಾರಿಗಳು..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಒಟ್ಟು ರೋಗಿಗಳ ಸಂಖ್ಯೆ 34; 24 ಅಲ್ಲ ಎಂದು ಶಾಸಕ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ ಶಾಸಕರು, ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮೃತರ ಪಟ್ಟಿಯಲ್ಲಿ ಬರೇ ಇಪ್ಪತ್ತನಾಲ್ಕು ಎಂದು ಹೇಳಲಾಗಿದೆ. ಉಳಿದ ಹತ್ತು ರೋಗಿಗಳು ಮೃತಪಟ್ಟ ಕುರಿತು ದಾಖಲು ಮಾಡಿಯೇ ಇಲ್ಲ. ಒಂದು ಕಡೆಯಿಂದ ಸಚಿವರೂ ಆಮ್ಲಜನಕ ಇಲ್ಲದೇ ಬರೇ ಮೂರು ರೋಗಿಗಳು ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ.

ಸರಕಾರವನ್ನು ದಾರಿತಪ್ಪಿಸಿದ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತಪಟ್ಟವರ ಕುಟುಂಬಗಳಿಗೂ ಸರಕಾರವು ಪರಿಹಾರ ಧನವನ್ನು ವಿತರಿಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು