ನವದೆಹಲಿ(25-10-2020): ವಿಜಯದಶಮಿ ಭಾಷಣದಲ್ಲಿ ಸಿಎಎ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಉಲ್ಲೇಖಿಸಿದ್ದು, ಮುಸ್ಲಿಮರನ್ನು ಈ ವಿಚಾರದಲ್ಲಿ ದಾರಿ ತಪ್ಪಿಸುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಿಎಎ ಯಾವುದೇ ಸಮುದಾಯದ ವಿರುದ್ಧವಲ್ಲ, ಆದರೆ ಕೆಲವರು ಕೆಲವರು ಮುಸ್ಲಿಮರನ್ನು ತಪ್ಪು ದಾರಿಗೆ ಎಳೆದು, ಈ ಕಾಯಿದೆಯು ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶಹೊಂದಿದೆ ಎಂದು ಹೇಳಿದೆ. ಹೀಗಾಗಿ ಪ್ರತಿಭಟನೆ ನಡೆದಿದೆ ಎಂದು ಹೇಳಿದರು.
ಅವಕಾಶವಾದಿಗಳು ಪ್ರತಿಭಟನೆಗಳ ಹೆಸರಿನಲ್ಲಿ ಸಂಘಟಿತ ಹಿಂಸಾಚಾರವನ್ನು ನಡೆಸಿದರು. ಗಲಭೆಕೋರರು ಮತ್ತು ಅವಕಾಶವಾದಿಗಳು ಸಂಘರ್ಷವನ್ನು ಮತ್ತೆ ಮತ್ತೆ ಮರುಕಳಿಸುವ ಪ್ರಯತ್ನಗಳು ಇನ್ನೂ ಮುಂದುವರಿಯುತ್ತವೆ. ಸಿಎಎ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ವಿರೋಧಿಸುವುದಿಲ್ಲ, ಸಿಎಎ ಬಗ್ಗೆ ಸುಳ್ಳು ಪ್ರಚಾರ ಮಾಡುವ ಮೂಲಕ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.