ಬೆಂಗಳೂರು : ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆ ಮಹಿಳೆಯು ಮನೆಯವರೊಂದಿಗೆ ಕರೆ ಮಾಡಿ ಮಾತನಾಡಿದ ಆಡಿಯೋ ವೈರಲ್ ಆಗಿತ್ತು.
ಆ ಆಡಿಯೋದಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ರವರ ಹೆಸರು ಉಲ್ಲೇಖವಾಗಿರುವ ಬಗ್ಗೆ ಪ್ರಸ್ತಾಪಿಸಿದ ರಾಜ್ಯ ಬಿಜೆಪಿಯು ಡಿಕೆಶಿ ರಾಜಿನಾಮೆ ನೀಡಬೇಕೆಂದು ಪಟ್ಟು ಹಿಡಿದಿದೆ.
“ಸಹಾಯ ಮಾಡುವುದಕ್ಕೂ, ಷಡ್ಯಂತ್ರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ. ಷಡ್ಯಂತ್ರದ ಭಾಗವಾಗಿದ್ದುಕೊಂಡ ಕಾರಣದಿಂದಲೇ ಹೆಗಲು ಮುಟ್ಟಿ ನೋಡಿಕೊಂಡಿದ್ದಲ್ಲವೇ?
ಮಹಾನಾಯಕರೇ, ಪ್ರಮುಖ ಮಾಸ್ಟರ್ ಮೈಂಡ್ ಗಳೊಂದಿಗೆ, ಅದೂ ಈ ಪ್ರಕರಣದ ಬಳಿಕ ಸಂಬಂಧ ಹೊಂದಿರಲು ಹೇಗೆ ಸಾಧ್ಯ?” ಎಂದು #DkShiMustResign ಎಂಬ ಹ್ಯಾಶ್ ಟ್ಯಾಗ್ ಮೂಲಕ ಬಿಜೆಪಿಯು ರಾಜ್ಯ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ.