ಸಿಎಎ ಕುರಿತ ನಿಯಮಗಳು ತಯಾರಿಯ ಹಂತದಲ್ಲಿದೆ! ಲೋಕಸಭೆಯಲ್ಲಿ ಸ್ಪಷ್ಟೀಕರಣ

caa
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(03-02-2021):  ಸಿಎಎ ಕುರಿತ  ನಿಯಮಗಳು ತಯಾರಿಯ ಹಂತದಲ್ಲಿದೆ ಎಂದು ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ 2019ರ ಡಿಸೆಂಬರ್ ನಲ್ಲಿ ಅಧಿಸೂಚನೆ ಹೊರಡಿಸಿ ಜನವರಿ 10ರಿಂದ ಜಾರಿಗೆ ಬಂದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ-2019 ಸಂಬಂಧಪಟ್ಟ ನಿಯಮಗಳು ತಯಾರಿಯ ಹಂತದಲ್ಲಿವೆ. ಲೋಕಸಭೆ ಹಾಗೂ ರಾಜ್ಯಸಭೆಗಳ ಅಧೀನ ಶಾಸನಗಳ ಸಮಿತಿಗಳು ಇದೇ ವರ್ಷ ಏಪ್ರಿಲ್ 9 ಮತ್ತು ಜುಲೈ 9ಕ್ಕೆ ಸಮಯಾವಕಾಶ ವಿಸ್ತರಿಸಿದೆ. ಈ ಸಮಯದಲ್ಲಿ ಕಾಯ್ದೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇನ್ನು ಎನ್ ಆರ್ ಸಿ ಜಾರಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಗೂ ಸರಕಾರ ಮಾಹಿತಿ ನೀಡಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು