ಜನರಲ್ ಬಿಪಿನ್ ರಾವತ್ ಸಾವಿಗೆ ಕಾರಣ ಯಾರು? ಕೊನೆಗೂ ರಹಸ್ಯ ಬಯಲಾಯಿತು!!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ:ಡಿಸೆಂಬರ್ 8 ರಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮತ್ತು ಇತರ 12 ಮಿಲಿಟರಿ ಸಿಬ್ಬಂದಿಯ ಜೀವವನ್ನು ಬಲಿತೆಗೆದುಕೊಂಡ Mi-17 V5 ಅಪಘಾತದ ಕಾರಣವನ್ನು ತನಿಖೆ ಮಾಡಲು ರಚಿಸಲಾದ ತ್ರಿ-ಸೇವಾ ತನಿಖಾತಂಡವು ಯಾಂತ್ರಿಕ ವೈಫಲ್ಯವನ್ನು ತಳ್ಳಿಹಾಕಿದೆ ಮತ್ತು ಪೈಲಟ್ ದೋಷವೇ ಅಪಘತಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ತನಿಖಾದಳವು ತನ್ನ ಪ್ರಾಥಮಿಕ ಸಂಶೋಧನೆಗಳನ್ನು ಕಳೆದ ವಾರ ರಕ್ಷಣಾ ಸಚಿವರಿಗೆ ಸಲ್ಲಿಸಿತ್ತು. ತನಿಖೆಯು ಅಪಘಾತಕ್ಕೆ ಯಾಂತ್ರಿಕ ವೈಫಲ್ಯ, ವಿಧ್ವಂಸಕ ಅಥವಾ ನಿರ್ಲಕ್ಷ್ಯದ ಕಾರಣವನ್ನು ತಳ್ಳಿಹಾಕಿದೆ. ಭಾರತೀಯ ವಾಯುಪಡೆಯ ಹೇಳಿಕೆಯ ಪ್ರಕಾರ, ಕಣಿವೆಯಲ್ಲಿನ ಹವಾಮಾನ ಪರಿಸ್ಥಿತಿಗಳ ಅನಿರೀಕ್ಷಿತ ಬದಲಾವಣೆಯೇ ದುರದೃಷ್ಟಕರ ಅಪಘಾತಕ್ಕೆ ಕಾರಣವಾಗಿದೆ.ಮೋಡ ಕವಿದ ವಾತಾವರಣಕ್ಕೆ ಕಾಪ್ಟರ್​ ಪ್ರವೇಶಿಸುತ್ತಿದ್ದಂತೆ ಕಣಿವೆಯಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಯಾಗಿತ್ತು, ಇದರಿಂದ ಪೈಲಟ್​ ದಿಗ್ಭ್ರಾಂತಗೊಂಡಿದ್ದಾರೆ. ದಾರಿ ಸ್ಪಷ್ಟವಾಗಿ ಗೋಚರಿಸದೇ ಭಯಭೀತರಾದ ಹೆಲಿಕಾಪ್ಟರನ್ನು ಭೂಪ್ರದೇಶಕ್ಕೆ ನುಗ್ಗಿಸಿದಾಗ ಪತನ ಸಂಭವಿಸಿದೆ ಎಂದು ಸೇನಾಧಿಕಾರಿಗಳು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು