ಸಿಬಿಎಸ್ಇ ಪರೀಕ್ಷೆಗೂ ತಟ್ಟಿದ ಕೋವಿಡ್ ಬಿಸಿ | ಹತ್ತನೇ ತರಗತಿ ಪರೀಕ್ಷೆ ರದ್ದು; ಹನ್ನೆರಡನೇ ತರಗತಿಯದ್ದು ಮುಂದೂಡಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಏರುತ್ತಿರುವ ಕೋವಿಡ್ ಸಾಂಕ್ರಾಮಿಕ ರೋಗದ ಬಿಸಿಯು ಸಿಬಿಎಸ್ಇ ಪರೀಕ್ಷೆಗೂ ತಟ್ಟಿದೆ. ಪರೀಕ್ಷೆಗಳನ್ನು ರದ್ದು ಯಾ ಮುಂದೂಡಲಾಗಿದೆ.

ಹತ್ತನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದ್ದರೆ, ಹನ್ನೆರಡನೇ ತರಗತಿಯ ಪರೀಕ್ಷೆಯು ಮುಂದೂಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಿಬಿಎಸ್ಇ ಪರೀಕ್ಷೆಗಳನ್ನು ರದ್ದು ಮಾಡಬೇಕು ಯಾ ಮುಂದೂಡಬೇಕೆಂದು ವಿವಿಧ ರಾಜ್ಯಗಳು ಕೇಂದ್ರವನ್ನು ವಿನಂತಿಸಿತ್ತು.

 

ಹಿನ್ನೆಲೆಯಲ್ಲಿ ಪ್ರಧಾನಿಯು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ, ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮುಂದಿನ ದಿನಾಂಕಗಳನ್ನು ಜೂನ್ ಒಂದರ ಬಳಿಕ ತಿಳಿಸಲಾಗುವುದೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು