ಗುರುಮಟಕಲ್(10-10-2020): ಬಹುಜನ ಸಮಾಜ ಪಾರ್ಟಿಯ ಸಂಸ್ಥಾಪಕರು ಹಾಗೂ ಬಹುಜನ ನಾಯಕರಾದ ಮಾನ್ಯವರ್ ದಾದಸಾಹೇಬ್ ಕಾನ್ಸಿರಾಮ ಜೀ ರವರ ಪರಿನಿಬ್ಬಾಣ ಕಾರ್ಯಕ್ರಮವನ್ನು ಗುರುಮಟಕಲ್ ಐಬಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸುರವರ ನೇತೃತ್ವದಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮೂರು ಪಕ್ಷಗಳಿಂದ ಒಬಿಸಿ ಸಮಾಜದ 50 ಕಾರ್ಯಕರ್ತರು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ,ಸೆಟ್ಟರ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.