ಅಫ್ಘಾನಿಸ್ತಾನದಲ್ಲಿ ಭೂಕಂಪ 26 ಮಂದಿ ಮೃತ್ಯು

ಹೆರಾತ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸೋಮವಾರ ನಡೆದ ಭೀಕರ ಭೂಕಂಪದಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮ ಪ್ರಾಂತ್ಯ ಬದ್ಘೀಸ್‌ನ ಖದೀಸ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ವೇಳೆ ಮನೆಗಳ ಛಾವಣಿಗಳು ಕುಸಿದು ಬಿದ್ದು ಬಹುತೇಕ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬರ್ ಮೊಹ್ಮದ್ ಸರ್ವರಿ ಎಎಫ್‌ಪಿಗೆ ತಿಳಿಸಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3ರಷ್ಟಿತ್ತು ಎಂದು ಯುಎಸ್ ಜಿಯಲಾಜಿಕಲ್ ಸರ್ವೆ ಹೇಳಿದೆ. “ಭೂಕಂಪದಲ್ಲಿ ಐದು ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 26 ಮಂದಿ … Read more

ಫೆಸಿಫಿಕ್ ಸಾಗರದಲ್ಲಿ ಜ್ವಾಲಾಮುಖಿ ಸ್ಫೋಟ: ಸುನಾಮಿ ಸಾಧ್ಯತೆ.

ಟೊಂಗಾ: ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಪರಿಣಾಮ 20 ಕಿಲೋಮೀಟರ್ ಎತ್ತರಕ್ಕೆ ಬೂದಿ ಹಾರಿದ್ದು, ಆಕಾಶವನ್ನು ಬೂದು ಮೋಡಗಳು ಆವರಿಸಿವೆ. ಸ್ಪೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸ್ಪೋಟಗೊಂಡ ಸ್ಫಳದಿಂದ ಸುಮಾರು 800 ಕಿ.ಮಿ ದೂರದಲ್ಲಿರುವ ಫಿಜಿ ದ್ವೀಪದಲ್ಲೂ ಸ್ಪೋಟದ ಶಬ್ದ ಕೇಳಿ ಬಂದಿದೆ. ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಹಲವಾರು ಉಪಗ್ರಹಗಳು ಜ್ವಾಲಾಮುಖಿ ಸ್ಫೋಟವನ್ನು ಚಿತ್ರೀಕರಿಸಿವೆ. ಹಿಮವಾರಿ ಸ್ಯಾಟಲೈಟ್ ಚಿತ್ರೀಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕರಾವಳಿ ಪ್ರದೇಶದ ನಿವಾಸಿಗಳು … Read more

ದ.ಕ. ಜಿಲ್ಲೆ: ಇಂದು ರಾತ್ರಿ 10ರಿಂದ ಜ.17ರ ಮುಂಜಾನೆಯವರೆಗೆ ವೀಕೆಂಡ್ ಕರ್ಫ್ಯೂ

ಮಂಗಳೂರು: ಒಮೈಕ್ರಾನ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಶುಕ್ರವಾರ (ಜ.14) ರಾತ್ರಿ 10ರಿಂದ ಆರಂಭಗೊಳ್ಳಲಿದ್ದು, ಸೋಮವಾರ (ಜ.17) ಮುಂಜಾನೆ 5ರವರೆಗೆ ಮುಂದುವರಿಯಲಿದೆ ಎಂದು ದ.ಕ.ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ (ಶನಿವಾರ ಮತ್ತು ರವಿವಾರ) ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಒಳಾಂಗಣದಲ್ಲಿ 100 ಮತ್ತು ಹೊರಾಂಗಣದಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಪೂರ್ವನಿಗದಿತ ಹರಕೆ ಯಕ್ಷಗಾನ, ಯಕ್ಷಗಾನ, ದೇವ- ದೈವಾರಾಧನೆಯನ್ನು 100 ಮಂದಿಗೆ ಸೀಮಿತಗೊಳಿಸಿ ಕಾರ್ಯಕ್ರಮವಾಗಿ ನಡೆಸಬಹುದಾಗಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದ್ದು, ಇತರ … Read more

ಭಾರತ-ಪಾಕ್ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು ಎಪ್ಪತ್ತು ದಶಕದ ನಂತರ ಭೇಟಿಯಾದರು.

ಇಸ್ಲಾಮಾಬಾದ್: 1947ರ ಭಾರತ – ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು ಕರ್ತಾರ್ ಪುರದಲ್ಲಿ ಮತ್ತೆ ಒಂದಾಗಿದ್ದಾರೆ. ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಪೈಸಲಾಬಾದ್ ನ ನಿವಾಸಿ ಸಿದ್ದೀಕ್ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹೆಬ್ ನಿಂದ ಭಾರತದ ಗಡಿಗೆ ಸಂಪರ್ಕವಿರುವ ಕರ್ತಾರ್ ಪುರ ಕಾರಿಡಾರ್ ಮೂಲಕ ಕರ್ತಾರ್ ಪುರಕ್ಕೆ ಆಗಮಿಸಿದ ಹಿರಿಯ ಸಹೋದರ ಅವರನ್ನಯ ಮುಖತ್ಹ ಬೇಟಿಯಾದರು. ಇವರ ಸಹೋದರ ಹಬೀಬ್ ಭಾರತದ ಪಂಜಾಬ್‌ನ ಪುಲ್ಲನ್ವಾಲ್ ನಲ್ಲಿ ವಾಸಿಸುತ್ತಿದ್ದಾರೆಂದು ಅಂತರರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ. … Read more

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೋನಾ ಸೋಂಕು ದೃಢ

ಫುಟ್ಬಾಲ್ ಲೋಕದ ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೊನಾ ವೈರಸ್‌ ಪೊಸಿಟಿವ್ ಉಂಟಾಗಿದ್ದು, ಸ್ವಯಂ ಐಸೊಲೇಶನ್‌ಗೆ ಒಳಗಾಗಿದ್ದಾರೆ ಎಂದು ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ಅಧಿಕೃತವಾಗಿ ತಿಳಿಸಿದೆ. ಫ್ರೆಂಚ್ ಕಪ್‌ನಲ್ಲಿ ವ್ಯಾನ್ನೆಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭದಲ್ಲಿ ಲಿಯೋನೆಲ್ ಮೆಸ್ಸಿ ಜೊತೆಗೆ ಹುವಾ ಬರ್ನೆಟ್, ಬ್ಯಾಕಪ್ ಗೋಲ್ಕೀಪರ್ ಸೆರ್ಗಿಯೋ ರಿಕೊ ಮತ್ತು 19 ವರ್ಷದ ಮಿಡ್‌ಫೀಲ್ಡರ್ ನಾಥನ್ ಬಿಟುಮ್ಜಾಲಾ ಎಂಬ ಆಟಗಾರರೂ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂಬುದನ್ನು ಪಿ ಎಸ್ ಜಿ ಬಹಿರಂಗ ಪಡಿಸಿದೆ.

6 ಕೋಟಿ ವರ್ಷ ಹಳೆಯ ಡೈನೋಸಾರ್ ಮೊಟ್ಟೆಯಲ್ಲಿ ಸಂರಕ್ಷಿತ ಭ್ರೂಣ ಪತ್ತೆ

ಚೀನಾದ ದಕ್ಷಿಣ ಭಾಗದಲ್ಲಿರುವ ಗಂಝೌ ಪ್ರಾಂತ್ಯದ ಕಲ್ಲುಬಂಡೆಗಳ ನಡುವೆ ದೊರೆತ ಡೈನೋಸಾರ್ ಮೊಟ್ಟೆಯ ಒಳಗೆ ಭ್ರೂಣವನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ವಿಜ್ಞಾನ ಲೋಕದಲ್ಲಿ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ. ಈ ಮೊಟ್ಟೆಯು 72 ರಿಂದ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಭ್ರೂಣ ಇದ್ದ ಸ್ಥಿತಿ ವಿಜ್ಞಾನಿಗಳಲ್ಲಿ ಸಾಕಷ್ಟು ಆಸಕ್ತಿ ಮೂಡಿಸಿದೆ. ಭ್ರೂಣದ ತಲೆಯು ಅದರ ದೇಹದ ಅಡಿಯಲ್ಲಿ ಇತ್ತು. ಅದರ ಕಾಲುಗಳು ಎರಡೂ ಬದಿಗೆ ಹಿಂದಕ್ಕೆ ಚಾಚಿಕೊಂಡಿದ್ದು, ಮೊಟ್ಟೆಯ ತುದಿಯವರೆಗೂ ಇವೆ ಎಂದು … Read more

ಡೆಲ್ಟಾ ಆಯಿತು, ಒಮಿಕ್ರಾನ್ ಆಯಿತು .ಇದೀಗ ಡೆಲ್ಮಿಕ್ರಾನ್ ಎಂಬ ಹೊಸ ರೂಪಾಂತರಿಯ ಭೀತಿ

ವಿಶ್ವದಾದ್ಯಂತ ವ್ಯಾಪಕವಾಗಿ ಭೀತಿಯೆಬ್ಬಿಸಿದ ಕೊರೋನಾ ವೈರಸ್ ಸೋಂಕು ಒಂದೊಂದು ರೂಪಾಂತರಿಯ ಮೂಲಕ ವಿಶ್ವವನ್ನು ಮತ್ತೆ ನಿಬ್ಬೆರಗಾಗಿಸುತ್ತಿದೆ. ಡೆಲ್ಟಾ ಅಲೆಯು ಮಾಸಿ ಹೋಗುತ್ತಿರುವಾಗಲೇ, ಓಮಿಕ್ರಾನ್ ಎಂಬ ನವ ರೂಪಾಂತರಿ ಆವರಿಸಿತ್ತು. ಇದೆರಡರ ಸಂಪೂರ್ಣ ಹಾವಳಿ ಮುಗಿಯದಿರುವಾಗಲೇ ಇದೀಗ ಹೊಸದೊಂದು ರೂಪಾಂತರಿಯೊಂದು ಆವರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದುವೇ ಡೆಲ್ಟಾ ಮತ್ತು ಓಮಿಕ್ರಾನ್ ಸಂಯೋಜನೆಯ ಡೆಲ್ಮಿಕ್ರಾನ್ ರೂಪಾಂತರಿ. ಇದು ಓಮಿಕ್ರಾನ್ ಗಿಂತಲೂ ತೀವ್ರ ಸ್ವರೂಪವನ್ನು ಹೊಂದಿದೆಯಂತೆ. ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತಿದೆ. ಇದಕ್ಕೆ … Read more

ಏಷ್ಯನ್ ಚಾಂಪಿಯನ್ ಹಾಕಿ ಟ್ರೋಫಿ: ಪಾಕ್ ಮಣಿಸಿ ಕಂಚು ಗೆದ್ದ ಭಾರತ

ನವದೆಹಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್‍ನಲ್ಲಿ ಬುಧವಾರ ನಡೆದ ಮೂರನೇ-ನಾಲ್ಕನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗಳಿಸಿದೆ. ಭಾರತವು 4-3 ರಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ

ಬಿಡಬ್ಲ್ಯೂಎಫ್ ಭಾರತಕ್ಕೆ ಪದಕ ಖಚಿತ

ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಪದಕ ಗೆಲ್ಲೋದು ಖಚಿತವಾಗಿದೆ. ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಈ ಮೂಲಕ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕಗಳು ಖಚಿತವಾಗಿವೆ. ನಾಳೆ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಮತ್ತು ಸೇನ್ ಮುಖಾಮುಖಿಯಾಗುವುದರಿಂದ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. ಶ್ರೀಕಾಂತ್ ಕೇವಲ 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-8 21-7ರಿಂದ ನೆದರ್ಲೆಂಡ್ಸ್‌ನ ಮಾರ್ಕ್ ಕ್ಯಾಲ್ಜೋವ್ ಅವರನ್ನು … Read more

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ

ಇಂಡೋನೇಷ್ಯಾದ ಪೂರ್ವದ ಮಲುಕು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 7.6 ತೀವ್ರತೆ ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಹೇಳಿದೆ. ಫ್ಲೋರ್ಸ್ ಕರಾವಳಿಯಲ್ಲಿ  ಸುನಾಮಿ ಎಚ್ಚರಿಕೆಯನ್ನು ನೀಡಿದ್ದು, ಮೌಮೆರೆಯಿಂದ ಉತ್ತರಕ್ಕೆ 95 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ. ಹೀಗಾಗಿ, ಫ್ಲೋರ್ಸ್ ಸಮುದ್ರದ ಸಮೀಪದ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಉಂಟಾದ ಪ್ರದೇಶಗಳಲ್ಲಿ ಯಾವುದೇ ಹಾನಿ ಅಥವಾ ಸಾವು, ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.