ಹಲಗೂರು: ಬಿಎಸ್ಪಿ ವತಿಯಿಂದ ಪ್ರತಿಭಟನೆ

bsp protest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹಲಗೂರು(30-10-2020): ಹಲಗೂರು ತಾಲೂಕಿನ ನಿಟ್ಟೂರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿನ ನೂತನ ಷೇರುದಾರ ಸದಸ್ಯರಿಗೆ ಸಾಲ ಸೌಲಭ್ಯ, ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಗಳನ್ನು ಹಾಗೂ ಹಲವಾರು ಬೇಡಿಕೆಗಳನ್ನು ಮತ್ತು ಸೇವ ಸೌಲಭ್ಯಗಳನ್ನು ವಿತರಿಸಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನೆ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಬಹುಜನ ಸಮಾಜ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಹ.ನಾ ವೀರಭದ್ರಯ್ಯನವರು  ಕಳೆದ ಹಲವು ವರ್ಷಗಳಿಂದಲೂ ವಾರ್ಷಿಕ ಲೆಕ್ಕ ಪರಿಶೋಧನೆ ಮಾಡದೆ ವಿಳಂಬ ನೀತಿಯಿಂದಾಗಿ ನೂತನ ಷೇರುದಾರರಿಗೆ ಸಾಲ ಸೌಲಭ್ಯ, ಹಾಗೂ ಇನ್ನಿತರ ಸೇವ ಸೌಲಭ್ಯ  ನೀಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಹಾಗೂ ರಾಜಕೀಯ  ಪಕ್ಷಗಳ ಬಣ ರಾಜಕೀಯ ಮತ್ತು ಆಂತರಿಕ ಕಚ್ಚಾಟದಿಂದ ನಿಟ್ಟೂರು ವ್ಯವಸಾಯ ಸಹಕಾರ ಸಂಘವು ಪಟ್ಟಭದ್ರರ ಕಪಿಮುಷ್ಠಿಯಲ್ಲಿ ಸಿಲುಕಿ ಅಭಿವೃದ್ಧಿ ಕಾಣದೆ ನಲಗುತ್ತಿದೆ ಇದರಿಂದ  ಈ ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಷೇರುದಾರರಿಗೆ  ಸಹಕಾರ ಸಂಘದ ಸಾಲ ಸೌಲಭ್ಯ ಹಾಗೂ ಇನ್ನಿತರೆ ಸೌಲಭ್ಯಗಳು ಸಕಾಲಕ್ಕೆ ಸಿಗದೆ ವಂಚಿತರಾಗಿದ್ದಾರೆ. ಇದಕ್ಕೆ ಪರಿಹಾರವಾಗಿ ಪ್ರತಿ ವರ್ಷ ವಾರ್ಷಿಕ ಮಹಾಸಭೆ  ಹಾಗೂ ಲೆಕ್ಕಪರಿಶೋಧನೆಯನ್ನು

ನಡೆಸಬೇಕು, ಷೇರುದಾರರಿಗೆ ಸಕಾಲಕ್ಕೆ ಸಾಲ ಸೌಲಭ್ಯ ದೊರೆಯುವಂತಾಗಬೇಕು, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನ ವಿತರಣೆ ಮಾಡಬೇಕು,  ಖಾಯಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸ ಬೇಕು, ಸಹಕಾರ ಸಂಘದ ಮೂಲ ಆಶಯಕ್ಕೆ ಧಕ್ಕೆ ತರಬಾರದು. ಸಹಕಾರ ಸಂಘದಲ್ಲಿ ಯಾವುದೇ ಗುಂಪುರಿಗಾರಿಕೆ,ಪುಡಿ ರಾಜಕೀಯ ಮಾಡದೆ  ಹಾಗೂ ಜಾತಿ ತಾರತಮ್ಯ ಮಾಡದೆ ಸೇವಾ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ವ್ಯವಸಾಯಸೇವ ಸಹಕಾರ ಸಂಘದ ಪ್ರಭಾರ ಕಾರ್ಯ ನಿರ್ವಾಹಕರಾದ ಈರಪ್ಪರವರ ಮುಖಾಂತರ ಮೇಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.

ಮನವಿ ಪತ್ರ ಸ್ವಿಕರಿಸಿ ಮಾತಾನಾಡಿದ  ಈರಪ್ಪನವರು ಇನ್ನೂ ಹದಿನೈದು ದಿನಗಳ ಒಳಗಾಗಿ ಸಾಲ ಸೌಲಭ್ಯ ನೀಡಲು ಒಪ್ಪಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅದ್ಯಕ್ಷ ಕಮಲ್ ನಾಸೀರ್ ಷರೀಫ್, ಜಿಲ್ಲಾ ಕಾರ್ಯದರ್ಶಿ ಎಚ್.ಎನ್.ವೀರಭದ್ರಯ್ಯ, ಹಿಂದುಳಿದ ವರ್ಗದ ಅದ್ಯಕ್ಷ ನಾಗೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್.ಎಸ್.ಮೌರ್ಯ,ಕುಂತೂರ್ ಗೋವಿಂದ ರಾಜ್,ಗಿರೀಶ್, ಸರ್ವೋತ್ತಮ್, ಅಸಾದುಲ್ಲಾ,ದೌಲತ್ ಪಾಷಾ,ಸಿದ್ದರಾಜು,ರವಿ, ಇರ್ಫಾನ್, ಮಂಜುನಾಥ್ ,ಆನಂದ್ ಕುಮಾರ್, ತಮ್ಮಯ್ಯ, ರಾಜು ಸೇರಿದಂತೆ ಹಲವರು ಇದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು