ಫೇಕ್ ಸುದ್ದಿ ಪ್ರಕರಣ: ಕತರ್ ಏರ್‌ವೇಸ್ ಪರವಾಗಿ ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಂಡನ್(8-11-2020): ಸೌದಿ ಅರೇಬಿಯಾದ ಒಡೆತನದಲ್ಲಿರುವ ‘ಅಲ್-ಅರೇಬಿಯಾ’ ಚಾನಲ್ ಪ್ರಸಾರ ಮಾಡಿದ ಸುಳ್ಳು ಸುದ್ದಿ ಪ್ರಕರಣದಲ್ಲಿ ಕತರ್ ಏರ್‌ವೇಸ್ ಪರವಾಗಿ ತೀರ್ಪು ಬಂದಿದೆ. ಬ್ರಿಟನಿನಲ್ಲಿರುವ ಅಂತರಾಷ್ಟ್ರೀಯ ನ್ಯಾಯಲಯವು ಈ ತೀರ್ಪು ನೀಡಿರುವುದು.

2017 ರ ಅಗಸ್ಟ್ ತಿಂಗಳಲ್ಲಿ ಸೌದಿ ಅರೇಬಿಯಾದ ‘ಅಲ್-ಅರೇಬಿಯಾ’ ನ್ಯೂಸ್ ಚಾನಲ್ ಕತರ್ ಏರ್‌ವೇಸಿನ ಪ್ರಯಾಣಿಕ ವಿಮಾನವನ್ನು ಯುದ್ಧ ವಿಮಾನವೊಂದು ಹೊಡೆದು ಉರುಳಿಸುವಂತಹ ಸುಳ್ಳು ದೃಶ್ಯವನ್ನು ಪ್ರಸಾರ ಮಾಡಿತ್ತು. ಇದು ‘ಅಲ್ ಅರೇಬಿಯಾ’ ಕತರ್ ಏರ್‌ವೇಸಿಗೆ ನೀಡಿದ ಮುನ್ಸೂಚನೆಯಾಗಿರಬಹುದೆಂದು ಬ್ರಿಟನ್ನಿನ ಡೈಲಿ ಮೇಲ್ ಕೂಡಾ ಅಂದು ವರದಿಯಲ್ಲಿ ಹೇಳಿತ್ತು.

ಬಳಿಕ ನಡೆದ ಬೆಳವಣಿಗೆಯಲ್ಲಿ ಕತರ್ ಏರ್‌ವೇಸ್ ವಿಮಾನಯಾನ ಸಂಸ್ಥೆಯು “ಅಲ್-ಅರೇಬಿಯಾ” ಚಾನಲ್ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿತು ಮತ್ತು ಪ್ರಯಾಣಿಕರನ್ನು ತನ್ನಿಂದ ದೂರಗೊಳಿಸಲು, ತನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರವೆಂದು ವಾದಿಸಿತು.

ಎರಡೂ ಕಡೆಯ ವಾದಗಳನ್ನು ಪರಿಶೀಲಿಸಿದ ಕೋರ್ಟ್, ‘ಅಲ್-ಅರೇಬಿಯಾ’ ಚಾನಲಿನ ನಡೆಯನ್ನು, ‘ಕತರ್ ಏರ್‌ವೇಸ್ ಹೆಸರಿಗೆ ಕಳಂಕ ತರುವ ಉದ್ದೇಶವನ್ನು ಹೊಂದಿದೆ’ ಎಂದು ಬಣ್ಣಿಸಿದೆ. ಜೊತೆಗೆ ಪ್ರಕರಣವನ್ನು ದುಬೈ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂಬ ‘ಅಲ್-ಅರೇಬಿಯಾ’ದ ಮನವಿಯನ್ನು ತಿರಸ್ಕರಿಸಿ, ಯುಎಇಯ ಕತರ್ ವಿರೋಧೀ ನಡೆಯನ್ನು ಬೊಟ್ಟು ಮಾಡಿ, ಈ ಪರಿಸ್ಥಿತಿಯಲ್ಲಿ ಪ್ರಕರಣವನ್ನು ದುಬೈ ನ್ಯಾಯಾಲಯಕ್ಕೆ ವರ್ಗಾಯಿಸುವುದು ಅಸಮಂಜಸವೆಂದು ಹೇಳಿದೆ.

ಕೋರ್ಟ್ ತೀರ್ಪನ್ನು ಕತರ್ ಏರ್‌ವೇಸ್ ಸ್ವಾಗತಿಸಿದೆ ಮತ್ತು ನ್ಯಾಯ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು