ಸಿಡಿ 100% ನಕಲಿಯಾಗಿದೆ, ಷಡ್ಯಂತ್ರ ಮಾಡಿದವರನ್ನು ಸುಮ್ಮನೇ ಬಿಡೋದಿಲ್ಲ | ರಮೇಶ್ ಜಾರಕಿಹೊಳಿ

ramesh jarkiholi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪತ್ರಿಕಾಗೋಷ್ಠಿಯ ಕರೆದ ರಮೇಶ್ ಜಾರಕಿಹೊಳಿ, ಸಿಡಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಸಿಡಿ ಬಿಡುಗಡೆಯಾಗುವ 26 ಗಂಟೆಗಿಂತ ಮೊದಲೇ ನನಗೆ ಬಿಜೆಪಿ ಹೈಕಮಾಂಡ್ ಫೋನ್ ಮಾಡಿ ತಿಳಿಸಿತ್ತು. ಜೊತೆಗೆ ನೀನು ಧೈರ್ಯವಾಗಿರು, ಕಾನೂನು ಹೋರಾಟ ಮಾಡೋಣ ಎಂದು ಹೇಳಿತ್ತು ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ನನ್ನ ರಾಜಕೀಯ ಏಳಿಗೆ ಸಹಿಸದ ಜನರು ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ನಾನು ಬಹಳ ದುಖದಲ್ಲಿದ್ದೇನೆ. ಸಿಡಿ ಬಿಡುಗಡೆ ಆಗಿದ್ದ ದಿನವೇ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆನಾನು ತಪ್ಪು ಮಾಡಿದ್ರೇ.. ತಾಯಿಯೇ ಶಿಕ್ಷೆ ವಿಧಿಸಲಿ. ಅಲ್ಲಿಂದ ಬಂದು ಒಂದು ದಿನ ತಡೆದು, ರಾತ್ರಿ 9.30ಕ್ಕೆ ಸಿಡಿ ಬಿಡುಗಡೆ ನಂತ್ರ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ರಮೇಶ್ ಹೇಳಿದರು.

ಓರಿಯನ್ ಮಾಲ್ ಸಮೀಪ ಹಾಗೂ ಹುಳಿಮಾವಿನಲ್ಲಿರುವ ಅಪಾರ್ಟ್ಮೆಂಟ್ ಗಳಲ್ಲಿ ಸಿಡಿ ಬಿಡುಗಡೆಯ ಷಡ್ಯಂತ್ರ ನಡೆಸಲಾಗಿದೆ. ಸಿಡಿ ಬಿಡುಗಡೆ ಮಾಡಿದ ನಂತ್ರ, ನಾನು ಮಾನಸೀಕವಾಗಿ ನೊಂದಿದ್ದೇನೆ. ಷಡ್ಯಂತ್ರ ಮಾಡಿದವರನ್ನು ಸುಮ್ಮನೇ ಬಿಡೋದಿಲ್ಲ. ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಇಂತಹ ಷಡ್ಯಂತ್ರ ನಡೆದಿದೆ. ಸಿಡಿ 100% ನಕಲಿಯಾಗಿದೆ. ನನಗೆ ಎಲ್ಲಾ ಪಕ್ಷದ ಮೇಲೆ ಗೌರವ ಇದೆ. ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಜೊತೆಗೆ ತನ್ನನ್ನು ರಾಜಕೀಯವಾಗಿ ಮುಗಿಸಲು 2+3+4 ಜನರ ಷಡ್ಯಂತ್ರವಿದೆ ಎಂದು ಅವರು ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು