ಸೇಡಂ(04-10-2020): ಉತ್ತರ ಪ್ರದೇಶದಲ್ಲಿ ನಡೆದ ಮನೀಷಳ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಯೋಗಿ ಆದಿತ್ಯನಾಥ್ನ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಸೇಡಂ BSP ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ವೇಳೆ ಬಂಧಿತ ಆರೋಪಿಗಳನ್ನು ಗಲ್ಲಿಗೇರಿಸಬೇಕು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಬೇಕು ಎಂದು ಒತ್ತಾಯಿಸಿ ಸೇಡಂ ಸಹಾಯಕ ಆಯುಕ್ತರು ಮೂಲಕ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ BSP ತಾಲೂಕು ಅಧ್ಯಕ್ಷರು ರೇವಣ ಸಿದ್ದ ಸಿಂಧೆ, ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾದೇವಪ್ಪ, ಗೋಪಾಲ ಎಲ್ ಮೌರ್ಯ, ಆನಂದ್ ಮಾಹಾದೇವಪ್ಪ ಕೊಡ್ಲ, ತಾಲೂಕು ಸಮಿತಿಯ ಫದಾದಿಕಾರಿಗಳು ಭಾಗವಹಿಸಿದ್ದರು.