ಬೈಲ್ ಬ್ರದರ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ | ಸಮಿತಿಯ ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಪ್ರ.ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ, ಕೋಶಾಧಿಕಾರಿಯಾಗಿ ಸಾದಿಕ್ ಖತರ್ ಆಯ್ಕೆ

ಮಂಜೇಶ್ವರ: ಇಲ್ಲಿನ ಪ್ರತಿಷ್ಠಿತ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಬೈಲ್ ಬ್ರದರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಹಾರಿಸ್ ಕೆದುಂಬಾಡಿ ಅವರು ನೆರೆದವರನ್ನು ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ದೀಕ್ ಖತರ್ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಖಲೀಲ್ RST, ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಉಪಾಧ್ಯಕ್ಷರಾಗಿ ಅನ್ಸಾರ್ ಖತರ್, ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ ಗುಜರಾತ್, ಕಾರ್ಯದರ್ಶಿಯಾಗಿ … Read more

ಯುಎಇ: ಇಂದಿನಿಂದ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಜಾರಿ

ದುಬೈ: ಬೇಸಿಗೆ ಕಾಲವು ಆಗಮನವಾದ ಹಿನ್ನೆಲೆಯಲ್ಲಿ ಯುಎಇ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರಲು ತೊಡಗಿದೆ.‍ ಹೀಗಾಗಿ ಬಿಸಿಲು ನೇರವಾಗಿ ಮೈ ಮೇಲೆ ಬೀಳುವ ಯಾವುದೇ ಉದ್ಯೋಗಿಗಳಿಗೆ ಮತ್ತಿತರ ಹೊರಾಂಗಣ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಜಾರಿಗೆ ಬಂದಿದೆ. ಮಧ್ಯಾಹ್ನ 12:30 ರಿಂದ ಸಂಜೆ 3 ಗಂಟೆಯ ವರೆಗೆ ಹೊರಾಂಗಣ ಕಾರ್ಮಿಕರು ಕೆಲಸ ಮಾಡುವುದಕ್ಕೆ ಇಂದಿನಿಂದ ನಿಷೇಧವಿರಲಿದೆ ಎಂದು ಯುಎಇ ಮಾನವ ಸಂಪನ್ಮೂಲ ಸಚಿವಾಲಯವು ತಿಳಿಸಿದೆ. ಜೂನ್ 15 ರಿಂದ ಸೆಪ್ಟೆಂಬರ್ 15 ರ ವರೆಗೆ ಈ ನಿಷೇಧವು ಜಾರಿಯಲ್ಲಿರಲಿದೆ. ಯಾವುದೇ … Read more

ಅನಿವಾಸಿ ಕನ್ನಡಿಗರ ಒಕ್ಕೂಟ, ಯುಎಇ ವತಿಯಿಂದ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ | ಜನಮನ ಸೆಳೆಯಿತು ಕಾರ್ಯಕ್ರಮ

ದುಬೈ : ಹಲವಾರು ವರ್ಷಗಳಿಂದ ಯುಎಇಯಾದ್ಯಂತ ಸಾಮಾಜಿಕ ರಂಗದಲ್ಲಿ ಸೇವೆಗೈಯುತ್ತಿರುವ ಅನಿವಾಸಿ ಕನ್ನಡಿಗರ ಒಕ್ಕೂಟ, ಯುಎಇ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಜರುಗಿದ ಈ ಬೃಹತ್ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿ, ಜನಮನ ಸೆಳೆಯಿತು. ಅನಿವಾಸಿ ಕನ್ನಡಿಗರ ಒಕ್ಕೂಟ, ಯುಎಇಯ ಪ್ರಮುಖ ಶಾಫಿ ಬಜ್ಪೆಯವರು ಮಾತನಾಡಿ, ಪ್ರತಿಯೊಬ್ಬ ರಕ್ತದಾನಿಯೂ ಇನ್ನೊಬ್ಬರ ಜೀವ ರಕ್ಷಕನಾಗಿರುತ್ತಾನೆ. ಪ್ರತಿಯೊಬ್ಬರೂ ರಕ್ತದಾನ ನೀಡುವ  ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಶಿಬಿರದಲ್ಲಿ ಬರೋಬ್ಬರಿ ಒಟ್ಟು 105 ಜೀವದಾನಿಗಳು … Read more

ಯುಎಇ : ಭಾರತದಿಂದ ಹೋಗುವ ವಿಮಾನ ಪ್ರಯಾಣದ ಮೇಲಿನ ನಿಷೇಧ ಜೂನ್ 30 ರ ವರೆಗೆ ಮುಂದುವರಿಕೆ

ಅಬುದಾಬಿ: ಭಾರತದಿಂದ ಯುಎಇ ಗೆ ಹೋಗುವ ವಿಮಾನ ಪ್ರಯಾಣಕ್ಕೆ ಹೇರಿರುವ ನಿಷೇಧದ ಅವಧಿಯನ್ನು ಜೂನ್ 30 ರ ವರೆಗೆ ಮುಂದೂಡಲಾಗಿದೆ. ಜೂನ್ ಹದಿನಾಲ್ಕರಂದು ನಿಷೇಧ ಮುಗಿಯಲಿದೆಯೆಂದು ನಿರೀಕ್ಷಿಸಿದ್ದ ಅನಿವಾಸಿಗಳಿಗೆ ಮತ್ತೊಮ್ಮೆ ನಿರಾಸೆ ಅನುಭವಿಸಬೇಕಾಗಿ ಬಂದಿದೆ. ಈ ಬಗ್ಗೆ ಯುಎಇಯ ನಾಗರಿಕ ವಿಮಾನಯಾನ ಇಲಾಖೆಯು ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳು ಜಂಟಿಯಾಗಿ ಪ್ರಕಟಣೆ ಹೊರಡಿಸಿದೆ. ಈ ಮೊದಲು ಪ್ರಕಟಿಸಿದಂತೆಯೇ ಕಳೆದ ಹದಿನಾಲ್ಕು ದಿನಗಳೊಳಗೆ ಭಾರತದಲ್ಲಿ ತಂಗಿದವರಿಗೂ, ಹದಿನಾಲ್ಕು ದಿನಗಳೊಳಗೆ ಭಾರತದ ಮೂಲಕ ಯುಎಇ ಪ್ರವೇಶಿಸುವ ಇತರ ದೇಶದವರಿಗೂ ಯುಎಇ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ರಾಜತಾಂತ್ರಿಕರಿಗೆ, ಯುಎಇ ಪ್ರಜೆಗಳಿಗೆ ಮತ್ತು ಗೋಲ್ಡನ್ ವೀಸಾ … Read more

ಸೌದಿ ಅರೇಬಿಯಾ: ಪ್ರಯಾಣ ನಿಷೇಧದ ಕಾರಣದಿಂದ ಊರಿನಲ್ಲಿ ಉಳಿದುಕೊಂಡಿರುವ ಅನಿವಾಸಿಗಳ ವೀಸಾಗಳ ಉಚಿತ ನವೀಕರಣ

ರಿಯಾದ್: ಕೋವಿಡ್ ಎರಡನೇ ಅಲೆಯು ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಪ್ರಯಾಣಿಕರಿಗೆ ಸೌದಿ ಅರೇಬಿಯಾಗೆ ಆಗಮಿಸಲು ನಿಷೇಧ ಹೇರಲಾಗಿತ್ತು. ಈ ಕಾರಣದಿಂದಾಗಿ ಸೌದಿಗೆ ಪ್ರಯಾಣಿಸಲು ಸಾಧ್ಯವಾಗದೇ ಊರಿನಲ್ಲಿ ಉಳಿದುಕೊಂಡವರಿಗೆ ಶುಭ ಸುದ್ದಿಯೊಂದು ಬಂದಿದೆ. ಇಂತಹ ಅನಿವಾಸಿಗಳ ವೀಸಾಗಳನ್ನು ಉಚಿತವಾಗಿ ನವೀಕರಿಸಲು ಸೌದಿ ದೊರೆ ಸಲ್ಮಾನ್ ವಿಶೇಷ ಅಧಿಸೂಚನೆ ನೀಡಿರುತ್ತಾರೆ. ಇಕಾಮ, ಸಂದರ್ಶನ ವೀಸಾಗಳು, ರೀ ಎಂಟ್ರೀ ವೀಸಾಗಳೂ ಉಚಿತ ನವೀಕರಣದ ವ್ಯಾಪ್ತಿಯಲ್ಲಿ ಒಳಪಡುತ್ತವೆ. ಜೂನ್ ಎರಡನೇ ತಾರೀಖಿನವರೆಗೆ ಈ ವೀಸಾಗಳನ್ನು ನವೀಕರಣ ಮಾಡಲಾಗುವುದೆಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ … Read more

ಯುಎಇ : ಭಾರತದಿಂದ ಹೋಗುವ ವಿಮಾನ ಪ್ರಯಾಣದ ಮೇಲಿನ ನಿಷೇಧದ ಅವಧಿ ಇನ್ನೊಮ್ಮೆ ವಿಸ್ತರಣೆ

ಅಬುದಾಬಿ: ಭಾರತದಿಂದ ಯುಎಇಗೆ ಹೋಗುವ ವಿಮಾನ ಪ್ರಯಾಣಕ್ಕೆ ಹೇರಿರುವ ನಿಷೇಧದ ಅವಧಿಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಭಾರತದಲ್ಲಿ ಕೋವಿಡ್ ಹರಡುವಿಕೆಯಲ್ಲಿ ಹೇಳಿಕೊಳ್ಳುವಂಥ ಯಾವುದೇ ಇಳಿಕ ಕಂಡು ಬರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಅನಿರ್ಧಿಷ್ಠಾವಧಿಗೆ ವಿಮಾನ ಪ್ರಯಾಣದ ಮೇಲಿನ ನಿಷೇಧ ಹೇರಿ, ಆದೇಶ ನೀಡಲಾಗಿತ್ತು. ಇದೀಗ ಅದು ಜೂನ್ 14  ಎಂದು ನಿರ್ಧರಿಸಿ, ಮುಂದೂಡಲಾಗಿದೆ ಎಂದು ಯುಎಇಯ ನಾಗರಿಕ ವಿಮಾನಯಾನ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಈಗಾಗಲೇ ಭಾರತದಲ್ಲಿ ಬಾಕಿಯಾಗಿರುವ ಲಕ್ಷಾಂತರ ಅನಿವಾಸಿಗಳಿಗೆ ಹೊಸ ಆತಂಕ ಎದುರಾಗಿದೆ. ಜೊತೆಗೆ ಕಳೆದ ಹದಿನಾಲ್ಕು ದಿನಗಳೊಳಗೆ ಭಾರತದಲ್ಲಿ ತಂಗಿದವರಿಗೂ, … Read more

ಯುಎಇ: ವಾಟ್ಸಪ್ ಮೂಲಕ ಅಸಭ್ಯ ವಾಯ್ಸ್ ಕಳುಹಿಸಿದಾತನಿಗೆ ದಂಡ

ಅಲ್–ಐನ್: ವಾಟ್ಸಪ್ ಮೂಲಕ ಅಸಭ್ಯ ಧ್ವನಿ ಸಂದೇಶ ಕಳುಹಿಸಿದಾತನಿಗೆ ಯುಎಇ ಯಲ್ಲಿ ದಂಡ ಬಿದ್ದಿದೆ. ವಾಟ್ಸಪ್ ಮೂಲಕ ತನ್ನನ್ನು ಮತ್ತು ತನ್ನ ಹೆತ್ತವರ ವಿರುದ್ಧ ಅಸಭ್ಯ ಧ್ವನಿ ಸಂದೇಶವನ್ನು ಕಳುಹಿಸಿದಾತನ ವಿರುದ್ಧ ಸಂತ್ರಸ್ತನು ಯುಎಇಯ ಪ್ರಾಥಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದನು. ಸಂತ್ರಸ್ತನು ಹಾಜರುಪಡಿಸಿದ ಸಾಕ್ಷಿಯ ಆಧಾರದಲ್ಲಿ, ಆರೋಪಿಯ ಅಪರಾಧವು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ವಿಚಾರಣೆಯ ಬಳಿಕ ನ್ಯಾಯಾಲಯವು ಅಪರಾಧಿಗೆ 10,000 ದಿರ್ಹಮ್ ದಂಡ ವಿಧಿಸಿ, ತೀರ್ಪನ್ನೂ ನೀಡಿತ್ತು. ಆದರೆ ಅಷ್ಟಕ್ಕೆ ಸಮಾಧಾನಪಡದ ಸಂತ್ರಸ್ತ, ಹೆಚ್ಚಿನ ಮಾನನಷ್ಟ ಪರಿಹಾರಕ್ಕೆ ಆಗ್ರಹಿಸಿ, ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಿದ್ದನು. ದಂಡದ ಮೊತ್ತವನ್ನು … Read more

ಕೋವಿಡಿನಿಂದಾಗಿ ಉಸಿರುಗಟ್ಟುತ್ತಿರುವ ಭಾರತವನ್ನು ಅಪ್ಪಿ ಹಿಡಿಯುತ್ತಿರುವ ಅರಬ್ ದೇಶಗಳು | ಇದೀಗ ಕುವೈತಿನಿಂದಲೂ ಪ್ರಾಣವಾಯುವಿನೊಂದಿಗೆ ಧಾವಿಸಿ ಬರುತ್ತಿದೆ ಭಾರತೀಯ ಯುದ್ಧ ನೌಕೆಗಳು

ಕುವೈತ್ ಸಿಟಿ: ಉಳಿದೆಲ್ಲಾ ಅರಬ್ ದೇಶಗಳಂತೆ ಕುವೈತ್ ಕೂಡಾ ಭಾರತಕ್ಕೆ ಪ್ರಾಣವಾಯುವನ್ನು ಕಳುಹಿಸುತ್ತಿದೆ. ಭಾರತೀಯ ಯುದ್ಧ ನೌಕೆಗಳಾದ ಐಎನ್ಎಸ್ ತಾಬರ್ ಮತ್ತು ಐಎನ್ಎಸ್ ಕೊಚ್ಚಿ ಮೊದಲಾದವುಗಳಲ್ಲಿ ಆಕ್ಸಿಜನನ್ನು ಕಳುಹಿಸಿಕೊಟ್ಟಿದೆ. Day 2 of Sea-bridge ops: Medical Consignment from Kuwait to India.#INSTABAR carrying 40 MT Liquid Medical Oxygen, and 600 Oxygen Cylinders departs from Kuwait & is now homebound. Gratitude to all concerned authorities for the … Read more

ಭಾರತದಿಂದ ಯುಎಇಗೆ ಹೋಗುವ ವಿಮಾನ ಪ್ರಯಾಣದ ಮೇಲಿನ ನಿಷೇಧ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ

ಅಬುದಾಬಿ: ಭಾರತದಿಂದ ಯುಎಇಗೆ ಹೋಗುವ ವಿಮಾನ ಪ್ರಯಾಣಕ್ಕೆ ಹೇರಿರುವ ನಿಷೇಧವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ. ಭಾರತದಲ್ಲಿ ಕೋವಿಡ್ ಹರಡುವಿಕೆಯಲ್ಲಿ ಯಾವುದೇ ಇಳಿಕ ಕಂಡು ಬರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಈ ತಿಂಗಳ ಹದಿನಾಲ್ಕರ ವರೆಗೆ ವಿಮಾನ ಪ್ರಯಾಣದ ಮೇಲಿನ ನಿಷೇಧ ಹೇರಿ ಆದೇಶ ಹೊರಡಿಸಲಾಗಿತ್ತು. ಇದೀಗ ಅದು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ ಎಂದು ಯುಎಇಯ ರಾಷ್ಟ್ರೀಯ ವಿಪತ್ತು ನಿವಾರಣಾ ಇಲಾಖೆ ಮತ್ತು ನಾಗರಿಕ ವಿಮಾನಯಾನ ಇಲಾಖೆಗಳು ಜಂಟಿಯಾಗಿ ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಈಗಾಗಲೇ ಭಾರತದಲ್ಲಿ ಬಾಕಿಯಾಗಿರುವ ಲಕ್ಷಾಂತರ ಅನಿವಾಸಿಗಳಿಗೆ ಹೊಸ ಆತಂಕ ಎದುರಾಗಿದೆ. … Read more

ದುಬೈಗೆ ಹೊರಡುವ ಭಾರತೀಯ ಪ್ರಯಾಣಿಕರಿಗೆ ಹೊಸ ಶರತ್ತು ಅನ್ವಯ | ಇನ್ನು ಮುಂದೆ ಪ್ರಯಾಣಕ್ಕೆ 48 ಗಂಟೆ ಮೊದಲು ಪಿಸಿಆರ್ ಪರೀಕ್ಷೆ ನಡೆಸಿರಬೇಕು

ದುಬೈ: ಭಾರತದಿಂದ ದುಬೈಗೆ ಹೊರಡುವ ಪ್ರಯಾಣಿಕರಿಗೆ ಹೊಸ ಶರತ್ತು ಅನ್ವಯವಾಗಲಿದೆ. ಅದರಂತೆ ದುಬೈಗೆ ಹೊರಡುವ ಪ್ರಯಾಣಿಕರು ನಲ್ವತ್ತೆಂಟು ಗಂಟೆಗಳೊಳಗೆ ಪಡೆದ ಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. ಈ ಮೊದಲು ಎಪ್ಪತ್ತೆರಡು ಗಂಟೆಗಳ ಮೊದಲು ನಡೆಸಲಾದ ಪಿಸಿಆರ್ ಪ್ರಮಾಣ ಪತ್ರ ಸಾಕಾಗುತ್ತಿತ್ತು. ಇನ್ನು ಮುಂದೆ ಇದನ್ನು 48 ಗಂಟೆಗೆ ಇಳಿಸಿಲಾಗುವುದು. ಈ ಹೊಸ ನಿಯಮಾವಳಿಯು ಎಪ್ರಿಲ್ 22 ರಿಂದ ಜಾರಿಗೆ ಬರಲಿದೆ. ಸೂಚಿಸಲಾದ 48 ಗಂಟೆ ಸಮಯ ಮಿತಿಯು ಗಣನೆಗೆ ಬರುವುದು ಮೂಗಿನ/ಗಂಟಲ ದ್ರವವನ್ನು ಶೇಖರಿಸಿದ ಸಮಯದಿಂದ … Read more