ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 5,000 ರೈತರ ಮೇಲೆ ಕೇಸ್! ಚುನಾವಣಾ ಸಮಾವೇಶಕ್ಕೆ ಇಲ್ಲದ ನಿರ್ಬಂಧ ರೈತರಿಗೆ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಲಿಘರ್(11-02-2021):  ಅಲಿಘರ್ ರೈತರ ಸಭೆಯಲ್ಲಿ ಪಾಲ್ಗೊಂಡಿದ್ದ ಆರ್ ಎಲ್ ಡಿ ಮುಖಂಡ ಜಯಂತ್ ಚೌಧರಿ ಸೇರಿ 5 ಸಾವಿರ ಮಂದಿ ವಿರುದ್ಧ ಯುಪಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇರೆಗೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚೌಧರಿ ಸೇರಿದಂತೆ 22 ಜನರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಇತರರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಅಲಿಘರ್ ನಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ‘ಮಹಾಪಂಚಾಯತ್’ ಪ್ರತಿಭಟನೆಯನ್ನು ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ 5000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ರೈತರ ಮೇಲೆ ಕೋವಿಡ್-19 ಶಿಷ್ಟಾಚಾರ  ಉಲ್ಲಂಘನೆ ಕೇಸ್ ನ್ನು ದಾಖಲಿಸಲಾಗಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳ ಚುನಾವಣಾ ಪ್ರಚಾರದ ಬೃಹತ್ ಸಭೆಗಳಲ್ಲಿ ಕೋವಿಡ್ ನಿಯಮದ ಉಲ್ಲಂಘನೆ ಬಿಜೆಪಿಯೇ ಮಾಡುತ್ತಿದೆ. ಆದರೆ ಇದ್ಯಾವುದೂ ಸರಕಾರಕ್ಕೆ ಕಾಣಿಸಿಲ್ಲ. ಇದೀಗ ರೈತರ ಹೋರಾಟದ ಸ್ಥಳದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಕೇಸ್ ಹಾಕಿರುವುದು ಅಚ್ಚರಿಯನ್ನುಂಟು ಮಾಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು