ಕ್ಯಾಬ್ ನಲ್ಲಿ ಮೈಗೆ ಕೈ ಹಾಕಿದ ಚಾಲಕ: ಚಲಿಸುತ್ತಿದ್ದ ಕಾರಿನಿಂದ ಜಿಗಿದ ಇಬ್ಬರು ಮಹಿಳೆಯರು!

cab
Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಮೃತಸರ(18-10-2020): ಪಂಜಾಬ್‌ನ ಅಮೃತಸರದಲ್ಲಿ ಕ್ಯಾಬ್ ಚಾಲಕ ಲೈಂಗಿಕ ಕಿರುಕುಳ ಕೊಟ್ಟ ಎಂದು ಚಲಿಸುತ್ತಿದ್ದ ಕಾರಿನಿಂದ ಇಬ್ಬರು ಮಹಿಳೆಯರು ಜಿಗಿದಿರುವ ಘಟನೆ ನಡೆದಿದೆ.

ಇಬ್ಬರು ಮಹಿಳೆಯರು ಚಾಲನೆಯಲ್ಲಿರುವ ಕ್ಯಾಬ್‌ನಿಂದ ಜಿಗಿದು ಗಾಯಗೊಂಡಿದ್ದಾರೆ. ಕ್ಯಾಬ್ ನಲ್ಲಿ ಮೂವರು ಮಹಿಳೆಯರಿದ್ದರು. ಅವರಲ್ಲಿ ಓರ್ವರಿಗೆ ಚಾಲಕ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಎಂದು ಇಬ್ಬರು ಕಾರಿನಿಂದ ಜಿಗಿದಿದ್ದಾರೆ. ಮೂರನೇ ಮಹಿಳೆ ಕ್ಯಾಬ್‌ನಲ್ಲಿದ್ದರು. ಸ್ಥಳೀಯರು ಅವರನ್ನು ಟ್ಯಾಕ್ಸಿ ಯಿಂದ ಹೊರಗೆ ಹಾರಿರುವುದನ್ನು ನೋಡಿ ವಿಚಾರಿಸಿ ವಾಹನವನ್ನು ಬೆನ್ನಟ್ಟಿ ಹಿಡಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಕ್ಸಿ ಹೋಗುವಾಗ, ಅದರ ಚಾಲಕ ಮೂವರು ಮಹಿಳೆಯರಲ್ಲಿ ಒಬ್ಬರಿಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಆದರೆ ಅವಳು ಪ್ರತಿರೋಧಿಸುತ್ತಿದ್ದಂತೆ ಚಾಲಕ ವಾಹನದ ವೇಗವನ್ನು ಹೆಚ್ಚಿಸಲು ಪ್ರಾರಂಭಿಸಿದನು. ಇದರಿಂದಾಗಿ ಇಬ್ಬರು ಮಹಿಳೆಯರು ಕಾರಿನಿಂದ ಹಾರಿದ್ದಾರೆ ಎಂದು SHO ತಿಳಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು