ಸಿಕ್ಕಿಂನಲ್ಲಿ ಭಾರತದ ಗಡಿಪ್ರವೇಶಿಸಲು ಯತ್ನಿಸಿದ ಚೀನಾ ಪಡೆ| ಘರ್ಷಣೆ, ಹಲವು ಸೈನಿಕರಿಗೆ ಗಾಯ

sikkim
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ (25-01-2021): ಸಿಕ್ಕಿಂನ ನಾತು ಲಾ ಬಳಿ ಭಾರತದ ಗಡಿ ಪ್ರವೇಶಿಸಲು ಚೀನಾ ಯತ್ನಿಸಿದ್ದು, ಈವೇಳೆ ನಡೆದ ಘರ್ಷಣೆಯಲ್ಲಿ ಹಲವು ಸೈನಿಕರು ಗಾಯಗೊಂಡಿದ್ದಾರೆ.

ಕಳೆದ ವಾರ ಈ ಘಟನೆ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಲಡಾಖ್ ಭಾಗದಲ್ಲಿ ಸಂಘರ್ಷ ನಡೆದ ಬಗ್ಗೆ ಭಾರತ ಮತ್ತು ಚೀನಾ ನಡುವೆ ಸೇನಾಮಟ್ಟದಲ್ಲಿ ನಡೆಯುತ್ತಿರುವ 9ನೇ ಸುತ್ತಿನ ಮಾತುಕತೆಗೆ ಮುನ್ನ ಈ ಘಟನೆ ನಡೆದಿರುವುದು ಬಹಿರಂಗವಾಗಿದೆ.

ಲಡಾಖ್​ನಲ್ಲಿ ಭಾರತದ ಗಡಿಭಾಗವನ್ನು ಆಕ್ರಮಿಸಿದ ಚೀನಾ ಭಾರತದ 20 ಸೈನಿಕರನ್ನು ಇತ್ತೀಚೆಗಷ್ಟೇ ಹತ್ಯೆ ಮಾಡಿತ್ತು. ಚೀನಾಕ್ಕೆ ತಕ್ಕ ಉತ್ತರವನ್ನು ನೀಡಿರುವುದಾಗಿ ಭಾರತ ಪ್ರಧಾನಿ ಹೇಳಿದ್ದರು. ಜೊತೆಗೆ ಚೀನಾದ ಆಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು