ಮೊಹಾಲಿ(19-02-2021):ಪಂಜಾಬ್ನ ಮೊಹಾಲಿಯಲ್ಲಿ ಒಂದು ಕಾರು ಸೈಕ್ಲಿಸ್ಟ್ ನ ಮೃತದೇಹವನ್ನು 10ಕಿಮೀ. ವರೆಗೆ ಹೊತ್ತುಕೊಂಡು ಹೋಗಿರುವ ಘಟನೆ ನಡೆದಿದೆ.
ಜಿರಾಕ್ಪುರದಿಂದ ಖಮಾನೋಗೆ ತೆರಳುತ್ತಿದ್ದ ನಿರ್ಮಲ್ ಸಿಂಗ್ ಎಂದು ಗುರುತಿಸಲಾಗಿರುವ ಕಾರು ಚಾಲಕನನ್ನು ಬೈಸಿಕಲ್ನಲ್ಲಿದ್ದ 35 ವರ್ಷದ ಧುರೀಂದರ್ ಮಂಡಲ್ಗೆ ಢಿಕ್ಕಿ ಹೊಡೆದು ಹೊತ್ತೊಯ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಐಪಿಸಿಯ ಸೆಕ್ಷನ್ 279 (ರಾಶ್ ಡ್ರೈವಿಂಗ್), 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಮತ್ತು 201 (ಸಾಕ್ಷ್ಯಗಳ ಕಣ್ಮರೆಗೆ ಕಾರಣವಾಗಿದೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಮೊಹಾಲಿಯ ಏರೋಸಿಟಿಯ ಸಿ ಬ್ಲಾಕ್ ಬಳಿ ಕಾರು ಸೈಕ್ಲಿಸ್ಟ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಸೈಕ್ಲಿಸ್ಟ್ ಕಾರಿನ ಮೇಲ್ಛಾವಣಿ ಮೇಲೆ ಬಿದ್ದಿದ್ದಾನೆ. ಆದರೆ ಕಾರು ನಿಲ್ಲಲಿಲ್ಲ ಮತ್ತು ಸೈಕ್ಲಿಸ್ಟ್ನ ಶವವನ್ನು ಹೊತ್ತು ಕಾರು ಮೊಹಾಲಿಯ ಬೀದಿಗಳಲ್ಲಿ ಓಡುತ್ತಲೇ ಇತ್ತು.