ಬೆಂಗಳೂರು(06-10-2020): ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಸಿಬಿಐ ಅಧಿಕಾರಿಗಳು ಎಫ್ ಐಆರ್ ನ್ನು ನಿನ್ನೆ ದಾಖಲಿಸಿದ್ದರು. ಸೆಕ್ಷನ್ 13(2) ಪ್ರಕಾರ ಅವರ ಮೇಲಿನ ಆರೋಪ ಸಾಬೀತಾದರೆ ಅವರಿಗೆ ಕನಿಷ್ಠ 1ವರ್ಷದಿಂದ ಗರಿಷ್ಠ 7ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿನ್ನೆ ಡಿಕೆಶಿ ಅವರ ಮನೆ ಮತ್ತು ಅವರಿಗೆ ಸಂಬಂಧಿಸಿದ 14 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಿಬಿಐ ಅಧಿಕಾರಿಗಳು ಪಿಸಿ ಕಾಯ್ದೆ 1988 ರ ಅಡಿ 13(1), ಸೆಕ್ಷನ್ ನಡಿ ಡಿ.ಕೆ. ಶಿವಕುಮಾರ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
2013-18 ರ ಅವಧಿಯಲ್ಲಿ ಡಿಕೆಶಿ ಅವರ ಆಸ್ತಿ ಶೇ. 380 ಹೆಚ್ಚಳವಾಗಿರುವುದಾಗಿ ಎಫ್ ಐಆರ್ ನಿಂದ ತಿಳಿದುಬಂದಿದೆ. ಘೋಷಿತ ಆದಾಯಕ್ಕಿಂತ 74.93 ಕೋಟಿ ರೂ. ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.