ವಿನೀತ ಭಾವದ “ಪುನೀತ”ನಿಗೆ ಅಕ್ಷರ ನಮನ

ಬಾಲಾಜಿ ಕುಂಬಾರ ಅವರ ಅಕ್ಷರ ನಮನ ‘ಪುನೀತ್’ ನಮನ ———————— ‘ದೊಡ್ಮನೆ ಹುಡ್ಗ’ ಥೇಟ್ ಅಪ್ಪನಂತೆ ‘ನಟಸಾರ್ವಭೌಮ’ ನಾಗಿ ನಟಿಸಿದ ‘ರಾಜಕುಮಾರ್’ ನಮ್ಮ ‘ಅಪ್ಪು’ ‘ಯಾರೇ ಕೂಗಾಡಲಿ’ ‘ವೀರ ಕನ್ನಡಿಗ’ ನಾಗಿ ‘ನಮ್ಮ ಬಸವ’ ನಂತೆ ಸದಾ ‘ಬಿಂದಾಸ್’ ದಿಂದ ‘ಅಭಿ’ನಯಿಸಿದ ನಮ್ಮ ‘ಯುವರತ್ನ’ ‘ಆಕಾಶ’ದ ‘ಚಲಿಸುವ ಮೋಡಗಳ’ಲ್ಲಿ ‘ಎರಡು ನಕ್ಷತ್ರಗಳ’ ಬೆಳಗಿನಲ್ಲಿ ‘ಬೆಟ್ಟದ ಹೂವಾಗಿ’ ‘ಮಿಲನ-ಮೈತ್ರಿ’ದೊಂದಿಗೆ ‘ಹೊಸ ಬೆಳಕು’ ಮೂಡಿಸಿದ ‘ಅಂಜನಿಪುತ್ರ’ ‘ಶಿವ ಮೆಚ್ಚಿದ ಕಣ್ಣಪ್ಪ’ನಿಗೆ ‘ಚಕ್ರವ್ಯೂಹ’ ದಿಂದ ‘ಪ್ರೇಮದ ಕಾಣಿಕೆ’ಯಾಗಿ ‘ಪೃಥ್ವಿ’ಯಿಂದ ‘ಭಾಗ್ಯವಂತ’ನಿಗೆ ಕರೆಸಿಕೊಂಡನು … Read more

ನಿತ್ಯೋತ್ಸವ

-ಕೆ. ಸ್. ನಿಸಾರ್ ಅಹಮದ್ – ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ, ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ…… – ೨ – ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ, ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ…… – ೩ – ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, ಸದ್ವಿಕಾಸಶೀಲ ನುಡಿಯ … Read more