ಪುನೀತ್ ರಾಜಕುಮಾರ್ ಗೆ ಹೃದಯಾಘಾತ ಆಸ್ಪತ್ರೆಗೆ ದಾಖಲು

ಬೆಂಗಳೂರು: ‘ಪವರ್ ಸ್ಟಾರ್‌’ ಪುನೀತ್ ರಾಜ್‌ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಕಾರಣ, ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಮುಂಜಾನೆ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಲಾಗುತ್ತಿದೆ! ಆದರೆ, ಪುನೀತ್‌ ಅವರಿಗೆ ಯಾವ ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ! ಆದರೆ ಸದ್ಯ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಪುನೀತ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ತೀವ್ರವಾಗಿ ಆರೋಗ್ಯ ಕ್ಷೀಣಿಸುತ್ತಿದೆ ಎಂಬ … Read more

ಟ್ರೋಲ್, ಡೀಸೆಲ್ ದರ ಏರಿಕೆಯ ಬೆನ್ನಲ್ಲೇ

ಟ್ರೋಲ್, ಡೀಸೆಲ್ ದರ ಏರಿಕೆಯ ಬೆನ್ನಲ್ಲೇಪೆ ಕೇಂದ್ರ ಸರ್ಕಾರಕ್ಕೆ ಹರಿದು ಬಂದಿರುವ ತೆರಿಗೆಯೂ ಭಾರೀ ಏರಿಕೆ ಕಂಡಿದೆ. ಕೇಂದ್ರ ಸರ್ಕಾರಕ್ಕೆ ಮಾರ್ಚ್ 31ರವರೆಗೆ 3.35 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಶೇ. 88ರಷ್ಟು ಏರಿಕೆ ಕಂಡಿದೆ. ಇದು ದಾಖಲೆ ಏರಿಕೆ ಎಂದೇ ಬಣ್ಣಿಸಲಾಗಿದೆ.

ಅಧಿಕಾರದ ಗುಂಗಿನಿಂದ ಹೊರ ಬರದೇ ಕುರ್ಚಿಗೇ ಅಂಟಿದ ಇಸ್ರೇಲಿನ ಮಾಜಿ ಪ್ರಧಾನಿ! ವೀಡಿಯೋ ಇಲ್ಲಿದೆ..

ಜಿರುಸೆಲೆಮ್: ಅಧಿಕಾರದ ಗುಂಗಿನಿಂದ ಹೊರಬರದ ಇಸ್ರೇಲಿನ ಮಾಜಿ ಪ್ರಧಾನಿ ತನ್ನ ಹಳೆಯ ಕುರ್ಚಿಗೇ ಅಂಟಿಕೊಂಡ ಘಟನೆ ನಡೆದಿದೆ! ಹೊಸದಾಗಿ ಆಯ್ಕೆಗೊಂಡ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಅಧಿಕಾರ ಸ್ವೀಕರಿಸುವ ಸಮಾರಂಭ ಅದು. ಅಲ್ಲಿಗೆ ಬಂದ ಪದಚ್ಯುತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೀದಾ ಹೋಗಿ ತನ್ನ ಹಳೆಯ ಕುರ್ಚಿಯಲ್ಲಿ ಕುಳಿತುಕೊಂಡರು. ಆ ವೇಳೆಗಾಗಲೇ ಇದನ್ನು ಗಮನಿಸಿದ ಯಾರೋ ಒಬ್ಬರು, ಇದು ನಿಮ್ಮ ಕುರ್ಚಿ ಅಲ್ಲ ಎಂದು ಎಚ್ಚರಿಸಿದಾಗ ವಾಸ್ತವ ಲೋಕಕ್ಕೆ ಬಂದ ನೆತನ್ಯಾಹು ಹಿಂದಿನ ಸಾಲಿನಲ್ಲಿ ಹೋಗಿ ಕುಳಿತುಕೊಂಡರು. ಘಟನೆಯ ವೀಡಿಯೋ ತುಣುಕನ್ನು … Read more

‘ಕರೋನಾ ಮುಕ್ತ ಕರ್ನಾಟಕ’ ಬದಲು ಬಿಜೆಪಿ ಮುಕ್ತ ಬಿಜೆಪಿ ಮಾಡುವುದು ರಾಜ್ಯ ಬಿಜೆಪಿಯ ಆದ್ಯತೆಯಾಗಿದೆ: ರಾಜ್ಯ ಕಾಂಗ್ರೆಸ್ ಆರೋಪ

ಬೆಂಗಳೂರು: “ಕರೋನಾ ಮುಕ್ತ ಕರ್ನಾಟಕ” ಮಾಡುವುದು ಈಗಿನ ತುರ್ತು ಆದ್ಯತೆಯಾಗಬೇಕಿತ್ತು. ಬಿಜೆಪಿ ಮುಕ್ತ ಬಿಜೆಪಿ ಮಾಡುವುದು ರಾಜ್ಯ ಬಿಜೆಪಿಯ ಆದ್ಯತೆಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ ರಾಜ್ಯದಲ್ಲಿ ಹತ್ತಾರು ಸೋಂಕುಗಳು ಕಾಣಿಸಿಕೊಂಡಿವೆ, ಜನತೆ ನರಳುತ್ತಿದ್ದಾರೆ, ವೈದ್ಯಕೀಯ ಸೌಲಭ್ಯಗಳಿಗೆ ಪರದಾಡುತ್ತಿದ್ದಾರೆ. ಇದೆಲ್ಲವನ್ನೂ ಮರೆತ ಬಿಜೆಪಿ ರಾಜಕೀಯದ ಆಟ ಆಡುತ್ತಿದೆ. 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದು. ಆಕ್ಸಿಜನ್ ತರಲು ಅಲ್ಲ. ಕೇಂದ್ರದ ಅನ್ಯಾಯ ಪ್ರಶ್ನಿಸಲು ಅಲ್ಲ, ಅಂಪೊಟರಿಸನ್ ಔಷಧ ತರಲಲ್ಲ. … Read more

ಸರಕಾರೀ ವೈದ್ಯಕೀಯ ಕಾಲೇಜಿಗಾಗಿ ಪ್ರತಿಭಟಿಸಿದ ಕರವೇ ಕಾರ್ಯಕರ್ತರ ಮೇಲೆ ಕೇಸು | ಬಿಜೆಪಿಯ ಕಾರ್ಯಕ್ರಮ ಮಾಡಿದವರ ಮೇಲೆ ಕೇಸು ಇಲ್ಲ! ಇಬ್ಬಗೆಯ ನೀತಿಯ ವಿರುದ್ಧ ಆಕ್ರೋಶ

ಬಾಗಲಕೋಟೆ: ಸರಕಾರೀ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಇನ್ನಿತರ ಕಾಯ್ದೆಗಳಡಿ ಕೇಸು ದಾಖಲಿಸಲಾಗಿದೆ. ಆದರೆ ಅದೇ ದಿನ ಬಾಗಲಕೋಟೆಯಲ್ಲೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಡೆದಿದ್ದರೂ, ಇದರಲ್ಲಿ ಭಾಗವಹಿಸಿದ ಯಾರ ಮೇಲೂ ಕೇಸು ದಾಖಲಾಗಿಲ್ಲ. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವನ್ನೂ ಪಾಲಿಸದೇ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಆರೋಪಿಸಲಾಗಿದೆ. ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರ ಮೇಲೂ ಕೇಸು ದಾಖಲಾಗಿಲ್ಲ. ಸರಕಾರದ ಈ ಇಬ್ಬಗೆಯ ನೀತಿಯ ಬಗ್ಗೆ … Read more

ಖತರ್ : ಮಾನ್ಯತೆಯುಳ್ಳ ವ್ಯಾಕ್ಸಿನುಗಳನ್ನು ಹೊರ ದೇಶಗಳಲ್ಲಿ ಪಡೆದಿದ್ದರೂ ಕ್ವಾರಂಟೈನಿನಲ್ಲಿ ರಿಯಾಯಿತಿ

ದೋಹಾ: ಮಾನ್ಯತೆಯುಳ್ಳ ಕೋವಿಡ್ ವ್ಯಾಕ್ಸಿನುಗಳನ್ನು ಹೊರ ದೇಶಗಳಲ್ಲಿ ಪಡೆದಿದ್ದರೂ ಕ್ವಾರಂಟೈನಿನಲ್ಲಿ ರಿಯಾಯಿತಿ ಸಿಗಲಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ಅಂದರೆ ಹೊರದೇಶಗಳಿಂದ ವ್ಯಾಕ್ಸಿನು ಪಡೆದು, ಕತರ್ ಪ್ರವೇಶಿಸುವವರಿಗೆ ಹೋಟೆಲ್ ಕ್ವಾರಂಟೈನಿಗೆ ಒಳಗಾಗುವ ಅಗತ್ಯವಿಲ್ಲ. ಬರೇ ಏಳು ದಿನಗಳ ಹೋಮ್ ಕ್ವಾರಂಟೈನ್ ಪಾಲಿಸಿದರೆ ಸಾಕಾಗುತ್ತದೆ. ಆದರೆ ಇಲ್ಲಿ ಕತರ್ ಆರೋಗ್ಯ ಸಚಿವಾಲಯದ ಮಾನ್ಯತೆ ಗಳಿಸಿದ ವ್ಯಾಕ್ಸಿನುಗಳಿಗಷ್ಟೇ ಈ ರಿಯಾಯಿತಿ ಲಭ್ಯವಾಗುವುದು. ಫೈಸರ್–ಬಯೋಎನ್‍ಟೆಕ್ (pfizer-biontech), ಮೋಡೆರ್ನಾ (moderna), ಒಕ್ಸ್‍ಫರ್ಡ್–ಅಸ್ಟ್ರಾಝೆನಿಕಾ (Oxford-AstraZeneca) ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ (Johnson & Johnson) – ಈ ನಾಲ್ಕು … Read more

ಶೀಘ್ರದಲ್ಲೇ ವೇತನ ಹೆಚ್ಚಿಸುತ್ತೇವೆ. ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ: ಸಾರಿಗೆ ಸಚಿವ | ಮಾರ್ಚ್ ತಿಂಗಳ ನೌಕರರ ವೇತನ ತಡೆ ಹಿಡಿಯಲು ಸರಕಾರ ಸೂಚನೆ

ಬೆಂಗಳೂರು: ವೇತನ ಹೆಚ್ಚಿಸಲು ಸರಕಾರ ಸಿದ್ಧವಿದೆ. ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದು ಸಾರಿಗೆ ಸಚಿವ ಸವದಿ ಹೇಳಿದ್ದಾರೆ. ಚುನಾವಣಾ ಆಯೋಗದೊಂದಿಗೆ ಚರ್ಚಿಸಿದ್ದೇವೆ. ವೇತನ ಹೆಚ್ಚಿಸಲು ಸರಕಾರ ತಯಾರಾಗಿದೆ. ಮುಷ್ಕರ ಮುಂದುವರಿಸಿದರೆ ಇಲಾಖೆಗೆ ನಷ್ಟವಾಗಿ, ವೇತನ ಕೊಡಲು ಕಷ್ಟವಾಗಬಹುದು. ನಾಳೆಯಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಚಿವರು ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಮನವಿ ಮಾಡಿಕೊಂಡರು. ಅದೇ ವೇಳೆ ಸರಕಾರೀ ಅಧಿಕಾರಿಗಳ ಮನವಿಗೆ ಕ್ಯಾರೆನ್ನದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿರುವ ರಾಜ್ಯ ಸರಕಾರವು ಮಾರ್ಚ್ ತಿಂಗಳ ವೇತನವನ್ನು ತಡೆ … Read more

ಪದ್ಮಶ್ರೀ ಪ್ರಶಸ್ತಿ ವಿಜೇತ ಹಿಂದುಸ್ತಾನೀ ಸಂಗೀತ ಗುರುಗಳಿಂದ ಶಿಷ್ಯೆಯರಿಗೆ ಲೈಂಗಿಕ ಕಿರುಕುಳ | ಬಿಬಿಸಿ ತನಿಖಾ ವರದಿಯಿಂದಾಗಿ ವಿಶ್ವ ವಿಖ್ಯಾತ ಸಂಗೀತ ವಿದ್ಯಾಲಯದ ಕರಾಳ ಮುಖಗಳು ಬೆಳಕಿಗೆ

ಭೋಪಾಲ್: ಇಲ್ಲಿನ ವಿಶ್ವ ವಿಖ್ಯಾತ ಸಂಗೀತ ವಿದ್ಯಾಲಯವಾದ ದ್ರುಪದ್ ಸಂಸ್ಥಾನ್ ಸಂಗೀತ ಶಾಲೆಯಲ್ಲಿ ಕ್ರೂರವಾದ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಗುಂದೇಚ ಸಹೋದರರ ವಿರುದ್ಧ ಸಂಸ್ಥಾನ್ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಬಿಬಿಸಿ ತನಿಖಾ ವರದಿಯಂತೆ ಸಂಸ್ಥಾನದ ಗುರುಗಳಾದ ಉಮಾಕಾಂತ್, ಅಖಿಲೇಶ್ ಮತ್ತು 2019 ರಲ್ಲಿ ನಿಧನರಾದ ರಮಾಕಾಂತ್ ಗುಂದೇಚ ಇವರು ನಡೆಸುತ್ತಿದ್ದ ಗುರುಕುಲ ಮಾದರಿಯ ಸಂಗೀತ ಶಾಲೆಯಲ್ಲಿ ವಿದೇಶೀ ವಿದ್ಯಾರ್ಥಿಗಳೂ ಕಲಿಯುತ್ತಿದ್ದರು. … Read more

ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ ಬಸ್ಸುಗಳು, ಪ್ರಯಾಣಿಕರ ಪರದಾಟ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರಿಗೆ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಸರಕಾರವು ಪ್ರಯಾಣಿಕರಿಗೆ ತೊಂದರೆಯಾಗದಂತೆ ಖಾಸಗೀ ಬಸ್ಸುಗಳನ್ನು ರಸ್ತೆಗಿಳಿಸಿದರೂ, ಅದರಿಂದ ಸಂಪೂರ್ಣ ಪರಿಹಾರ ದೊರೆತಿಲ್ಲ. ಆರನೇ ವೇತನ ಆಯೋಗ ಶಿಫಾರಸು ಜಾರಿ ಮಾಡಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುವ ಮುಷ್ಕರದಿಂದಾಗಿ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಇಂದು ರಸ್ತೆಗಿಳಿದಿಲ್ಲ.  ಅಲ್ಲಲ್ಲಿ ಖಾಸಗೀ ಬಸ್ಸುಗಳ ಸಂಚಾರವಷ್ಟೇ ಕಂಡುಬಂದಿದೆ. ಬೇಡಿಕೆಗೆ ಮಣಿಯದ ಸರಕಾರವು ಮುಷ್ಕರ ನಿರತ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸುವ ಬೆದರಿಕೆ ಹಾಕಿದರೂ ಸಾರಿಗೆ ನೌಕರರು ಕ್ಯಾರೇ … Read more

ಇನ್ನೂ ಹದಿನೈದು ವರ್ಷ ನನ್ನದೇ ಅಧ್ಯಕ್ಷಗಿರಿ! | ಹೊಸ ಕಾನೂನಿಗೆ ರಷ್ಯಾದ ಪುತಿನ್ ಸಹಿ

ಮಾಸ್ಕೋ: 2036 ರ ವರೆಗೂ ತಾನೇ ಅಧ್ಯಕ್ಷಗಿರಿಯಲ್ಲಿ ಮುಂದುವರಿಯುವ ಹೊಸ ಕಾನೂನಿಗೆ ರಷ್ಯಾ ಅಧ್ಯಕ್ಷ ಸಹಿ ಹಾಕಿದ್ದಾರೆ. ಈ ವಿಲಕ್ಷಣ ಕಾನೂನು ವಿಶ್ವಾದ್ಯಂತ ರಾಜಕೀಯ ವಿಶ್ಲೇಷಕರನ್ನು ಹುಬ್ಬೇರಿಸುವಂತೆ ಮಾಡಿದೆ. ಈಗಾಗಲೇ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿರುವ ಪುತಿನ್ ಸಹಿ ಹಾಕಿರುವ ಕಾನೂನಿನ ಪ್ರಕಾರ ಇನ್ನು ಮುಂದೆ ಅಧ್ಯಕ್ಷರ ಅಧಿಕಾರವು ಎರಡು ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಇದು ಪುತಿನ ಅವರ ಈಗಿನ ಹಾಗೂ ಹಿಂದಿನ ಅಧಿಕಾರಗಳನ್ನು ಪರಿಗಣಿಸುವುದಿಲ್ಲ. ಹಾಗಾಗಿ ಪುತಿನ್ ಅವರು ಇನ್ನೆರಡು ಅವಧಿಗೆ ಅಧ್ಯಕ್ಷರಾಗುವ ಅವಕಾಶ ಸಿಗಲಿದೆ. ಈ ಹೊಸ ಕಾನೂನಿನಂತೆ … Read more