ಸಿಡಿ’ ಕೇಸ್ : ಕಾಂಗ್ರೆಸ್ – ಬಿಜೆಪಿ ಟ್ವೀಟರ್ ವಾರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ – ಕಾಂಗ್ರೆಸ್ ನಡುವೆ ಟ್ವಿಟ್ಟರ್ ವಾಗ್ದಾಳಿ ಜೋರಾಗಿ ನಡೆಯುತ್ತಿದೆ.

ಕಾಂಗ್ರೆಸ್ ಟ್ವಿಟ್ಟರ್ ಆರೋಪ ಬೆನ್ನಲ್ಲೇ ಈಗ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ನವರ ವಿರುದ್ಧ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದೆ.

“ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ.

ಒಂದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ.
ಇನ್ನೊಂದು, ಡಿ.ಕೆ.ಶಿವಕುಮಾರ್ ನಡೆಸಿದ ಷಡ್ಯಂತ್ರವನ್ನು ಸಾಬೀತುಪಡಿಸಬಹುದು.
ಒಬ್ಬ ಪ್ರತಿಸ್ಪರ್ಧಿಯನ್ನು ಕೆಡವಿದ ಸಾಧನೆ ನಿಮ್ಮದಾಗಲಿದೆ. ಏನಂತೀರಿ?” ಎಂದು ಬಿಜೆಪಿ ಪಕ್ಷ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

 

ಸಂತ್ರಸ್ಥ ಯುವತಿಯ ಪೋಷಕರು ನೇರವಾಗಿ ನಿಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಬೊಟ್ಟು ಮಾಡಿ, ಸಂತ್ರಸ್ಥೆಯನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಿರುವಾಗ ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಅವರು ಹೊಣೆ ಅಲ್ಲವೇ? ಎಂದು ಬಿಜೆಪಿ ಆರೋಪಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು