ಬಿಜೆಪಿಯಲ್ಲಿ ದೊಡ್ಡ ನಾಟಕ ನಡೆಯುತ್ತಿದೆ, ಬಿ.ಎಸ್.ಯಡಿಯೂರಪ್ಪ ಅತ್ಯಂತ ಕೆಟ್ಟ ಮುಖ್ಯಮಂತ್ರಿ: ಸಿದ್ದರಾಮಯ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನವರ ಆಡಳಿತ ಸಂಪೂರ್ಣ ವಿಫಲವಾಗಿದೆ. ಇದು ಬಿಜೆಪಿ ಹೈಕಮಾಂಡ್ ಗಮನಕ್ಕೂ ಹೋಗಿದೆ. ಆದ್ದರಿಂದ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಹೀಗಾಗಿ ಅವರು ನಾಟಕವಾಡುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾವೇನು‌ ಸರ್ಕಾರ ಬೀಳಿಸಲ್ಲ ಅವರಾಗಿ ಬಿದ್ದು ಹೋದ್ರೆ, ನಾವು ನಡೆಸೋಕೆ ರೆಡಿ. ಜೊತೆಗೆ ಮುಂದಿನ ಚುನಾವಣೆ ಎದುರಿಸೋಕೆ ನಾವು ಸಿದ್ಧರಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಗಾದಿಯಿಂದ ಬಿಎಸ್​ವೈ ತೆಗೆಯಬೇಕೆಂದು ಬಹಳ ಹಿಂದಿನಿಂದಲೂ ಯತ್ನ ನಡಿತೀದೆ. ಹೀಗಾಗಿ ಯಡಿಯೂರಪ್ಪ ಹೊಸ ದಾಳವನ್ನು ಉರುಳಿಸಿದ್ದಾರೆ. ‘ನೀ ಅತ್ತಾಂಗ್ ಮಾಡು ನಾನು ನಕ್ಕಾಂಗ್ ಮಾಡ್ತಾ ಎನ್ನುವ ಹಾಗೇ’ ತಾನು ಪ್ರಾಮಾಣಿಕನೆಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಶಾಸಕ ರೇಣುಕಾಚಾರ್ಯರನ್ನು ಮುಂದೆ ಬಿಟ್ಟು ನೋಡುತ್ತಿದ್ದಾರೆ. ಹೈಕಮಾಂಡ್ ಮನವೊಲಿಸುವುದಕ್ಕೂ ಅವರು ನೋಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇಬ್ಬರೂ ಅಧಿಕಾರಿಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ.
ಎತ್ತಿಕಟ್ಟಿ ಇಬ್ಬರ ಮಧ್ಯೆ ಗಲಾಟೆಯನ್ನು ತಂದಿಟ್ಟಿದ್ದಾರಷ್ಟೆ. ಸಿಂಧೂರಿ , ಶಿಲ್ಪಾನಾಗ್ ಇಬ್ಬರು ಅಧಿಕಾರಿಗಳ ಮೇಲೆ ಆಗಲೇ ಕ್ರಮ ತೆಗೆದುಕೊಳ್ಳಬೇಕಿತ್ತು. ರಾಜ್ಯದಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದುಹೋಗಿದೆ. ರೋಹಿಣಿ ಸಿಂಧೂರಿ ಭೂ ಹಗರಣದ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು