ಬಜೆಟ್ ದೇಶಕ್ಕಾಗಿ ಇರಬೇಕು ಚುನಾವಣೆಗಾಗಿ ಅಲ್ಲ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(02-02-2021): ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದ್ದು, ಇದು ಚುನಾವಣಾ ಬಜೆಟ್ ಅಲ್ಲ, ದೇಶದ ಬಜೆಟ್ ಎಂದು ಕೇಂದ್ರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

 ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಉದ್ಧವ್ ಠಾಕ್ರೆ, ದೇಶ ಎಂದ ಮೇಲೆ ಎಲ್ಲಾ ರಾಜ್ಯಗಳು ಸೇರಿವೆ.ಎಲ್ಲಾ ರಾಜ್ಯದ ಜನರು ತಮ್ಮ ರಾಜ್ಯಕ್ಕೆ ಏನು ಸಿಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ವಿಧಾನಸಭಾ ಚುನಾವಣೆಗಳ ಮೇಲೆ ಮಾತ್ರ ಕಣ್ಣಿಟ್ಟು, ಚುನಾವಣೆ ಇರುವ ರಾಜ್ಯಗಳಿಗೆ ಮಾತ್ರ ಸೀಮಿತ ಗೊಳಿಸಿ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.

ಬಜೆಟ್‌ ಇಡೀ ದೇಶಕ್ಕಾಗಿ ಇರಬೇಕು. ಕೇವಲ ಚುನಾವಣೆಗಳಿಗಾಗಿ ಅಲ್ಲ. ಇದು ದೇಶದ ಬಜೆಟ್‌, ಚುನಾವಣೆಯದ್ದಲ್ಲ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರಕಾರ ನಿನ್ನೆ ಮಂಡಿಸಿದ ದೇಶದ ಅಯವ್ಯಯ ಕೇವಲ ಹೆಸರಿಗೆ ಮಾತ್ರ ಎಂಬಂತಿದ್ದು, ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ. ಬಂಗಾಳ, ಕೇರಳ, ತಮಿಳುನಾಡಿಗೆ ಅನುದಾನ ನೀಡಿದೆ. ಕರ್ನಾಟಕವನ್ನು ಬಜೆಟ್ ನಲ್ಲಿ ಕಡೆಗಣಿಸಿದ್ದು, ಅತಿ ಹೆಚ್ಚು ಜಿಎಸ್ ಟಿ ಕೇಂದ್ರಕ್ಕೆ ಸಂದಾಯವಾದರೂ ಕರ್ನಾಟಕ ರಾಜ್ಯಕ್ಕೆ ಕಿಮ್ಮತ್ತು ನೀಡದಿರುವುದು ವಿಪರ್ಯಾಸವಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು