ಸಿಕ್ಕಿಂನಲ್ಲಿ  ಚೀನಾ ಪಡೆಯಿಂದ ವಿಧ್ವಂಸಕ ಕೃತ್ಯ| ಭಾರತದಲ್ಲಿ 59 ಚೀನಾ ಆಪ್ ಗಳ ಶಾಶ್ವತ ನಿಷೇಧಕ್ಕೆ ಮುಂದಾದ ಮೋದಿ ಸರಕಾರ

modhi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(26-01-2021): ಸಿಕ್ಕಿಂನಲ್ಲಿ ಚೀನಾ ಪಡೆ ಭಾರತದ ಗಡಿ ಪ್ರವೇಶಿಸಲು ಯತ್ನಿಸಿ ಘರ್ಷಣೆ ನಡೆದಿರುವ ಬೆನ್ನಲ್ಲೇ 59 ಚೀನೀ ಆಪ್ ಗಳನ್ನು ಶಾಶ್ವತವಾಗಿ ನಿಷೇಧಿಸಲು ಮೋದಿ ಸರಕಾರ ಮುಂದಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟಿಕ್ ಟಾಕ್ ಸೇರಿ 59 ಆಪ್ ಗಳಿಗೆ ಶಾಶ್ವತ ನಿಷೇಧ ಹೇರಲು ನೋಟಿಸ್ ನೀಡಿದೆ. ಜೂನ್ ನಲ್ಲಿ ಕೇಂದ್ರ ಸರ್ಕಾರ ಈ ಆಪ್ ಗಳಿಗೆ ನಿರ್ಬಂಧ ವಿಧಿಸಿತ್ತು. ನಿರ್ಬಂಧದ ನಂತರ ಗೌಪ್ಯತೆ ಮತ್ತು ಭದ್ರತಾ ಅವಶ್ಯಕತೆಗಳ ಅನುಸರಣೆಯ ಕುರಿತು ನಿಲುವು ತಿಳಿಸಲು ಈ 59 ಆಪ್ಗಳಿಗೆ ಅವಕಾಶ ನೀಡಲಾಗಿತ್ತು.

 ಟಿಕ್ ಟಾಕ್, ಬೈಡು, ವೀಚಾಟ್, ಅಲಿಬಾಬಾದ ಯುಸಿ ಬ್ರೌಸರ್, ಶಾಪಿಂಗ್ ಆಪ್ ಕ್ಲಬ್ ಫ್ಯಾಕ್ಟರಿ, ಮಿ ವೀಡಿಯೊ ಕಾಲ್ ನಂತಹ ಟಾಪ್ ಆಪ್ ಗಳು ಸೇರಿದಂತೆ 59 ಚೀನಿ ಆಯಪ್ ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು