ಬೆಂಗಳೂರು(22-02-2020): ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ದೆಹಲಿ ವರಿಷ್ಠರಿಗೆ ಬಿಎಸ್ ವೈ ಮತ್ತು ಟೀಂ ಪತ್ರ ಬರೆದಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂಲಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿರುವ ಸಿಎಂ, ಈ ಕುರಿತು ಸುದೀರ್ಘ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಯತ್ನಾಳ್ ಭಾಷಣದ ವಿಡಿಯೋ ಮತ್ತು ಸುದ್ದಿಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಯತ್ನಾಳ್ ಗೆ ದೆಹಲಿಗೆ ತೆರಳುವಂತೆ ಸೂಚನೆ ನೀಡಿದ್ದರು. ಆದರೆ ಜೆ.ಪಿ.ನಡ್ಡಾಗೆ ಯತ್ನಾಳ್ 2 ದಿನಗಳ ಸಮಯಾವಕಾಶವನ್ನು ಕೇಳಿದ್ದರು. ಇದಕ್ಕೆ ಒಪ್ಪದ ನಡ್ಡಾ, ತಕ್ಷಣ ತೆರಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಗೆ ನಡ್ಡಾ ತೆರಳಿದ್ದಾರೆ.