ತುಮಕೂರು(21-12-2020): ಯಲೆಕಡಕಲು ಗ್ರಾಮ ಪಂಚಾಯತ್ ಗೆ ಜಯರಾಮಯ್ಯ ವೈ ಹೆಚ್ ಅವರು ಗ್ಯಾಸ್ ಸಿಲಿಂಡರ್ ಚಿಹ್ನೆ ಮೂಲಕ ಸ್ಪರ್ಧೆಗೆ ಇಳಿದಿದ್ದು, ಗ್ರಾಮಸ್ಥರು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕಾಗಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿರುವ ಜಯರಾಮಯ್ಯ ವೈ ಹೆಚ್ ಇವರು ಗ್ರಾಮದಲ್ಲೇ ನೆಲೆಸಿದ್ದು, ಸದಾ ಗ್ರಾಮದ ಒಳಿತಿಗಾಗಿ ಶ್ರಮವಹಿಸಿದವರು. ಮುಂದಿನ ದಿನಗಳಲ್ಲೂ ಗ್ರಾಮದ ಜನರ ಜೊತೆಯೇ ಇದ್ದು ಕೆಲಸ ಮಾಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖ್ಯ ಸಮಸ್ಯೆಗಳಿಗೆ ಸ್ಪಂದಿಸಿ ಗ್ರಾಮವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಪರಿವರ್ತಿಸುವ ಕನಸನ್ನು ಜಯರಾಮಯ್ಯ ವೈ ಹೆಚ್ ಹೊಂದಿದ್ದಾರೆ.
ಜಯರಾಮಯ್ಯ ಅವರೇ ಸಮರ್ಥ ಅಭ್ಯರ್ಥಿಯಾಗಿದ್ದು ಅವರನ್ನು ಗ್ರಾಮದ ಸರ್ವತೋಮುಖ ಅಭಿವೃದ್ದಿಯ ದೃಷ್ಟಿಯಿಂದ ಚುನಾಯಿಸುವುದು ಅವಶ್ಯಕತೆಯಾಗಿದೆ. ಆದ್ದರಿಂದ ಮತದಾರರು ನಾಳೆ (ದಿನಾಂಕ 22-12-2020)ಕ್ಕೆ ಜಯರಾಮಯ್ಯ ಅವರ ಸೀರಿಯಲ್ ನಂ.1ರ ಗ್ಯಾಸ್ ಚಿಹ್ನೆಗೆ ಮತ್ತು ಪುಟ್ಟಮ್ಮ ತಿಮ್ಮಶೆಟ್ಟಿ ಅವರ ಸೀರಿಯಲ್ ನಂಬರ್ 2ರ ಟ್ರ್ಯಾಕ್ಟರ್ ಓಡಿಸುವ ರೈತ ಚಿಹ್ನೆಗೆ ಮತನೀಡಿ ಗೆಲ್ಲಿಸಬೇಕಾಗಿ ವಿನಂತಿಯನ್ನು ಮಾಡಿಕೊಂಡಿದ್ದಾರೆ.