ಪುತ್ತೂರು(25-01-2021): ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪ್ರತಿನಿಧಿ ಸಭೆಯು ಲಯನ್ಸ್ ಕ್ಲಬ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಧ್ವಜಾರೋಹಣದ ಮೂಲಕ ಪುತ್ತೂರು ಜಿಲ್ಲಾಧ್ಯಕ್ಷರಾದ ರಿಯಾಝ್ ಅಂಕತಡ್ಕ ರವರು ನೆರೆವೇರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. NSUI ಕಾರ್ಯಕ್ರಮಕ್ಕೆ ಬಂದು ಕ್ಯಾಂಪಸ್ ಫ್ರಂಟ್ನ್ನು ಮತೀಯ ಸಂಘಟನೆ ಎಂದು ಬಿಂಬಿಸಿದ ರಮನಾಥ ರೈ ಹೇಳಿಕೆಯನ್ನು ಕ್ಯಾಂಪಸ್ ಫ್ರಂಟ್ ಖಂಡಿಸುತ್ತಿದೆ. ಕ್ಯಾಂಪಸ್ ಫ್ರಂಟ್ ಈ ದೇಶದ ಜಾತ್ಯಾತೀತ ತತ್ವದೊಂದಿಗೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ. ದೇಶದೆಲ್ಲೆಡೆ ಇಂದು ಬಹಳ ವೇಗವಾಗಿ ಬೆಳೆಯುತ್ತಿರುವ ವಿದ್ಯಾರ್ಥಿ ಸಂಘಟನೆಯಾಗಿದೆ. ಮತೀಯವಾದಿಗಳೆಂದು ಹೇಳಿಕೆಯನ್ನು ನೀಡಿದ ರಮನಾಥ ರೈಯವರ ಮತೀಯ ಭಾವನೆಯನ್ನು ನಾವು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದಾಗಲೇ ನಾವು ಕಂಡಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಟೀಕಿಸಿದರು.
ಕಾರ್ಯಕ್ರಮದಲ್ಲಿ ವಿಡಿಯೋ ಮುಖಾಂತರ ರಾಜ್ಯಾಧ್ಯಕ್ಷರಾದ ಫಯಾಜ್ ದೊಡ್ಡಮನೆ ಅವರು ಸಂದೇಶ ಭಾಷಣವನ್ನು ಮಾಡಿದರು.
ಕ್ಯಾಂಪಸ್ ಫ್ರಂಟ್ ಪುತ್ತೂರಿನ ಕಳೆದ ಒಂದು ವರ್ಷದ ವರದಿಯನ್ನು ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿಯ 2020-21 ನೇ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಅನ್ಸಾರ್ ಬೆಳ್ಳಾರೆ, ಕಾರ್ಯದರ್ಶಿಯಾಗಿ ಮುಸ್ತಫಾ ಕಬಕ ಅಯ್ಕೆಯಾದರು, ಉಪಾಧ್ಯಕ್ಷರಾಗಿ ಅರ್ಫೀದ್ ಅಡ್ಕಾರ್, ಜೊತೆ ಕಾರ್ಯದರ್ಶಿಯಾಗಿ ಫಾರೂಕ್ ಕಬಕ ಹಾಗು ಕೋಶಾಧಿಕಾರಿಯಾಗಿ ಝಿಯಾದ್ ಅಡ್ಕಾರ್ ಮತ್ತು ಸಮಿತಿ ಸದಸ್ಯರಾಗಿ ಅಫ್ರೀದ್ ಕೂರ್ನಡ್ಕ, ಶಮ್ಮಾಸ್ ಬನ್ನೂರ್, ಇಮ್ರಾನ್ ಕಲ್ಲರ್ಪೆ, ಫಾರೂಕ್ ಕಟ್ಟತ್ತಾರ್, ಮಹಮ್ಮದ್ ರಫೀಕ್, ಸುಹೈಲ್ ಸುಳ್ಯ ಆಯ್ಕೆಯಾದರು.
ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಮುಖಂಡ ಸವಾದ್ ಕಲ್ಲರ್ಪೆ ಅವರು ಸಮಾರೋಪ ಮಾತುಗಳನ್ನಾಡಿದರು. ಫಾರೂಕ್ ಕಬಕ ಕಾರ್ಯಕ್ರಮವನ್ನು ನಿರೂಪಿಸಿದರು.