ವಿಟ್ಲ: ಪ.ಪಂಚಾಯತ್ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ವಿಟ್ಲ: ಡೆತ್ ನೋಟು ಬರೆದಿಟ್ಟು ಪಟ್ಟಣ ಪಂಚಾಯತ್ ಸಿಬ್ಬಂದಿ ಬಂಟ್ವಾಳ ನೇತ್ರಾವತಿ ಸೇತುವೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು. ವಿಟ್ಲದ ಮಂಗಳಪದವು ಎಂಬಲ್ಲಿಯ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ರಾಜೇಶ್ ಅವರ ಮೇಲೆ ಲಂಚದ ಅರೋಪ ಮಾಡಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಂಗಳೂರು: ಗಿಫ್ಟ್ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ

ಮಂಗಳೂರು: ಅಪರಿಚಿತನೋರ್ವ ಮನೆ ಕಟ್ಟಲು ಹಣ ಮತ್ತು ಗಿಫ್ಟ್ ನೀಡುವುದಾಗಿ ನಂಬಿಸಿ 2.92 ಲಕ್ಷ ರೂ.ವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಿದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆನರಾ ಬ್ಯಾಂಕ್‌ನ ಕೂಳೂರು ಶಾಖೆಯಲ್ಲಿ ವ್ಯಕ್ತಿ ಖಾತೆಯನ್ನು ಹೊಂದಿದ್ದು, ಸೆ.20ರಂದು ಈ ವ್ಯಕ್ತಿಯ ಮೊಬೈಲ್‌ಗೆ ಬಂದ ವಾಟ್ಸಾಪ್ ಸಂದೇಶದಲ್ಲಿ ಮನೆ ಕಟ್ಟಲು ಹಣ ಮತ್ತು ಗಿಫ್ಟ್ ನೀಡುವುದಾಗಿ ತಿಳಿಸಲಾಗಿತ್ತು. ಆ ಬಳಿಕ ಅಪರಿಚಿತನು ಆಗಾಗ ಸಂದೇಶ ಕಳುಹಿಸಿ ವ್ಯಕ್ತಿಯ ವಿಶ್ವಾಸ ಗಳಿಸಿದ್ದ. ಅ.5ರಂದು … Read more

ದ.ಕ.ಜಿಲ್ಲೆ: 298 ಮಂದಿಗೆ ಕೋವಿಡ್ ಪಾಸಿಟಿವ್, ಓರ್ವ ಬಲಿ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ರವಿವಾರ 298 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. 24 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇ.2.89 ದಾಖಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1,17,641 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,14,669 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 1,705 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸದ್ಯ 1,267 ಸಕ್ರಿಯ ಪ್ರಕರಣವಿದೆ. ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 92,348 ಪ್ರಕರಣ ದಾಖಲಿಸಿ, 1,11,61,030 ರೂ. ದಂಡ ವಸೂಲಿ ಮಾಡಲಾಗಿದೆ … Read more

ವಿಟ್ಲ:ಕೊರಗಜ್ಜನ ವೇಷ ಧರಿಸಿ ವಿಕೃತಿ ಮೆರೆದ ಯುವಕನಿಂದ ವೀಡಿಯೋ ಮೂಲಕ ಕ್ಷಮೆಯಾಚನೆ

ವಿಟ್ಲ: ಮದುವೆ ಸಮಾರಂಭದಲ್ಲಿ ಕೊರಗಜ್ಜ ದೈವದ ವೇಷ ಧರಿಸಿ ಅವಹೇಳನ ಮಾಡಿದ್ದ ಮುಸ್ಲಿಂ ವರ ಕ್ಷಮೆ ಯಾಚಿಸುವ ವಿಡಿಯೋ ಬಹಿರಂಗವಾಗಿದೆ. ತನ್ನ ಮತ್ತು ಇತರರ ವಿರುದ್ಧ ಪೊಲೀಸ್ ದೂರು ದಾಖಲಾದಾಗಿನಿಂದ ತಲೆಮರೆಸಿಕೊಂಡಿರುವ ಉಮರುಲ್ ಬಾಸಿತ್ ಕೇರಳದ ಅಜ್ಞಾತ ಸ್ಥಳದಿಂದ ಕ್ಷಮೆಯಾಚಿಸಿದ್ದು, ತನ್ನ ವರ್ತನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. “ನಾನು ಮತ್ತು ನನ್ನ ಸ್ನೇಹಿತರು ಉತ್ಸಾಹದಲ್ಲಿ ಕೇವಲ ಮೋಜಿಗಾಗಿ ಆ ವೇಷ ಧರಿಸಿದ್ದೇವೆ. ನಮಗೆ ಯಾವುದೇ ಸಮುದಾಯ, ದೇವರು ಅಥವಾ ಯಾರೊಬ್ಬರ ನಂಬಿಕೆಯನ್ನು ನೋಯಿಸುವ … Read more

ದ.ಕ ಜಿಲ್ಲೆಯಲ್ಲಿ ಕರ್ಪ್ಯೂ ನಿಯಮ ಉಲ್ಲಂಘನೆ: 625 ಪ್ರಕರಣಗಳು ದಾಖಲು

ಮಂಗಳೂರು: ಕೋವಿಡ್ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಜಾರಿಗೊಳಿಸಿದ್ದ ವೀಕೆಂಡ್ ಕರ್ಫ್ಯೂ ಉಲ್ಲಂಘಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ.ಜಿಲ್ಲೆಯಲ್ಲಿ 625 ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ನಿಯಮ ಹಾಗೂ ಮೋಟಾರು ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 517 ಪ್ರಕರಣ ದಾಖಲಾಗಿದೆ. ಮಾಸ್ಕ್ ಧರಿಸದ 369 ಪ್ರಕರಣವಲ್ಲದೆ 110ಕ್ಕೂ ಅಧಿಕ ವಾಹನಗಳನ್ನು ಮುಟ್ಟುಗೋಲು ಹಾಕಿ ಬಳಿಕ ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ. ಕಮಿಷನರೇಟ್ ವ್ಯಾಪ್ತಿಯ ಗಡಿ ಭಾಗದ 5 ಸಹಿತ … Read more

ಕೊರಗಜ್ಜನ ವೇಷ ಧರಿಸಿ ವಧುವಿನ ಮನೆಗೆ ವರ ಎಂಟ್ರಿ:ಮುಸ್ಲಿಂ ಒಕ್ಕೂಟ ಖಂಡನೆ

ಮಂಗಳೂರು: ಎರಡು ದಿನಗಳ ಹಿಂದೆ ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜನ ವೇಷ ಧರಿಸಿ ವಧುವಿನ ಮನೆಗೆ ವರ ಬಂದದ್ದು ಖಂಡನೀಯ ಎಂದು ದ.ಕ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ. ಇಂತಹಾ ನೀಚ ಕೃತ್ಯವನ್ನು ಇಸ್ಲಾಂ ಧರ್ಮ ಒಮ್ಮೆಯೂ ಕಲಿಸಿಕೊಟ್ಟಿಲ್ಲ.ಒಂದು ನಿರ್ಧಿಷ್ಟ ಧರ್ಮದ ದೈವದ ವೇಷ ಧರಿಸಿ ಕುಣಿಯುವುದು ಕಾನೂನು ವಿರುದ್ಧವಾಗಿದೆ.ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸುತ್ತದೆ ಎಂದು ಹೇಳಿದರು.

*ಸಿಬ್ಬಂದಿ ನಡುವೆ ಗುಂಪುಗಾರಿಕೆ:ಮಂಗಳೂರು ಮಹಿಳಾ ಪೋಲಿಸ್ ಠಾಣೆಗೆ ಹೊಸ ತಂಡ*

ಮಂಗಳೂರು: ಪಾಂಡೇಶ್ವರದಲ್ಲಿರುವ ಮಹಿಳಾ ಠಾಣೆಯಲ್ಲಿ ಕೆಲ ಸಿಬ್ಬಂದಿ ನಡುವೆ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಇರುವ ಬಗ್ಗೆ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿದ್ದ 32 ಸಂಪೂರ್ಣ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ (ಆರು ಮಂದಿ ಅಮಾನತು ಸೇರಿ) ಮಾಡಲಾಗಿದೆ. ಠಾಣೆಗೆ ಇಬ್ಬರು ಪಿಎಸ್‌ಐ, ಒಬ್ಬರು ಎಚ್‌ಸಿ ಹಾಗೂ 16 ಪಿಸಿಗಳು ಸೇರಿ 20 ಮಂದಿಯ ಹೊಸ ತಂಡವನ್ನು ನೇಮಕ ಮಾಡಿ ಪೊಲೀಸ್ ಆಯಕ್ತ ಎನ್. ಶಶಿಕುಮಾರ್ ಆದೇಶ ನೀಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರೇವತಿಯವರಿಗೆ ಅಪಘಾತವಾಗಿದ್ದು, 2 ತಿಂಗಳ … Read more

ಬೈಲ್ ಬ್ರದರ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ | ಸಮಿತಿಯ ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಪ್ರ.ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ, ಕೋಶಾಧಿಕಾರಿಯಾಗಿ ಸಾದಿಕ್ ಖತರ್ ಆಯ್ಕೆ

ಮಂಜೇಶ್ವರ: ಇಲ್ಲಿನ ಪ್ರತಿಷ್ಠಿತ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಬೈಲ್ ಬ್ರದರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಹಾರಿಸ್ ಕೆದುಂಬಾಡಿ ಅವರು ನೆರೆದವರನ್ನು ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ದೀಕ್ ಖತರ್ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಖಲೀಲ್ RST, ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಉಪಾಧ್ಯಕ್ಷರಾಗಿ ಅನ್ಸಾರ್ ಖತರ್, ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ ಗುಜರಾತ್, ಕಾರ್ಯದರ್ಶಿಯಾಗಿ … Read more

ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ

ಉಪ್ಪಿನಂಗಡಿ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ)  ನಾಯಕರನ್ನು ಅಕ್ರಮವಾಗಿ ಬಂಧಿಸಿದ ಹಿನ್ನಲೆ ಸಂಘಟನೆಯ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪಿಎಫ್ಐ ಸ್ಥಳೀಯ ನಾಯಕರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಕಡವಿನಬಾಗಿಲು, ಝಕರಿಯಾ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ತಲವಾರು ದಾಳಿಯಲ್ಲಿ ನಿರಪರಾಧಿಗಳಿಗೆ ಅನ್ಯಾಯವಾಗಬಾರದೆಂಬ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಮಾತನಾಡಲು ಬಂದಂತಹ ಸಂದರ್ಭದಲ್ಲಿ ಪೊಲೀಸರು ಈ ಮೂವರು ಮುಖಂಡರನ್ನು ಠಾಣೆಯಲ್ಲಿ ಕೂರಿಸಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ‌. ಸ್ಥಳದಲ್ಲಿ ಸಂಘಟನೆಯ … Read more

ಕೋಟಾ ಶ್ರೀನಿವಾಸ್ ಪೂಜಾರಿ ಭರ್ಜರಿ ಗೆಲುವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರು ಭರ್ಜರಿ ಜಯ ಗಳಿಸಿದ್ದಾರೆ.  ಚುನಾವಣೆಯಲ್ಲಿ ಒಟ್ಟು 6, 011 ಮತ ಚಲಾವಣೆಯಾಗಿತ್ತು. ಇದರಲ್ಲಿ 5955 ಮತ ಸಿಂಧುವಾಗಿದ್ದು, 56 ಮತಗಳು ಅಸಿಂಧುವಾಗಿದೆ. ಕೋಟ ಶ್ರೀನಿವಾಸ ಪೂಜಾರಿಯವರು ಒಟ್ಟು 3672 ಮತ ಪಡೆದಿದ್ದಾರೆ. ಮಂಜುನಾಥ ಭಂಡಾರಿ ಒಟ್ಟು 2, 079 ಮತ ಸೇರಿದಂತೆ ಎಸ್ ಡಿಪಿಐ ಪಕ್ಷದ ಶಾಫಿ ಕೆ 204 ಮತ ಪಡೆದಿದ್ದಾರೆ.