ವಿಚಿತ್ರ ಪ್ರಕರಣ: ಎಮ್ಮೆಗಳನ್ನು ಅಪಹರಿಸಿ 50,000ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಂದೋರ್ (27-12-2020): ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಿಂದ ವರದಿಯಾದ ವಿಲಕ್ಷಣ ಅಪರಾಧ ಘಟನೆಯಲ್ಲಿ, ತಂಡವೊಂದು ರೈತನ ಎರಡು ಎಮ್ಮೆಗಳನ್ನು “ಅಪಹರಿಸಿ” ಅವುಗಳನ್ನು ಹಿಂದಿರುಗಿಸಲು 50,000 ರೂ. ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಪೊಲೀಸರು ಈಗಾಗಲೇ ಎರಡು ಎಮ್ಮೆಗಳಲ್ಲಿ ಒಂದನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಇನ್ನೊಂದನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ಒಂದು ವಾರದ ಹಿಂದೆ, ಅಮರ್‌ಚಂದ್ ಪಟೇಲ್ ಎಂಬ ರೈತ ತನ್ನ ಎಮ್ಮೆಗಳನ್ನು ಪಿಕ್ ಅಪ್ ವ್ಯಾನ್‌ನಲ್ಲಿ ಕರೆದೊಯ್ಯುತ್ತಿದ್ದಾಗ ದೀಪ್ಚಂದ್ ಮತ್ತು ಅವನ ಸಹಚರರು ಅವನನ್ನು ಪವೆಲ್ ಗ್ರಾಮದ ಬಳಿ ತಡೆದು ಎರಡು ಎಮ್ಮೆಗಳನ್ನು ಅಪಹರಣ ಮಾಡಿದ್ದಾರೆ.

ಬಳಿಕ ನಂತರ ಅಪಹರಣಕಾರರು ಪಟೇಲಿಗೆ ಕರೆ ಮಾಡಿ ಪ್ರಾಣಿಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಲು 50,000 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಎಮ್ಮೆಗಳ ಕಿಡ್ನಾಪ್ ಬಗ್ಗೆ ಪಟೇಲ್ ಪ್ರಭತ್ ಪೊಲೀಸರಿಗೆ ದೂರು ನೀಡಿದ್ದಾರೆ. ಆತನ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಿ ದೀಪ್ಚಂದ್ ಎಂಬಾತನನ್ನು ಬಂಧಿಸಿದ್ದಾರೆ. ಇತರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು