ರಾಮನಗರ (17-10-2020): ರಾಮನಗರದ ಕುಡೂರಿನ 48 ವರ್ಷದ ರೈತನನ್ನು ಕರ್ನಾಟಕ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ದಲಿತ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದ ಕಾರಣ ತನ್ನ 18 ವರ್ಷದ ಮಗಳನ್ನು ಈತ ಕೊಂದಿದ್ದಾನೆ.
ಬೆಂಗಳೂರು ನಗರದಿಂದ 60 ಕಿ.ಮೀ ದೂರದಲ್ಲಿರುವ ಮಾಗಡಿಯಲ್ಲಿ ಮಾವಿನ ತೋಪಿನಲ್ಲಿ ಹದಿನೆಂಟು ವರ್ಷದ ಹೇಮಲತಾ ಅವರ ಶವವನ್ನು ಪತ್ತೆ ಮಾಡಲಾಗಿದೆ. ಪ್ರಬಲ ಜಾತಿಯ ವೊಕ್ಕಲಿಗ ಸಮುದಾಯದ ಕೃಷ್ಣಪ್ಪ, ದಲಿತ ಸಮುದಾಯದ ಪುನೀತ್ ಜೊತೆ ಮಗಳ ಸಂಬಂಧವನ್ನು ಒಪ್ಪಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅ.9 ರಂದು 48 ವರ್ಷದ ಕೃಷ್ಣಪ್ಪ ತನ್ನ 18 ವರ್ಷದ ಮಗಳು ಹೇಮಲಥಾ, ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಕಾಣೆಯಾಗಿದ್ದಾಳೆ ಎಂದು ತಿಳಿಸಿ ಕುದೂರ್ ಪೊಲೀಸರಿಗೆ ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ, ಕೃಷ್ಣಪ್ಪ ಕೆಲಸದ ಮೇಲ್ವಿಚಾರಣೆಗೆ ಜಮೀನಿಗೆ ಹೋಗಿದ್ದರು ಮತ್ತು ಸಂಜೆ 4 ಗಂಟೆಗೆ ಮನೆಗೆ ಮರಳಿದರು. ಈ ವೇಳೆ ಅವರ ಮಗಳು ನಾಪತ್ತೆಯಾಗಿದ್ದಾಳೆಂದು ತಿಳಿದುಬಂದಿದೆ. ಪುನೀತ್ ಎಂಬ ವ್ಯಕ್ತಿ ಕೆಲವು ವಾರಗಳಿಂದ ತನ್ನ ಮಗಳಿಗೆ ನಿರಂತರವಾಗಿ ಕರೆ ಮಾಡುತ್ತಿದ್ದನೆಂದು ಅವರು ಹೇಳಿದ್ದರು. ಆಕೆಯ ಕಣ್ಮರೆಗೆ ಪುನೀತ್ ಕೈವಾಡ ಇದೆ ಎಂದು ಅವರು ಶಂಕಿಸಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ತನಿಖೆ ಆರಂಭಿಸಿದ ಕುಡೂರ್ ಪೊಲೀಸರು, ಕುಡೂರಿನ ಕೃಷಿ ಕೆಲಸಗಾರ ಪುನೀತ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆತ, ತಾನು ಮತ್ತು ಹೇಮಲತಾ ಕಾಲೇಜಿಗೆ ಹೋಗಲು ಪ್ರಾರಂಭಿಸಿದಾಗಿನಿಂದಲೂ ಪ್ರೀತಿಸುತ್ತಿದ್ದೆವು. ಕೆಲವು ವಾರಗಳ ಹಿಂದೆ ಕೃಷ್ಣಪ್ಪ ಅವರು ಪುನೀತ್ ಮತ್ತು ಹೇಮಲತಾ ಸಂಬಂಧದಲ್ಲಿದ್ದಾರೆಂದು ತಿಳಿದುಕೊಂಡರು ಮತ್ತು ಅದನ್ನು ಕೊನೆಗೊಳಿಸಬೇಕೆಂದು ಅವರು ಬಯಸಿದ್ದರು ಎಂದು ಹೇಳಿದ್ದಾನೆ.
ಆರಂಭದಲ್ಲಿ ಪುನೀತ್ ಬಗ್ಗೆ ನಮಗೆ ಯಾವುದೇ ಅನುಮಾನಾಸ್ಪದ ಸಂಗತಿ ಕಂಡುಬಂದಿಲ್ಲ ಮತ್ತು ಅವರ ಉತ್ತರ ಕೂಡ ನಿಖರವಾಗಿದೆ. ನಾಪತ್ತೆಯಾದ ಸಮಯದಲ್ಲಿ ಆತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದನೆಂದು ಹೇಳಿದ ಸಾಕ್ಷಿಗಳು ಇದ್ದರು. ನಾವು ಕೃಷ್ಣಪ್ಪನನ್ನು ಅನುಮಾನಿಸಲು ಪ್ರಾರಂಭಿಸಿದೆವು ಎಂದು ಪೊಲೀಸರು ಹೇಳಿದರು.
ಅಕ್ಟೋಬರ್ 14 ರಂದು ಪೊಲೀಸರು ಕೃಷ್ಣಪ್ಪನನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದರು, ಅವರು ತಮ್ಮ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದರು. ಕೊನೆಗೆ ಕೊಲೆಯನ್ನು ಒಪ್ಪಿಕೊಂಡಿದ್ದಾರೆ.