9 ವರ್ಷದ ಬಾಲಕನನ್ನು ಅಪಹರಿಸಿ, ಕೊಂದು ಸುಟ್ಟು ಹಾಕಿದ! ಮೆಕ್ಯಾನಿಕ್ ಆಗಿದ್ದವ ಈ ಘೋರ ಕೃತ್ಯ ನಡೆಸಿದ್ದೇಕೆ ಗೊತ್ತಾ?

crime
Share on facebook
Share on twitter
Share on linkedin
Share on whatsapp
Share on telegram
Share on email
Share on print

ತೆಲಂಗಾಣ (22-10-2020): 9 ವರ್ಷದ ಬಾಲಕನನ್ನು ಅಪಹರಿಸಿ ಕೊಂದು ಶವಕ್ಕೆ ಬೆಂಕಿ ಹಚ್ಚಿದ 23 ವರ್ಷದ ಆಟೋಮೊಬೈಲ್ ಮೆಕ್ಯಾನಿಕ್ ಅನ್ನು ತೆಲಂಗಾಣದ ಮಹಾಬೂಬಾದ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

PRESS KANNADA

ಬಾಲಕನ ಸುಟ್ಟ ಅವಶೇಷಗಳನ್ನು ಮಹಾಬೂಬಾದ್ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಅನ್ನಾರಾಮ್ ಗ್ರಾಮದ ಬಳಿಯ ರಲ್ಲಾಪುಸಲಪಲ್ಲಿ ಬೆಟ್ಟಗಳಿಂದ ಪತ್ತೆ ಮಾಡಲಾಗಿದೆ.

ಮಹಬೂಬಾದ್ ಪೊಲೀಸ್ ವರಿಷ್ಠಾಧಿಕಾರಿ ನಂದ್ಯಾಲಾ ಕೋಟಿ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಾಗರ್ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಮತ್ತು ಬಳಿಕ ಒಂದೆರಡು ಗಂಟೆಗಳಲ್ಲಿ ದೇಹಕ್ಕೆ ಬೆಂಕಿಯಿಟ್ಟಿದ್ದಾನೆ. ಸುಲಾರ್ ಸುಲಿಗೆ ರೂಪದಲ್ಲಿ ತ್ವರಿತವಾಗಿ ಹಣ ಸಂಪಾದಿಸಲು ಮತ್ತು ಅದ್ದೂರಿ ಜೀವನವನ್ನು ಮಾಡಲು ಬಾಲಕನನ್ನು ಅಪಹರಿಸಿದ್ದಾನೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು