ಬಿಎಸ್ಪಿ ಅಧ್ಯಕ್ಷೆ ಮಾಯಾವತಿಗೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾಗುವಂತೆ ಆಹ್ವಾನಿಸಿದ ಅಠವಲೆ

mayavathi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(28-02-2021): ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಮತ್ತು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರಿಗೆ ಪಕ್ಷಕ್ಕೆ ಬರುವಂತೆ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮದಾಸ್ ಅಠವಲೆ ಅವರು ಆಹ್ವಾನಿಸಿದ್ದಾರೆ.

ಚಂದ್ರಶೇಖರ್ ಆಜಾದ್ ನನ್ನ ಪಕ್ಷಕ್ಕೆ ಬಂದರೆ ಅವರಿಗೆ ದೊಡ್ಡ ಹುದ್ದೆ ನೀಡಲಾಗುವುದು ಮತ್ತು ಮಾಯಾವತಿ ಅವರು ಆರ್‌ಪಿಐಗೆ ಬಂದರೆ ಅವರಿಗೆ ಅಧ್ಯಕ್ಷ ಹುದ್ದೆಯನ್ನು ನೀಡುವ ಮೂಲಕ ನಾನೇ ಸ್ವತಃ ಉಪಾಧ್ಯಕ್ಷನಾಗುತ್ತೇನೆ ಎಂದು ಅವರು ಹೇಳಿದ್ದಾರೆ.

ಏಕೆ ಈ ನಿರ್ಧಾರ ಎಂದು ವರದಿಗಾರರು ಕೇಳಿದಾಗ, ಏಕೆಂದರೆ ಇದು ಡಾ.ಭೀಮ್ ರಾವ್ ಅಂಬೇಡ್ಕರ್ ಅವರ ಪಕ್ಷ ಎಂದರು. ಉತ್ತರ ಪ್ರದೇಶದ ಜನರು ಬಿಎಸ್ಪಿ ಮೇಲೆ ಕೋಪಗೊಳ್ಳುತ್ತಿದ್ದಾರೆ ಮತ್ತು ಜನರು ಆರ್ ಪಿ ಐ ಕಡೆಗೆ ಬರುತ್ತಿದ್ದಾರೆ ಎಂದು ಹೇಳಿದರು.

ರೈತ ಚಳವಳಿಯ ಬಗ್ಗೆ ಮಾತನಾಡಿದ ಅವರು, ಒಂದೇ ಒಂದು ಕಾನೂನನ್ನು ಸಹ ಹಿಂತೆಗೆದುಕೊಂಡರೆ, ಸಂಸತ್ತಿನಲ್ಲಿ ಪ್ರತಿಯೊಂದು ಕಾನೂನನ್ನು ಹಿಂತೆಗೆದುಕೊಳ್ಳುವ ಒತ್ತಡ ಹೆಚ್ಚಾಗುತ್ತದೆ ಎಂದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು