ರಾಜ್ಯದಲ್ಲಿ ಇಂದು 42,470 ಮಂದಿಗೆ ಕೊರೋನಾ ಸೋಂಕು, ಪಾಸಿಟಿವಿಟಿ ದರ 19.33%

ರಾಜ್ಯದಲ್ಲಿ ಇಂದು ಹೊಸದಾಗಿ 42,470 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇಂದು 26 ಮಂದಿ ಬಲಿಯಾಗಿದ್ದಾರೆ. ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರಿನಲ್ಲಿ 17,266 ಸೇರಿದಂತೆ ರಾಜ್ಯಾಧ್ಯಂತ 42,470 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ತಿಳಿಸಿದ್ದಾರೆ. ಪಾಸಿಟಿವಿಟಿ ದರ 19.33%ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 35,140 ಜನರು ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಮಂಗಳೂರಿನಲ್ಲಿ ಮೃತಪಟ್ಟಿದ್ದ ವ್ಯಕ್ತಿ ಉಪ್ಪಳ ತಲುಪಿದಾಗ ಜೀವಂತ

ಬದಿಯಡ್ಕ ನಿವಾಸಿಯೋರ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಮೃತಪಟ್ಟಿದ್ದಾರೆ ಎಂದು ಖಚಿತ ಪಡಿಸಿ ಮನೆಯವರಿಗೆ ಬಿಟ್ಟು ಕೊಟ್ಟಿದ್ದು, ಆ ವ್ಯಕ್ತಿಯು ಮಾರ್ಗ ಮಧ್ಯೆ ಜೀವಂತವಾಗಿ ಉಸಿರಾಡಿದ ಘಟನೆ ನಡೆದಿದೆ. ತೀವ್ರ ಅಸೌಖ್ಯದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಾದ ಗುರುವ (60) ಎಂಬವರನ್ನು ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ತಪಾಸಣೆ ನಡೆಸಿದ ವೈದ್ಯರು, ರೋಗಿಯು ಆಕ್ಸಿಜನ್ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದು, ಆಕ್ಸಿಜನ್ ತೆಗೆದರೆ ಪ್ರಾಣ ಹೋಗುತ್ತದೆ ಎಂದು ಹೇಳಿದ್ದರು. ಅದರಂತೆ ಆಕ್ಸಿಜನ್ ತೆರವುಗೊಳಿಸಲಾಗಿತ್ತು. ಬಳಿಕ ಮನೆಗೆ … Read more

ಚಿಕ್ಕಮಗಳೂರು: 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ 27 ಪೊಲೀಸರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಮೂವರು ಪೊಲೀಸ್ ಅಧಿಕಾರಿಗಳು ಹಾಗೂ 24 ಸಿಬ್ಬಂದಿ ಸೋಂಕಿಗೆ ಪಾಸಿಟಿವ್ ಆಗಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ದೃಢಪಡಿಸಿದ್ದಾರೆ. ಕೋವಿಡ್ ಸೋಂಕಿತ ಪೊಲೀಸರ ಪೈಕಿ ಯಾರಲ್ಲೂ ರೋಗದ ಲಕ್ಷಣಗಳಿಲ್ಲ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ ಸೋಂಕು ದೃಢಪಟ್ಟವರಿಗೆ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರ ತಪಾಸಣೆಯನ್ನೂ ಮಾಡಲಾಗುತ್ತಿದೆ. ಕರ್ತವ್ಯದ ನಡುವೆ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಸಿಬ್ಬಂದಿಗೆ ಎಸ್ಪಿ ಸೂಚನೆ … Read more

ಕೊರೋನ ನಿಯಂತ್ರಣ ಹಿನ್ನೆಲೆ:ಜನವರಿ 31ರ ವರೆಗೆ ನಿರ್ಬಂಧ ಮುಂದುವರಿಕೆ; ಸಿ.ಎಂ. ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆ ನೀಡುತ್ತಿರುವ ಕೊರೋನಾ ವರದಿ ಪ್ರಕಾರ ಕೋವಿಡ್ ಪಾಸಿಟಿವ್ ದರ ಹೆಚ್ಚಾಗುತ್ತಿದ್ದು ಜನವರಿ 31ರ ವರೆಗೆ ಹೆಚ್ಚುವರಿ ನಿಯಂತ್ರಣ ಜಾರಿಗೊಳಿಸಿದೆ. ಈ ಬಗ್ಗೆ ಮೀಟಿಂಗ್ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಸರ್ಕಾರದ ನಿರ್ಧಾರದ ಪ್ರಕಾರ ಜನವರಿ 31ರ ವರೆಗೆ ಎಲ್ಲಾ ಪ್ರತಿಭಟನೆ ಹಾಗೂ ರ್ಯಾಲಿ ಗಳನ್ನು ನಿಷೇಧಿಸಲಾಗಿದೆ. ಹಾಗೂ ಶಾಲೆಗಳನ್ನು ಮುಚ್ಚುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಮದುವೆ ಸಮಾರಂಭಗಳು ತರೆದ ಸ್ಥಳದಲ್ಲಾದರೆ 200 ಮಂದಿ ಹಾಗೂ ಒಳಾಂಗಣದಲ್ಲಾದರೆ 100 ಮಂದಿಗೆ ಸೇರಲು ಅವಕಾಶ … Read more

15 ವರ್ಷ ಮೇಲ್ಪಟ್ಟ ವರಿಗೆ ಇಂದಿನಿಂದ ಲಸಿಕಾ ಅಭಿಯಾನ

ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆಯ ಸ್ಪಷ್ಟ ಸೂಚನೆ ಕಂಡುಬಂದಿರುವ ಬೆನ್ನಲ್ಲೇ, 15 ರಿಂದ 18 ವವರ್ಷ ವಯಸ್ಸಿನವರಿಗೆ ಕೋವಿಡ್-19 ವಿರುದ್ಧದ ಲಸಿಕೆ ನೀಡಿಕೆ ಇಂದಿನಿಂದ ದೇಶಾದ್ಯಂತ ಆರಂಭವಾಗಲಿದೆ. ಆದರೆ ಭಾರತ್ ಬಯೋಟೆಕ್ ದೇಶೀಯವಾಗಿ ಉತ್ಪಾದಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಈ ವಯೋವರ್ಗದವರಿಗೆ ನೀಡಲಾಗುತ್ತಿದೆ. ಈ ವರ್ಗಕ್ಕೆ ಲಸಿಕೆ ನೀಡುವ ಉದ್ದೇಶದಿಂದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಲಸಿಕಾ ಡೋಸ್‌ಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಜನವರಿ 3ರಿಂದ 15-18 ವರ್ಷದೊಳಗಿನ ಯುವಕರಿಗೆ … Read more

ರಾಜ್ಯದಲ್ಲಿ ಜನವರಿಯಲ್ಲೇ ಕೋವಿಡ್ ಮೂರನೇ ಅಲೆಯ ಸಂಭಾವ್ಯತೆಯ ಎಚ್ಚರಿಕೆ ನೀಡಿದ ತಜ್ಞರು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನವರಿ ತಿಂಗಳಲ್ಲೇ ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 810 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯಾದ್ಯಂತ ಪ್ರಕರಣಳ ಸಂಖ್ಯೆ ಏರಿಕೆಯಾಗುತ್ತಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಸತಿ ಶಾಲೆ, ಹಾಸ್ಟೆಲ್, ಅಪಾರ್ಟ್ ಮೆಂಟ್, ಮಾಲ್ ಮತ್ತು ಜನಸಂದಣಿ ಇರುವ ಇತರ … Read more

12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ತುರ್ತು ಲಸಿಕೆ ಬಳಕೆಗೆ ಅನುಮೋದನೆ ನೀಡಿದ ಡಿಜಿಸಿಐ

ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಭೀತಿ ಹೆಚ್ಚಾಗಿದ್ದು, ಮಹಾಮಾರಿ ಕೊರೊನಾ ಮಕ್ಕಳನ್ನೇ ಗುರಿ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್‌ ಬಯೋಟೆಕ್‌ ಲಸಿಕೆʼ ತುರ್ತು ಬಳಕೆಗೆ ಡಿಜಿಸಿಐ ಶನಿವಾರ ಭಾರತ್ ಬಯೋಟೆಕ್ ಗೆ ಅನುಮೋದನೆ ನೀಡಿದೆ. ದೇಶದಲ್ಲಿ ಕೊರೊನಾ ಸೋಂಕಿನ ನಡುವೆ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಮುನ್ನೆಚ್ಗರಿಕೆ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಟಫ್ ರೂಲ್ಸ್ ಜಾರಿಗೆ ಬಂದಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ವೇಗವಾಗಿ … Read more

ಡೆಲ್ಟಾ ಆಯಿತು, ಒಮಿಕ್ರಾನ್ ಆಯಿತು .ಇದೀಗ ಡೆಲ್ಮಿಕ್ರಾನ್ ಎಂಬ ಹೊಸ ರೂಪಾಂತರಿಯ ಭೀತಿ

ವಿಶ್ವದಾದ್ಯಂತ ವ್ಯಾಪಕವಾಗಿ ಭೀತಿಯೆಬ್ಬಿಸಿದ ಕೊರೋನಾ ವೈರಸ್ ಸೋಂಕು ಒಂದೊಂದು ರೂಪಾಂತರಿಯ ಮೂಲಕ ವಿಶ್ವವನ್ನು ಮತ್ತೆ ನಿಬ್ಬೆರಗಾಗಿಸುತ್ತಿದೆ. ಡೆಲ್ಟಾ ಅಲೆಯು ಮಾಸಿ ಹೋಗುತ್ತಿರುವಾಗಲೇ, ಓಮಿಕ್ರಾನ್ ಎಂಬ ನವ ರೂಪಾಂತರಿ ಆವರಿಸಿತ್ತು. ಇದೆರಡರ ಸಂಪೂರ್ಣ ಹಾವಳಿ ಮುಗಿಯದಿರುವಾಗಲೇ ಇದೀಗ ಹೊಸದೊಂದು ರೂಪಾಂತರಿಯೊಂದು ಆವರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದುವೇ ಡೆಲ್ಟಾ ಮತ್ತು ಓಮಿಕ್ರಾನ್ ಸಂಯೋಜನೆಯ ಡೆಲ್ಮಿಕ್ರಾನ್ ರೂಪಾಂತರಿ. ಇದು ಓಮಿಕ್ರಾನ್ ಗಿಂತಲೂ ತೀವ್ರ ಸ್ವರೂಪವನ್ನು ಹೊಂದಿದೆಯಂತೆ. ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತಿದೆ. ಇದಕ್ಕೆ … Read more

ಒಮೈಕ್ರಾನ್ ಆತಂಕ: ರಾಜಧಾನಿಯಲ್ಲಿ ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ನಿಷೇಧ

ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳ ಮತ್ತು ಒಮೈಕ್ರಾನ್‌ ರೂಪಾಂತರದ ಆತಂಕದಿಂದಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ವು ರಾಜ್ಯದಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಕೂಟ ನಡೆಯದಂತೆ ನೋಡಿಕೊಳ್ಳಲು ಬುಧವಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಮುಂಚಿತವಾಗಿ ಸಂಭಾವ್ಯ ಕೊರೊನಾ ಸೂಪರ್‌ಸ್ಪ್ರೆಡರ್ ಪ್ರದೇಶಗಳನ್ನು ಗುರುತಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ (DMs) ಆದೇಶಿಸಿದೆ. ಜನರು ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸುವುದನ್ನು ಮತ್ತು ಮಾಸ್ಕ್‌ಗಳನ್ನು ಧರಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಉಪ ಕಮಿಷನರ್‌ಗಳಿಗೆ … Read more

ವಿನೀತ ಭಾವದ “ಪುನೀತ”ನಿಗೆ ಅಕ್ಷರ ನಮನ

ಬಾಲಾಜಿ ಕುಂಬಾರ ಅವರ ಅಕ್ಷರ ನಮನ ‘ಪುನೀತ್’ ನಮನ ———————— ‘ದೊಡ್ಮನೆ ಹುಡ್ಗ’ ಥೇಟ್ ಅಪ್ಪನಂತೆ ‘ನಟಸಾರ್ವಭೌಮ’ ನಾಗಿ ನಟಿಸಿದ ‘ರಾಜಕುಮಾರ್’ ನಮ್ಮ ‘ಅಪ್ಪು’ ‘ಯಾರೇ ಕೂಗಾಡಲಿ’ ‘ವೀರ ಕನ್ನಡಿಗ’ ನಾಗಿ ‘ನಮ್ಮ ಬಸವ’ ನಂತೆ ಸದಾ ‘ಬಿಂದಾಸ್’ ದಿಂದ ‘ಅಭಿ’ನಯಿಸಿದ ನಮ್ಮ ‘ಯುವರತ್ನ’ ‘ಆಕಾಶ’ದ ‘ಚಲಿಸುವ ಮೋಡಗಳ’ಲ್ಲಿ ‘ಎರಡು ನಕ್ಷತ್ರಗಳ’ ಬೆಳಗಿನಲ್ಲಿ ‘ಬೆಟ್ಟದ ಹೂವಾಗಿ’ ‘ಮಿಲನ-ಮೈತ್ರಿ’ದೊಂದಿಗೆ ‘ಹೊಸ ಬೆಳಕು’ ಮೂಡಿಸಿದ ‘ಅಂಜನಿಪುತ್ರ’ ‘ಶಿವ ಮೆಚ್ಚಿದ ಕಣ್ಣಪ್ಪ’ನಿಗೆ ‘ಚಕ್ರವ್ಯೂಹ’ ದಿಂದ ‘ಪ್ರೇಮದ ಕಾಣಿಕೆ’ಯಾಗಿ ‘ಪೃಥ್ವಿ’ಯಿಂದ ‘ಭಾಗ್ಯವಂತ’ನಿಗೆ ಕರೆಸಿಕೊಂಡನು … Read more