HTFC ವಾರ್ಷಿಕೋತ್ಸವ,* *3ನೇ‌ಬಾರಿ ಅಧ್ಯಕ್ಷರಾಗಿ ಸಮೀರ್ K S , ಕಾರ್ಯದರ್ಶಿಯಾಗಿ ಸಮೀರ್ M G ಆಯ್ಕೆ*

ವಿಟ್ಲ : ಇಲ್ಲಿಗೆ ಸಮೀಪದ ಟಿಪ್ಪು ನಗರದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಮಿಂಚಿನ ಜನಸೇವೆಯ ಮೂಲಕ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಊರಪರವೂರ ಪ್ರಶಂಸೆಗೆ ಪಾತ್ರವಾಗಿರುವ ಹೆಮ್ಮೆಯ ಸಂಘಟನೆಯಾಗಿದೆ. *ಹಝ್ರತ್ ಟಿಪ್ಪು ಸುಲ್ತಾನ್ ಪ್ರೆಂಡ್ಸ್ ಕಮಿಟಿ* (ರಿ) HTFC – ಟಿಪ್ಪು ನಗರ – ವಿಟ್ಲ, ಊರಿನ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಧನ ಸಹಾಯದಲ್ಲಿ ನೆರವಾಗುವುದು ಮತ್ತು ರೋಗಿಗಳ ಚಿಕಿತ್ಸೆಯ ವೆಚ್ಚ ಭರಿಸಲು ನೆರವಾಗುವುದು ಈ ಸಮಿತಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಒಟ್ಟಿನಲ್ಲಿ ಈ … Read more

ರೈತ ಮುಷ್ಕರ-ಅಲ್ಲಿ ರೈತರೇ ಏಕಿರಬೇಕು ? ಕೃಷಿ ಬಿಕ್ಕಟ್ಟು ಕೇವಲ ರೈತರ ಸಮಸ್ಯೆಯೇ ?

ರೈತ ಮುಷ್ಕರ-ಅಲ್ಲಿ ರೈತರೇ ಏಕಿರಬೇಕು ? ಕೃಷಿ ಬಿಕ್ಕಟ್ಟು ಕೇವಲ ರೈತರ ಸಮಸ್ಯೆಯೇ ? – ನಾ ದಿವಾಕರ, ಹಿರಿಯ ಲೇಖಕರು ಸಮಕಾಲೀನ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಒಂದು ಸಾರ್ವಜನಿಕ ಮುಷ್ಕರ ದೆಹಲಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿದೆ. ಈ ಮುಷ್ಕರದ ರೂವಾರಿಗಳು ದೇಶದ ರೈತಾಪಿ ಸಮುದಾಯ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ಲಕ್ಷಾಂತರ ರೈತರು ಕಳೆದ ಹತ್ತು ತಿಂಗಳ ಕಾಲ ಮಳೆ, … Read more

ಶರಣರಿಗೆ “ಮರಣವೆ ಮಹಾನವಮಿ”

ಯುವ ಲೇಖಕ ಬಾಲಾಜಿ ಕುಂಬಾರ ಅವರ ಬರಹ ನಿಮ್ಮ ಓದಿಗಾಗಿ….. ಬಸವಣ್ಣ ಹಾಗೂ ಸಮಕಾಲೀನ ಶರಣರು ಕಟ್ಟಲು ಬಯಸಿದ ಸಮಾಜವನ್ನು ‘ಸಮಾನತೆ ಸಮಾಜ’ ಎಂದು ಕರೆಯುತ್ತೇವೆ. ಅದು ವರ್ಗರಹಿತ, ವರ್ಣರಹಿತ, ಲಿಂಗರಹಿತ ಹಾಗೂ ಜಾತಿರಹಿತವಾದ ಜಾತ್ಯತೀತ ಸಮಾಜ ನಿರ್ಮಿಸುವುದು ವಚನಕಾರರ ಘನವಾದ ಉದ್ದೇಶವೂ ಕೂಡ ಹೌದು. ಹಾಗಾಗಿ ಅದಕ್ಕಾಗಿಯೇ ಬಹುತೇಕ ಶರಣರು ಪ್ರಾಣತ್ಯಾಗ ಮಾಡಿದ್ದು ಇತಿಹಾಸವೇ ಸಾಕ್ಷಿ. ಹನ್ನೆರಡನೇ ಶತಮಾನದ ಅಂದಿನ ರಾಜ್ಯಶಾಹಿ ಆಡಳಿತ ವ್ಯವಸ್ಥೆಯು ಸ್ಥಳೀಯ ರೈತಾಪಿ ವರ್ಗ, ಕೂಲಿಕಾರ್ಮಿಕರ ಮೇಲೆ ರಾಜ್ಯಭಾರ ನಡೆಸುತ್ತಾ ತೀವ್ರವಾಗಿ ಶೋಷಣೆಗೆ … Read more

ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ

  – ಹಾರೋಹಳ್ಳಿ ರವೀಂದ್ರ, ಯುವ ಲೇಖಕರು ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಓಡೆಯರ್ ಕಾಲದಲ್ಲಿ ನೀರಾವರಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಕೆರೆ, ಕಟ್ಟೆ ಕಾಲುವೆಗಳನ್ನು ಹೊಸದಾಗಿ ಮಾಡಲಾಯಿತು, ಹಲವನ್ನು ದುರಸ್ಥಿಗೊಳಿಸಲಾಯಿತು. ಪ್ರತಿವರ್ಷ ಒಂದು ಸಾವಿರ ಕೆರೆಗಳನ್ನು ದುರಸ್ಥಿ ಮಾಡುವ ಗುರಿಯನ್ನು ಅಂದು ನಾಲ್ವಡಿ ಹಾಕಿಕೊಂಡಿದ್ದರು. ಖರ್ಚಿನಲ್ಲಿ 1/3 ಭಾಗವನ್ನು ರೈತರು ನೀಡಿದರೆ, 2/3 ಭಾಗವನ್ನು ಸರ್ಕಾರ ನೀಡಲು ಮುಂದಾಯಿತು. ನಾಲ್ವಡಿ ಕೃಷ್ಣರಾಜ ಓಡೆಯರ್ ಅವರು ಅತಿ ಹೆಚ್ಚು ರೈತಾಪಿ ಜನರಿಗಾಗಿ ಕೆಲಸ ಮಾಡಿದ್ದಾರೆ. … Read more

ಲಕ್ಷದ್ವೀಪಕ್ಕೆ ಅನಗತ್ಯವಾದ ಸುಧಾರಣಾ ಅಲೆಗಳು..

ಮೂಲ : ವಜಾಹತ್ ಹಬೀಬುಲ್ಲಾ (ದ ಹಿಂದೂ) ಅನುವಾದ : ನಾ ದಿವಾಕರ, ಹಿರಿಯ ಲೇಖಕರು ಕಳೆದ ಡಿಸೆಂಬರ್‍ನಲ್ಲಿ ಲಕ್ಷದ್ವೀಪದ ಹೆಚ್ಚುವರಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪ್ರಫುಲ್ ಪಟೇಲ್ , ಈಗ ಲಕ್ಷದ್ವೀಪದ ಆಡಳಿತ ಸುಧಾರಣೆಗಾಗಿ ಹಲವಾರು ಶಾಸನಗಳನ್ನು ಸಿದ್ಧಪಡಿಸಿದ್ದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಸುಧಾರಣೆಗಳನ್ನು ಜಾರಿಗೊಳಿಸಿದರೆ ಈ ದ್ವೀಪದ ಮೇಲೆ ತೀವ್ರ ತೆರನಾದ ಪ್ರಭಾವ ಉಂಟಾಗುವ ಸಾಧ್ಯತೆಗಳಿರುತ್ತವೆ. ಲಕ್ಷದ್ವೀಪ ಜಾನುವಾರು ಸಂರಕ್ಷಣಾ ವಿಧಾಯಕ 2021 ; … Read more

ಇಂದು ವಿಶ್ವ ಸೈಕಲ್ ದಿನ | ಸೈಕಲ್ ಸವಾರಿಯ ಪ್ರಯೋಜನಗಳೇನು?

ಹಲವು ವಿಶೇಷ ದಿನಗಳಿರುವಂತೆ ಸೈಕಲ್ ಸವಾರಿಗೂ ಒಂದು ದಿನವಿದೆ. ಸೈಕಲ್ ಬಳಸುವುದನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವ ಸಂಸ್ಥೆಯು 2018 ರ ಎಪ್ರಿಲ್ ತಿಂಗಳಿನಂದು ‘ಜೂನ್ ಮೂರು‘ಅನ್ನು ವಿಶ್ವ ಸೈಕಲ್ ದಿನವನ್ನಾಗಿ ಘೋಷಿಸಿಕೊಂಡಿತು. ಮೊದಲೆಲ್ಲಾ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ದೂರದ ಊರುಗಳಿಗೆ ಸೈಕಲ್ ಬಳಸಿಯೇ ಹೋಗುತ್ತಿದ್ದರು. ವಾಹನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾದ ನಂತರ ಸೈಕಲ್ ಮೇಲಿನ ಅವಲಂಬನೆಯು ಕುಂಠಿತವಾಗುತ್ತಾ ಬಂತು. ಅದೇ ವೇಳೆ ವಿನೋದ ಸಂಚಾರಿಗಳು ಸೈಕಲ್ ಸವಾರಿಯನ್ನು ಸವಾಲಾಗಿ ತೆಗೆದು ದೂರದ ಊರುಗಳಿಗೆ ಪ್ರಯಾಣ ಬೆಳೆಸಿ, ವಿಶಿಷ್ಠ ಅನುಭವ … Read more

ಕರಾಳ ಯುಗದ ಆತಂಕದ ನಡುವೆ ಒಂದು ಕರಾಳ ದಿನ

– ನಾ ದಿವಾಕರ, ಹಿರಿಯ ಲೇಖಕರು ಆರು ತಿಂಗಳ ನಂತರ ಭಾರತ ಮತ್ತೊಮ್ಮೆ ಒಕ್ಕೊರಲ ದನಿಯಾಗಿ ಎದ್ದುನಿಲ್ಲುತ್ತಿದೆ. ಕಳೆದ ನವಂಬರ್ 26ರಂದು ನಡೆದ ದೇಶವ್ಯಾಪಿ ಕಾರ್ಮಿಕ ಮುಷ್ಕರ ಮತ್ತು ರೈತರ ಹೋರಾಟ ಈ ದೇಶದ ದುಡಿಯುವ ವರ್ಗಗಳಲ್ಲಿ ಕೊಂಚ ಮಟ್ಟಿಗೆ ಜಾಗೃತಿಯನ್ನು ಉಂಟುಮಾಡಿತ್ತು. #ಆತ್ಮನಿರ್ಭರ ಭಾರತದಲ್ಲಿ ಆಳುವ ವರ್ಗಗಳು ನೀಡುವ ಆಶ್ವಾಸನೆಗಳು, ಭರವಸೆಗಳು ಎಲ್ಲವೂ ಮಾರುಕಟ್ಟೆ ಜಗುಲಿಯಲ್ಲಿ ನೀಡಲಾಗುವ ರಿಯಾಯಿತಿಗಳಂತೆ ಎಂದು ಅರಿವಾಗಲು ಈ ದೇಶದ ದುಡಿಯುವ ವರ್ಗಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಒಂದು ಕೊಳ್ಳುವುದಾದರೆ ಒಂದನ್ನು … Read more

ದನಿಗಳನ್ನು ಅಡಗಿಸಿ-ಜೀವಗಳನ್ನಾದರೂ ಕಾಪಾಡುವಿರಾ ?

– ನಾ ದಿವಾಕರ, ಹಿರಿಯ ಲೇಖಕರು ಕೋವಿದ್ 19 ನಿಯಮಾವಳಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಅನುಸರಿಸಿದ್ದರೆ ಬಹುಶಃ ಕೊರೋನಾ ಎರಡನೆ ಅಲೆ ಇಷ್ಟೊಂದು ಜೀವಹರಣಕ್ಕೆ ಕಾರಣವಾಗುತ್ತಿರಲಿಲ್ಲ. ಜನವರಿ 2021ರಲ್ಲಿ  “ ವಿಶ್ವದಲ್ಲೇ ಕೋವಿದ್ 19 ವಿರುದ್ಧ ದಿಗ್ವಿಜಯ ಸಾಧಿಸಿದ ಏಕೈಕ ರಾಷ್ಟ್ರ ಭಾರತ ” ಎಂದು ಕೇಂದ್ರ ಸರ್ಕಾರ ಘೋಷಿಸಿದ ಸಂದರ್ಭದಲ್ಲೂ ಭಾರತ ಕೋವಿದ್ ಮುಕ್ತ ಆಗಿರಲಿಲ್ಲ. ಅದೊಂದು ಆತ್ಮರತಿಯ ಘೋಷಣೆಯಾಗಿತ್ತು. ಫೆಬ್ರವರಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇದೇ … Read more

ಕೋವಿದ್ ದಾಳಿಯ ನಡುವೆ  ಗ್ರಹಿಸಬೇಕಾದ ಕೆಲವು ನೀತಿಗಳು

ಅನುವಾದ : ನಾ ದಿವಾಕರ, ಹಿರಿಯ ಲೇಖಕರು ಮೂಲ : ಸೀಮಾ ಕ್ರಿಸ್ಟಿ (ದ ಹಿಂದೂ 15-5-2021) ಯಾವುದೇ ಒಂದು ಮಾರಣಾಂತಿಕ ಸಾಂಕ್ರಾಮಿಕ ಮನುಕುಲವನ್ನು ಅಪ್ಪಳಿಸಿದಾಗ ಅದು ಬದುಕುಳಿದವರ ನಡುವೆ ಬಿಟ್ಟುಹೋಗುವ ಹೆಜ್ಜೆ ಗುರುತುಗಳಿಗೆ ಇತಿಹಾಸವೇ ಸಾಕ್ಷಿಯಾಗಿ ನಿಲ್ಲುತ್ತದೆ. ಅಳಿದವರು ಗತಕಾಲದ ಭೀಕರತೆಯ ಕತೆ ಹೇಳುತ್ತಿರುವಂತೆ ನಮಗೆ ಭಾಸವಾಗುತ್ತದೆ. ಭಾರತದಲ್ಲಿ ಇಂದು ಕಾಡುತ್ತಿರುವ ಸಾಂಕ್ರಾಮಿಕವು ಮರೆಯಾದನಂತರದಲ್ಲಷ್ಟೇ ನಮಗೆ ಇಂದಿನ ವಾಸ್ತವತೆಗಳು ಎದುರಾಗುತ್ತವೆ. ಆದಾಗ್ಯೂ ಈ ಸುನಾಮಿಯಂತಹ ಪರಿಸ್ಥಿತಿಯನಡುವೆಯೂ ಪ್ರಸ್ತುತ ಸಂದರ್ಭದಲ್ಲಿ ಗಮನಿಸಬಹುದಾದ ಕೆಲವು ನೀತಿಗಳನ್ನು ಅನುಸರಿಸಿದ್ದಲ್ಲಿ ಬಹುಶಃ ಇಂದು ಕಾಣುತ್ತಿರುವ … Read more

ಕರ್ನಾಟಕಕ್ಕಂತೂ ಇದು ಕೆಟ್ಟಕಾಲ

ಕರ್ನಾಟಕಕ್ಕಂತೂ ಇದು ಕೆಟ್ಟಕಾಲ.‌‌‌‌..‌!? – ಬಾಲಾಜಿ ಕುಂಬಾರ, ಲೇಖಕರು ಸರ್, ನಾನು ಕಮಲಕ್ಕೆ ಓಟ್ ಹಾಕಿದ್ದೇನೆ, ದಯವಿಟ್ಟು ನನ್ನ ತಾಯಿಗೆ ಆಕ್ಸಿಜನ್ ಕೊಡ್ಸಿ‌‌‌‌.‌‌‌‌‌‌..‌! ಸರಿಯಾದ ಸಮಯಕ್ಕೆ ಬೆಡ್ ಸಿಗದೆ ಸೋಂಕಿತರ ಸಾವು, ಆಕ್ಸಿಜನ್ ಕೊರತೆಯಿಂದ ಹತ್ತಾರು ಜನರ ಸಾವು, ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ, ಬೆಡ್ ಸಿಗದೇ ಫುಟ್ ಪಾತ್ ಮೇಲೆ ನರಳಾಟ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸೋಂಕಿತರ ಸಾವು, ತಂದೆ – ತಾಯಿ ಕಳೆದುಕೊಂಡ ಮಕ್ಕಳು ಅನಾಥ, ಗಂಡ ಸತ್ತ ನಾಲ್ಕು ದಿನಕ್ಕೆ … Read more