ಬಿ.ಎಸ್.ಯಡಿಯೂರಪ್ಪ ಅವರನ್ನು ಮುಗಿಸುವುದೇ ಬಿಜೆಪಿ ಅಜೆಂಡಾ! : ರಾಜ್ಯ ಕಾಂಗ್ರೆಸ್ ಟೀಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಪಕ್ಷ ಕಟ್ಟಿದ ಹಿರಿಯರನ್ನು ಹೀನಾಯವಾಗಿ ನಡೆಸಿಕೊಳ್ಳುವುದು ಬಿಜೆಪಿ ಸಂಸ್ಕೃತಿ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ ಮಾಜಿ ಸಿಎಂ ಯಡಿಯೂರಪ್ಪ ಅವರು ಅಧಿಕಾರಕ್ಕೇರಿದಾಗಲೆಲ್ಲ ಕಣ್ಣೀರು ಹಾಕಿಸಿದೆ,
ಒಂದು ದಿನವೂ ನೆಮ್ಮದಿ ಕೊಡದೆ ಅಧಿಕಾರದಿಂದ ಇಳಿದಮೇಲೂ ಆಪ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಐಟಿ ದಾಳಿಯಿಂದಾಗಿ #BJPvsBSY ಜಂಗೀಕುಸ್ತಿ ತಾರಕಕ್ಕೇರುವುದು ನಿಶ್ಚಿತ ಎಂದು ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಕೆಲ ತಿಂಗಳ ಹಿಂದೆ @BYVijayendra ರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು, ಈಗ ಬಿಎಸ್ ಯಡಿಯೂರಪ್ಪ ಆಪ್ತರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದಿದೆ.

ಬಿಜೆಪಿಯ ಹೈಕಮಾಂಡ್ ಐಟಿ, ಈಡಿಗಳ ಬೆದರಿಕೆ ಹಾಕಿಯೇ @BSYBJP ಅವರನ್ನು ಕಣ್ಣೀರು ಹಾಕಿಸಿ, ಅಧಿಕಾರ ಕಸಿದಿದ್ದು ಸ್ಪಷ್ಟವಾಗಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪೂರ್ಣ ಮುಗಿಸುವುದೇ ಬಿಜೆಪಿ ಅಜೆಂಡಾ! #BJPvsBSY ಎಂದು ಕಾಂಗ್ರೆಸ್ ಟೀಕಿಸಿದೆ.

ಬಿಎಸ್ ವೈ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎನ್ನುತ್ತಿದ್ದ ಬಿಜೆಪಿಗರು ಈಗ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎನ್ನುತ್ತಿದ್ದಾರೆ. ಕಣ್ಣೀರು ಹಾಕಿಸಿ @BSYBJP ಅವರ ಅಧಿಕಾರ ಕಿತ್ತುಕೊಂಡ ಬಿಜೆಪಿ, ಈಗ ಅವರ ಆಪ್ತರನ್ನೇ ಟಾರ್ಗೆಟ್ ಮಾಡಿ ಐಟಿ ರೈಡ್ ಮಾಡಿಸಿದೆ. ಈ ಮೂಲಕ B.S.ಯಡಿಯೂರಪ್ಪ ಅವರನ್ನ ರಾಜಕೀಯವಾಗಿ ಸರ್ವನಾಶ ಮಾಡಲು 2ನೇ ಹೆಜ್ಜೆ ಇರಿಸಿದೆ ಎಂದು ಕಾಂಗ್ರೆಸ್ ರಾಜ್ಯ ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ಆರೋಪಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು