ಬೈ ಎಲೆಕ್ಷನ್ ಫಲಿತಾಂಶ: ಕಲ್ಯಾಣ ಕದನದಲ್ಲಿ ಬಿಜೆಪಿಯ ಶರಣು ಸಲಗರ ಜಯಭೇರಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಸವಕಲ್ಯಾಣ: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ, ಬಿಜೆಪಿ ಅಭ್ಯರ್ಥಿ ಶರಣು ಸಲಗರ ಜಯಭೇರಿ ಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಬಿ.ನಾರಾಯಣ ಅವರ ನಿಧನದಿಂದ ತೆರವಾದ ಕ್ಷೇತ್ರ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷ ಅವರ ಪತ್ನಿ ಮಾಲಾ ನಾರಾಯಣ ಅವರಿಗೆ ಟಿಕೇಟ್ ನೀಡಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಅನುಕಂಪ ಕೆಲಸ ಮಾಡಲಿಲ್ಲ. ಕಲ್ಯಾಣದ ಮತದಾರರು ಬಿಜೆಪಿ ಅಭ್ಯರ್ಥಿಗೆ ಶರಣೆಂದು ಗೆಲ್ಲಿಸಿದರು.

ಬಿಜೆಪಿ ಟಿಕೆಟ್‌ ಗಾಗಿ ತೀವ್ರ ಪೈಪೋಟಿ ಇತ್ತು. ಆದರೆ ಕೊನೆಗೂ ಶರಣು ಸಲಗರ ಅವರಿಗೆ ಬಿಜೆಪಿ ಟಿಕೇಟ್ ಫೈನಲ್ ಮಾಡಿ ಅಚ್ಚರಿ ಮೂಡಿಸಿತ್ತಃ. ಟಿಕೇಟ್ ಸಿಗದ ಕಾರಣ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪರ್ಧೆ ಮಾಡಿದರು. ಜೆಡಿಎಸ್ ಕೂಡ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮುಸ್ಲಿಂ ಓಟ್ ಸೆಳೆಯುವ ಪ್ರಯತ್ನ ಮಾಡಿತ್ತು‌.
ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕಳೆದ ಬಾರಿಯ ಕೋವಿಡ್‌ ಲಾಕ್‌ಡೌನ್‌ ವೇಳೆ ಇಡೀ ಕ್ಷೇತ್ರದಲ್ಲಿ ಸಂಚರಿಸಿ ಜನರಿಗೆ ನೆರವಾಗಿ ‘ಸಮಾಜ ಸೇವಕ’ ಎಂದು ಗುರುತಿಸಿಕೊಂಡಿದ್ದರು.

ಕುಮಾರಸ್ವಾಮಿ ಬಸವಕಲ್ಯಾಣದಲ್ಲಿ ಠಿಕಾಣಿ ಹಾಕಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಇದರಿಂದ ಕಾಂಗ್ರೆಸ್ ಗೆ ಹೋಗುವ ಮತಗಳು ಜೆಡಿಎಸ್ ಪಾಲಾಗಿ, ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎನ್ನುವುದು ಮುಖ್ಯವಾದರೆ, ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖುಬಾ ಅವರ ಮತಗಳು ಬಿಜೆಪಿ ಕಾಂಗ್ರೆಸ್ ಗೆ ಮೈನಸ್ ಆಗಿದ್ದು ಸುಳ್ಳಲ್ಲ.

ಹೊರಗಿನ ಅಭ್ಯರ್ಥಿಯಾದರೂ ಇಡೀ ಕ್ಷೇತ್ರ ಸುತ್ತಾಡಿ ನಾನು ನಿಮ್ಮ ಮನೆಯ ಮಗನೆಂದು ಆಶೀರ್ವದಿಸಿ ಎಂದು ಮನವಿ ಮಾಡಿದ ಶರಣು ಸಲಗರಗೆ ಕಲ್ಯಾಣದ ಶರಣು ‘ಇವನಮ್ಮವ’ ಎಂದು ಕಲ್ಯಾಣದ ಸಾರಥ್ಯ ನೀಡಿದ್ದಾರೆ. ಅಹಿಂದ ನಾರಕ, ಸರಳ ಜೀವಿ ಬಿ.ನಾರಾಯಣ ಅವರ ಕೆಲಸಗಳು, ಅನುಕಂಪ ಫಲ ಕೊಡಲಿಲ್ಲ. ಬರೋಬ್ಬರಿ 20904 ಮತಗಳ ಅಂತರದಿಂದ ಶರಣು ಸಲಗರ ಜಯ ಸಾಧಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು