2019-2020ರಲ್ಲಿ ಬರೊಬ್ಬರಿ 713 ಕೋಟಿ ರೂ. ಜಾಹೀರಾತಿಗೆ ಖರ್ಚು ಮಾಡಿದ ಕೇಂದ್ರ ಸರಕಾರ| ಏಕಪಕ್ಷೀಯವಾಗಿ ಮಾದ್ಯಮಗಳು ಕಿರುಚಾಡುವುದರ ಮರ್ಮ ಆರ್ ಟಿಐ ನಲ್ಲಿ ಬಹಿರಂಗ!

bjp
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(31-10-2020): ಕೇಂದ್ರ ಸರಕಾರ 2019-2020ರ ಆರ್ಥಿಕ ವರ್ಷದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಜಾಹೀರಾತುಗಳಿಗಾಗಿ ಒಟ್ಟು 713.20 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಮುಂಬೈ ಕಾರ್ಯಕರ್ತರಿಗೆ ಆರ್‌ಟಿಐ ನಲ್ಲಿ ನೀಡಿದ ಮಾಹಿತಿಯಿಂದ ಬಹಿರಂಗವಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರಕಾರ ವ್ಯಯಿಸಿದ್ದು, ದಿನಕ್ಕೆ ಸರಿಸುಮಾರು 1.95 ಕೋಟಿ ರೂ.ಆಗಿದೆ. ದೇಸಾಯಿ ಅವರ ಆರ್‌ಟಿಐ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬ್ಯೂರೋ ಆಫ್ ಓಟ್ರೀಚ್ ಮತ್ತು ಸಂವಹನ (ಬಿಒಆರ್) ತಿಳಿಸಿದೆ.

ಎಲೆಕ್ಟ್ರಾನಿಕ್, ಮುದ್ರಣ ಮತ್ತು ಹೊರಾಂಗಣ ಮಾಧ್ಯಮಗಳಲ್ಲಿನ ಜಾಹೀರಾತುಗಳಿಗಾಗಿ ಕೇಂದ್ರವು 713.20 ಕೋಟಿ ರೂ.ವ್ಯಯಿಸಿದ್ದು, ಎಲೆಕ್ಟ್ರಾನಿಕ್‌ಗೆ ಮಾಧ್ಯಮಕ್ಕೆ 317.05 ಕೋಟಿ, ಮುದ್ರಣಕ್ಕೆ 295.05 ಕೋಟಿ ರೂ. ಮತ್ತು ಹೊರಾಂಗಣ ಮಾಧ್ಯಮಕ್ಕೆ 101.10 ಕೋಟಿ ರೂ.ವ್ಯಯಿಸಿದೆ.

ವಿದೇಶಿ ಮಾಧ್ಯಮಗಳಿಗೆ ಜಾಹೀರಾತುಗಳಿಗೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಬಿಒಆರ್‌ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು