ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಖರೀದಿಗೆ ಪ್ರಭಾವಿಗಳ ಪೈಪೋಟಿ

ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಭೂಮಿ ಖರೀಸುವುದು ಪ್ರತಿಯೊಬ್ಬರ ಕನಸು. ಪುಣ್ಯಭೂಮಿಯಲ್ಲಿ ನಮ್ಮದೊಂದು ಪಾಲಿರಲಿ ಅನ್ನೋ ಮಂದಿ, ರಾಮಮಂದಿರದ ತೀರ್ಪು ಬಂದ್ಮೇಲೆ ಅಯೋಧ್ಯೆಯತ್ತ ಗಮನ ಹರಿಸಿದ್ದಾರೆ. ರಾಮಮಂದಿರದ ಸುತ್ತಮುತ್ತ 70ಕಿ.ಮೀ. ಆವರಣ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪಾಲಾಗಿದೆ. ಇನ್ನುಳಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ, ಸಾರ್ವಜನಿಕರು ಭೂಮಿ ಖರೀದಿಸಬಹುದು ಎಂಬ ನಿರ್ಧಾರ ಮಾಡಲಾಗಿದೆ. ಆದ್ರೆ ಇಲ್ಲಿ ನಿಜವಾಗಲು ಸಾಮಾನ್ಯ ಜನರಿಗೆ ಭೂಮಿ ಖರೀದಿಸಲು ಸಾಧ್ಯವಿದೆಯ ಎಂಬ ಪ್ರಶ್ನೆ ಕಾಡೋಕೆ ಶುರುವಾಗಿದೆ. ಈ ಬಗ್ಗೆ ʼಇಂಡಿಯನ್ ಎಕ್ಸ್ ಪ್ರೆಸ್ʼ ತನಿಖಾ … Read more

ಅಮಿತ್ ಶಾ ವಯಸ್ಸು-33, ಸ್ಪೀಕರ್ ವಯಸ್ಸು-26….?

    ಲಕ್ನೋ:  ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಯಸ್ಸು 33, ಲೋಕ ಸಭಾ ಸ್ಪೀಕರ್ ವಯಸ್ಸು 26, ಹೀಗೆ ಕಂಡು ಬಂದಿದ್ದು, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ತಖಾ ತಹಸಿಲ್‌ನಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದ ಹೆಸರಿರುವ ಕೊವಿಡ್​ 19 ಸರ್ಟಿಫಿಕೇಟ್​​ ಇದೀಗ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗುತ್ತಿದೆ. ಸರ್ಟಿಫಿಕೇಟಲ್ಲಿ ಕೇಂದ್ರ ಸಚಿವರಾದ, ಅಮಿತ್​ ಶಾ, ನಿತಿನ್ ಗಡ್ಕರಿ, ಪಿಯುಷ್​ ಗೋಯೆಲ್, ಸ್ಪೀಕರ್ ಓಂ ಬಿರ್ಲಾ ಎಂಬ ಹೆಸರಿದೆ. ಸರ್ಟಿಫಿಕೇಟ್​ ಫೋಟೋಗಳು ಸಿಕ್ಕಾಪಟೆ ವೈರಲ್ … Read more

ರಾಯಣ್ಣ ಪುತ್ತಳಿಗೆ ಹಾನಿ ಮಾಡಿದ ಎಂಇಎಸ್

    ಬೆಳಗಾವಿ: ಜಿಲ್ಲೆಯ ಧರ್ಮವೀರ್ ಸಂಭಾಜಿ ವೃತ್ತ (ಬೋಗಾರ್ವೇಸ್) ಬಳಿ ನಿನ್ನೆ ರಾತ್ರಿ ಏಕಾಏಕಿ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಅವಮಾನ ಮಾಡಲಾಗಿದೆ ಎನ್ನುವ ವಿಡೀಯೋವೊಂದು ವೈರಲ್ ಆಗುತ್ತಿದ್ದಂತೆ ಏಕಾಏಕಿ ರಾತ್ರಿ ಜಮಾಯಿಸಿದ ಜನರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಜನ ಸೇರುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರತಿಭಟನಾಕಾರರು ಸರ್ಕಾರಿ ಬಸ್ ಸೇರಿದಂತೆ  20ಕ್ಕೂ ಹೆಚ್ಚು ವಾಹನಗಳ … Read more

100 ರ ಗಡಿ ದಾಟಿದ ಒಮಿಕ್ರಾನ್

ಭಾರತದಲ್ಲಿ ಒಮೈಕ್ರಾನ್ ಪ್ರಕರಣಗಳು 100ರ ಗಡಿ ದಾಟಿದ್ದು, ಕೇಂದ್ರ ಸರ್ಕಾರ ರಾಜ್ಯವಾರು ಪಟ್ಟಿ ಬಿಡುಗಡೆ ಮಾಡಿದೆ. ಈವರೆಗೆ ದೇಶದಲ್ಲಿ 101 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ತಿಳಿಸಿದೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 32 ಪ್ರಕರಣಗಳು ದೃಢಪಟ್ಟಿವೆ. ದೆಹಲಿಯಲ್ಲಿ 22, ರಾಜಸ್ಥಾನದಲ್ಲಿ 17, ಕರ್ನಾಟಕ ಹಾಗೂ ತೆಲಗಾಂಣದಲ್ಲಿ ತಲಾ 8, ಗುಜರಾತ್ ಮತ್ತು ಕೇರಳದಲ್ಲಿ ತಲಾ 5, ಆಂಧ್ರಪ್ರದೇಶ, ಚಂಢೀಗಡ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ … Read more

ವಿಧಾನ ಪರಿಷತ್ ನ 14 ಸದಸ್ಯರು ಅಮಾನತು

ಬೆಂಗಳೂರು: ಸಭಾಪತಿ ಅದೇಶ ಉಲ್ಲಂಘನೆ ಮಾಡಿದ ಕಾರಣ, ಕರ್ನಾಟಕ ವಿಧಾನ ವಿಧಾನಪರಿಷತ್ ನ 14 ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಈ ಆದೇಶ ನೀಡಿದ್ದು, ಸದನದ ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಗೊಳಿಸಲಾಗಿದೆ. ಸಿಎಂ ಇಬ್ರಾಹಿಂ, ಎಸ್‌.ಆರ್‌ ಪಾಟೀಲ್‌, ಪಿ.ಆರ್ ರಮೇಶ್‌, ಪ್ರತಾಪ್‌ ಚಂದ್ರ ಶೆಟ್ಟಿ, ನಾರಾಯಣ ಸ್ವಾಮಿ, ಯು.ಬಿ ವೆಂಕಟೇಶ್‌, ನಜೀರ್‌ ಆಹ್ಮದ್‌, ಬಿಕೆ ಹರಿಪ್ರಸಾದ್, ಯಬಿ ವೆಂಕಟೇಶ್, ವೀಣಾ ಅಚ್ಚಯ್ಯ ಸೇರಿ 14 ಮಂದಿಯನ್ನು … Read more

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ

ಇಂಡೋನೇಷ್ಯಾದ ಪೂರ್ವದ ಮಲುಕು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 7.6 ತೀವ್ರತೆ ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಹೇಳಿದೆ. ಫ್ಲೋರ್ಸ್ ಕರಾವಳಿಯಲ್ಲಿ  ಸುನಾಮಿ ಎಚ್ಚರಿಕೆಯನ್ನು ನೀಡಿದ್ದು, ಮೌಮೆರೆಯಿಂದ ಉತ್ತರಕ್ಕೆ 95 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ. ಹೀಗಾಗಿ, ಫ್ಲೋರ್ಸ್ ಸಮುದ್ರದ ಸಮೀಪದ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಉಂಟಾದ ಪ್ರದೇಶಗಳಲ್ಲಿ ಯಾವುದೇ ಹಾನಿ ಅಥವಾ ಸಾವು, ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ

ಉಪ್ಪಿನಂಗಡಿ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ)  ನಾಯಕರನ್ನು ಅಕ್ರಮವಾಗಿ ಬಂಧಿಸಿದ ಹಿನ್ನಲೆ ಸಂಘಟನೆಯ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪಿಎಫ್ಐ ಸ್ಥಳೀಯ ನಾಯಕರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಕಡವಿನಬಾಗಿಲು, ಝಕರಿಯಾ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ತಲವಾರು ದಾಳಿಯಲ್ಲಿ ನಿರಪರಾಧಿಗಳಿಗೆ ಅನ್ಯಾಯವಾಗಬಾರದೆಂಬ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಮಾತನಾಡಲು ಬಂದಂತಹ ಸಂದರ್ಭದಲ್ಲಿ ಪೊಲೀಸರು ಈ ಮೂವರು ಮುಖಂಡರನ್ನು ಠಾಣೆಯಲ್ಲಿ ಕೂರಿಸಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ‌. ಸ್ಥಳದಲ್ಲಿ ಸಂಘಟನೆಯ … Read more

ಕೋಟಾ ಶ್ರೀನಿವಾಸ್ ಪೂಜಾರಿ ಭರ್ಜರಿ ಗೆಲುವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರು ಭರ್ಜರಿ ಜಯ ಗಳಿಸಿದ್ದಾರೆ.  ಚುನಾವಣೆಯಲ್ಲಿ ಒಟ್ಟು 6, 011 ಮತ ಚಲಾವಣೆಯಾಗಿತ್ತು. ಇದರಲ್ಲಿ 5955 ಮತ ಸಿಂಧುವಾಗಿದ್ದು, 56 ಮತಗಳು ಅಸಿಂಧುವಾಗಿದೆ. ಕೋಟ ಶ್ರೀನಿವಾಸ ಪೂಜಾರಿಯವರು ಒಟ್ಟು 3672 ಮತ ಪಡೆದಿದ್ದಾರೆ. ಮಂಜುನಾಥ ಭಂಡಾರಿ ಒಟ್ಟು 2, 079 ಮತ ಸೇರಿದಂತೆ ಎಸ್ ಡಿಪಿಐ ಪಕ್ಷದ ಶಾಫಿ ಕೆ 204 ಮತ ಪಡೆದಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಪತ್ನಿ ನಿಧನ

ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ ಕವಿ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿ (85) ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿದ ರಾಜೇಶ್ವರಿ ತೇಜಸ್ವಿಯವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ವಾಸವಾಗಿದ್ದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದಿದ್ದಾರೆ.1966ರಲ್ಲಿ ಪೂರ್ಣಚಂದ್ರ ತೇಜಸ್ವಿ ಜೊತೆ ವಿವಾಹವಾಗಿದ್ದರು.

ವಿಧಾನ ಪರಿಷತ್ ಚುನಾವಣೆ: ಇಂದು ಮತ ಎಣಿಕೆ

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆಯ ದಿಕ್ಸೂಚಿ ಅಂತಾನೆ ಬಿಂಬಿತವಾಗಿರುವ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಒಟ್ಟು 25 ಕ್ಷೇತ್ರಗಳಲ್ಲಿ 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕಾಂಗ್ರೇಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.