ಸಿಬಿಎಸ್‍ಇ ಹನ್ನೆರಡನೇ ತರಗತಿಯ ಪರೀಕ್ಷೆ ರದ್ದು | ಗೊಂದಲಗಳಿಗೆ ತೆರೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಸಿಬಿಎಸ್‍ಇ ಹನ್ನೆರಡನೇ ತರಗತಿ ಪರೀಕ್ಷೆ ರದ್ದು ಗೊಂಡಿದೆ. ಸಿಬಿಎಸ್‍ಇ ವಿದ್ಯಾರ್ಥಿಗಳ ಮತ್ತು ಹೆತ್ತವರ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ.

ಪ್ರದಾನ ಮಂತ್ರಿ ಕರೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಮತ್ತು ಹೆತ್ತವರ ಆರೋಗ್ಯವನ್ನು ದೃಷ್ಠಿಯಲ್ಲಿಟ್ಟು ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉನ್ನತ ಅಧಿಕಾರಿಗಳು, ಶೈಕ್ಷಣಿಕ ತಜ್ಞರು ಭಾಗವಹಿಸಿದ್ದರು.

ಅದೇ ವೇಳೆ ಪರೀಕ್ಷೆ ರದ್ದುಗೊಂಡ ಕುರಿತು ಅಪಸ್ವರಗಳೂ ಎದ್ದಿದ್ದು, ಕೆಲವು ವಿದ್ಯಾರ್ಥಿಗಳು ಮತ್ತು ಹೆತ್ತವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ಧಾರೆ. ಪರೀಕ್ಷೆ ರದ್ದು ಗೊಂಡಿದ್ದರೂ, ಪರೀಕ್ಷೆಗೆ ಪರ್ಯಾಯವಾಗಿ ಸಿಬಿಎಸ್‍ಇ ಮಂಡಳಿಯು ಯಾವ ವ್ಯವಸ್ಥೆಯನ್ನು ಮಾಡಲಿದೆಯೆಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಶೀಘ್ರದಲ್ಲೇ ಕುರಿತು ಸಿಬಿಎಸ್‍ಇ ಮಂಡಳಿಯು ತೀರ್ಮಾನ ಕೈಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.

ದೇಶಾದ್ಯಂತ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದ್ದರೂ, ಹಲವೆಡೆ ಇನ್ನೂ ಏರಿಕೆಯಾಗುತ್ತಿರುವುದು ಕಂಡು ಬಂದಿದೆ. ಜೊತೆಗೆ ಕೋವಿಡ್ ಮೂರನೇ ಅಲೆಯು ಮಕ್ಕಳನ್ನು ಬಾಧಿಸಲಿದೆಯೆಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಎಲ್ಲಾ ವಿಚಾರಗಳನ್ನು ದೃಷ್ಠಿಯಲ್ಲಿಟ್ಟು  ಸಿಬಿಎಸ್ಇ ಪರೀಕ್ಷೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು