ಬೆಂಗಳೂರು (03-11-2020):ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಗೆ ಮತದಾನ ಆರಂಭವಾಗಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತಪೆಟ್ಟಿಗೆಯಲ್ಲಿ ಭದ್ರಗೊಳಿಸುತ್ತಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಒಟ್ಟು 1008 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಶಿರಾ ಕ್ಷೇತ್ರದಲ್ಲಿ 6 ಅತಿ ಸೂಕ್ಷ್ಮ, 64 ಸೂಕ್ಷ್ಮ ಮತಗಟ್ಟೆ ಸೇರಿ ಒಟ್ಟು 330 ಮತಗಟ್ಟೆ ಹಾಗೂ ಆರ್ . ಆರ್ . ನಗರ ಕ್ಷೇತ್ರದಲ್ಲಿ 11 ಅತಿ ಸೂಕ್ಷ್ಮ , 82 ಸೂಕ್ಷ್ಮ ಮತಗಟ್ಟೆ ಸೇರಿ ಒಟ್ಟು 678 ಮತಗಟ್ಟೆ ಸ್ಥಾಪಿಸಲಾಗಿದೆ .
ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಯ ಸುತ್ತ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಸಂಜೆ 5 ರಿಂದ 6 ಗಂಟೆವರೆಗೆ ಕೊರೊನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.